Thursday, 12th December 2024

ಉ.ಕರ್ನಾಟಕಕ್ಕೆ ನ್ಯಾಯ ಕೊಡುವವರೆಗೆ ಪಕ್ಷದ ಶಾಸಕಾಂಗ ಸಭೆಗೆ ಹಾಜರಾಗಲ್ಲ: ಬಸನಗೌಡ ಯತ್ನಾಳ್

Yatnal

ಬೆಳಗಾವಿ: ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವವರೆಗೆ ಪಕ್ಷದ ಶಾಸಕಾಂಗ ಸಭೆಗೆ ಹಾಜರಾಗುವುದಿಲ್ಲ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ತಿಳಿಸಿದ್ದಾರೆ.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ಭಾಗದವರಿಗೆ ನಾಯಕತ್ವ ನೀಡಿಲ್ಲ. ನಾವು ದ.ಕರ್ನಾಟಕ ಭಾಗದ ನಾಯಕರ ಗುಲಾಮರಲ್ಲ ಎಂದು ಅಸಮಾಧಾನ ಹೊರಹಾಕಿದರು. ದೇಶಕ್ಕೆ ನರೇಂದ್ರ ಮೋದಿಯೇ ಗ್ಯಾರಂಟಿ ಇರುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಿಕ್ಕಿದೆ. ಈ ಗೆಲುವಿಗೆ ಕಾರಣ ಹಿಂದುತ್ವ, ಅಭಿವೃದ್ಧಿ, ಹೊಂದಾಣಿಕೆ ಇಲ್ಲದ ರಾಜಕಾರಣ. ಕುಟುಂಬ ರಾಜಕಾರಣವನ್ನು ತೆಲಂಗಾಣದಲ್ಲಿ ಕಿತ್ತು ಹಾಕಲಾಗಿದೆ. ಇಡೀ ದೇಶದಲ್ಲೂ ಕುಟುಂಬ ರಾಜಕಾರಣವನ್ನು ಕಿತ್ತು ಹಾಕಲಾಗುವುದು ಎಂದು ಪರೋಕ್ಷವಾಗಿ ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟರು.

ಪ್ರಾಮಾಣಿಕರು, ಹಿಂದೂ ವಿಚಾರಧಾರೆ ಹೊಂದಿರುವವರು ಆಡಳಿತ ನಡೆಸಬೇಕು. ವಂಶವಾದದ ನಿರ್ಮೂಲನೆಯೇ ನಮ್ಮ ಗುರಿ. ಇನ್ಮೇಲೆ ಬದಲಾವಣೆ ಆಗಲಿದೆ. ಲೋಕಸಭೆ ಚುನಾವಣೆ ಮುಗಿಯಲಿ, ಬದಲಾವಣೆ ಬರುತ್ತದೆ ಎಂದರು.