Thursday, 12th December 2024

ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಶ್ರೀಹರ್ಷ, ಉಪಾಧ್ಯಕ್ಷರಾಗಿ ಕೃಷ್ಣೇಗೌಡ ಅವಿರೋಧ ಆಯ್ಕೆ

ಚಿಕ್ಕನಾಯಕನಹಳ್ಳಿ : ತಾಲ್ಲೂಕು ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ತಿಮ್ಮನ ಹಳ್ಳಿ ಶ್ರೀಹರ್ಷ, ಉಪಾಧ್ಯಕ್ಷರಾಗಿ ಪಟ್ಟಣದ ಕೃಷ್ಣೇಗೌಡ ಅವಿರೋಧವಾಗಿ ಆಯ್ಕೆಯಾ ಗಿದ್ದಾರೆ.

ಗೌರವಾಧ್ಯಕ್ಷರಾಗಿ ಮಾಜಿ ಜಿ.ಪಂ. ಸದಸ್ಯ ರಾಮಚಂದ್ರಯ್ಯ, ಕಾರ್ಯದರ್ಶಿಯಾಗಿ ಹರೀಶ್, ಖಜಾಂಚಿಯಾಗಿ ಗಿರೀಶ್, ನಿರ್ದೇಶಕರಾಗಿ ಚೇತನ್, ಮಧುಸೂಧನ್, ಚಂದನ್, ಯಶವಂತ್, ವಿಜಯಮ್ಮ, ರೇಣುಕಪ್ರಸಾದ್, ರವಿಕುಮಾರ್, ನಟರಾಜು, ನಿರಂಜನ ಮೂರ್ತಿ, ಶಂಕರಲಿ0ಗೇಗೌಡ, ರಘು, ಮಲ್ಲಿಕಣ್ಣ, ಶಿವಶಂಕರ್, ಲಿಂಗರಾಜಣ್ಣ, ನಾಗರಾಜು, ಪರಮೇಶ್, ರಾಮಯ್ಯ, ದೇವರಾಜು ಅವರನ್ನು ಆಯ್ಕೆ ಮಾಡಲಾಗಿದೆ.

ನೂತನ ಅಧ್ಯಕ್ಷ ಶ್ರೀಹರ್ಷ ಮಾತನಾಡಿ ನಮ್ಮ ಕುಲಭಾಂದವರು ನಾನು ಅಧ್ಯಕ್ಷನಾಗಲು ಸಹಕರಿಸಿದ್ದು ಸಂತೋಷ ತಂದಿದೆ. ನಿಮ್ಮೊಂದಿಗೆ ಬೆರೆತು ಸಮುದಾಯದ ಅಭಿವೃದ್ದಿಗೆ ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ. ತಾಲ್ಲೂಕು ಒಕ್ಕಲಿಗರ ಸಂಘದ ಸದಸ್ಯತ್ವ ವನ್ನು ಎಲ್ಲರೂ ಪಡೆಯಬೇಕು. ಬಡವರು ನನ್ನನ್ನು ಸಂಪರ್ಕಿಸಿದರೆ ಅವರ ಶುಲ್ಕವನ್ನು ನಾನು ಭರಿಸುತ್ತೇನೆ.

ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ, ಚುಂಚನಗಿರಿ ಶ್ರೀಗಳ ದಿವ್ಯ ಸಾನಿದ್ಯದಲ್ಲಿ ಅದ್ದೂರಿ ಸಮಾವೇಶ ಹಾಗು ಕೆಂಪೇಗೌಡ ಸಮುದಾಯ ಭವನದ ನಿರ್ಮಾಣ ನಮ್ಮ ಸಂಘದ ಕನಸಾಗಿದ್ದು ಗಂಗಟಕಾರ, ಸಲುಪರು, ಕುಂಚಟಿಗ ಹಾಗು ಹಳ್ಳಿಕಾರರು ನಾವೆಲ್ಲರೂ ಒಂದೇ ಎಂದು ಭಾವಿಸಿ ಸದಾ ಒಗ್ಗಟ್ಟಿನ ಮಂತ್ರ ಜಪಿಸಬೇಕೆಂದು ಕರೆ ನೀಡಿದರು.