Sunday, 15th December 2024

ವೀರಶೈವ ಲಿಂಗಾಯಿತರನ್ನು ಓಬಿಸಿಗೆ ಸೇರಿಸಲು ಕೇಂದ್ರಕ್ಕೆ ಆಗ್ರಹ

ತುಮಕೂರು: ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಉಪಪಂಗಡಗಳನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಬೇಕೆಂದು ಆಗ್ರಹಿಸಿ ಸೋಮವಾರ ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾದ ವತಿ ಯಿಂದ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವಿವಿಧ ಮಠಗಳ ಸ್ವಾಮೀಜಿಗಳ ನೇತೃತ್ವದಲ್ಲಿ ನಂದಿ ಧ್ವಜ, ವೀರಗಾಸೆ ಕಲಾ ಪ್ರರ‍್ಶನದ ಜೊತೆಗೆ,ಸಾವಿರಾರು ಸಂಖ್ಯೆಯಲ್ಲಿದ್ದ ಲಿಂಗಾಯಿತ,ವೀರಶೈವ ಸಮುದಾಯದ ಮುಖಂಡರುಗಳು ನಗರದ ಟೌನ್ಹಾಲ್ ವೃತ್ತದಿಂದ ಜಿಲ್ಲಾಧಿ ಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ,ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.

ಪ್ರತಿಭಟನಾನಿರತ ವೀರಶೈವ,ಲಿಂಗಾಯಿತ ಸಮುದಾಯದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಚಿಕ್ಕತೊಟ್ಲುಕೆರೆಯ ಶ್ರೀಅಟವಿ ಶಿವಲಿಂಗಸ್ವಾಮೀಜಿ,ಗೊಲ್ಲಹಳ್ಳಿಮಠದ ಶ್ರೀವೀಭವ ವಿದ್ಯಾಶಂಕರ ಸ್ವಾಮೀಜಿ,ಮಾಕನಹಳ್ಳಿ ಮಠದ ಶ್ರೀಗಂಗಾಧರ ಸ್ವಾಮೀಜಿ, ಬೆಳ್ಳಾವಿಯ ಶ್ರೀಕಾರದೇಶ್ವರ ಮಠದ ಶ್ರೀಕಾರದ  ವೀರಬಸವಸ್ವಾಮೀಜಿ, ಶ್ರೀರೇವಣ ಸಿದ್ದೇಶ್ವರ ಶಿವಾಚರ‍್ಯ ಸ್ವಾಮೀಜಿ, ಹರಳೂರು ಮಠದ ಶ್ರೀ ಚನ್ನಬಸವ ಸ್ವಾಮೀಜಿಗಳು, ರಾಜ್ಯ ಹಿಂದುಳಿದ ರ‍್ಗಗಳ ಜಾತಿ ಪಟ್ಟಿಯಲ್ಲಿ ವೀರಶೈವ, ಲಿಂಗಾಯಿತರು ಸೇರಿದ್ದಾರೆ.

ಆದರೆ ಕೇಂದ್ರದ ಪಟ್ಟಿಯಲ್ಲಿ ಇಲ್ಲ.ಇದರಿಂದ ಯುಪಿಎಸ್ಸಿ,ಸೇರಿದಂತೆ ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಸೇರಿದ ಉಪಪಂಗಡಗಳಿಗೆ ತೀವ್ರ ಅನ್ಯಾಯವಾಗುತ್ತಿದ್ದು,ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೂಡಲೇ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ನಮ್ಮೆಲ್ಲಾ ವೀರಶೈವ,ಲಿಂಗಾಯಿತ ಸಮುದಾಯದ ಉಪಪಂಗಡಗಳ ಒತ್ತಾಯವಾಗಿದೆ ಎಂದರು.

ಈ ವಿಚಾರವಾಗಿ ೨೦೧೯ರಲ್ಲಿ ಎರಡು ಬಾರಿ ಮತ್ತು ೨೦೨೧ರಲ್ಲಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.ಆದರೆ ಇದುವರೆಗೂ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ.ಸರಕಾರದ ಈ ವಿಳಂಬದಿಂದಾಗಿ ನಮ್ಮ ಮಕ್ಕಳ ಉನ್ನತ ಹುದ್ದೆಗಳ ಕನಸು ಈಡೇರುವ ಲಕ್ಷಣಗಳಿಲ್ಲ.ಇಂದು ಕೂಡ ನಾವು ಸರಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ.ಒಂದು ವೇಳೆ ಸರಕಾರ ಕ್ರಮ ಕೈಗೊಳ್ಳದಿದ್ದರೆ ವಿಧಾನಸೌಧ ಮುತ್ತಿಗೆಯಂತಹ ಕರ‍್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಪಾರ‍್ತಿ ಕ.ರೆಡ್ಡಿ, ಜಿಲ್ಲಾಧ್ಯಕ್ಷ ಮೋಹನ್ ಕುಮಾರ್ ಪಟೇಲ್,ಪ್ರಧಾನಕರ‍್ಯರ‍್ಶಿ ಕೆ.ಟಿ.ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷರುಗಳಾದ ಎಸ್.ಡಿ.ದಿಲೀಪ್, ಚಂದ್ರಮೌಳಿ,ಜಯರಾಂ,ಕೋಶಾಧ್ಯಕ್ಷರಾದ ಎಂ.ಬಿ.ಶೇಖರ್,ರಾಷ್ಟಿçÃಯಸಮಿತಿ ಸದಸ್ಯರಾದ ರಾಜಶೇಖರ್, ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ವೀರಶೈವ,ಲಿಂಗಾಯಿತ ಕ್ಷೇತ್ರಗಳ ಮುಖಂಡರು ಪಾಲ್ಗೊಂಡಿದ್ದರು.