ತಿಪಟೂರು : ನಾಡಿನ ಏಳಿಗೆಗಾಗಿ ಶ್ರಮಿಸಿದ ಮಹಾನ್ ಚೇತನಗಳ ವಿಚಾರಧಾರೆಯನ್ನು ಕೇವಲ ಪಠ್ಯಪುಸ್ತಕಕ್ಕೆ, ಜಯಂತಿ ಆಚರಣೆಗೆ ಸೀಮಿತವಾಗಿಸದೇ ವಿಚಾರಧಾರೆಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಕಾರ್ಯವಾಗಬೇಕಿದೆ ಎಂದು ದಸರೀಘಟ್ಟದ ಆದಿ ಚುಂಚನಗಿರಿ ಶಾಖಾಮಠದ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾಮಠದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಮಂಗಳವಾರ ನಡೆದ ನಾಡಪ್ರಭು ಕೆಂಪೇಗೌಡರ ೫೧೪ನೇ ಜಯಂತ್ಯೋ ತ್ಸವವನ್ನು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಮಾತನಾಡಿದ ಅವರು ಮಾನವ ಸಂಘ ಜೀವಿಯಾಗಿದ್ದು, ಮಾನವನ ಆಚರಣೆಗಳ ಅನ್ವಯದಲ್ಲಿ ಜಾತಿ, ಮತ, ಧರ್ಮಗಳನ್ನು ರೂಢಿಸಿಕೊಂಡಿದ್ದಾನೆ. ಅಂತಹ ಕಂದಾಚಾರದಿ0ದ ಹೊರ ಬಂದು ಎಲ್ಲಾ ಮಾನವರು ಒಂದೇ ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕಿದೆ.
ಮಹಾನ್ ಚೇತನಗಳ ವಿಚಾರಗಳನ್ನು ಪಠ್ಯದ ಮೂಲಕ ಮಕ್ಕಳಿಗೆ ತಿಳಿಸುವ ಜೊತೆಗೆ ಪಠ್ಯದ ಹೊರತಾಗಿಯೂ ಮಕ್ಕಳಿಗೆ ವಿಚಾರಗಳನ್ನು ತಿಳಿಸುವಂತಹ ಕಾರ್ಯವನ್ನು ಮಾಡುವ ಜವಾಬ್ದಾರಿ ಸಮಾಜದ ಎಲ್ಲರ ಮೇಲಿದೆ. ಸಮಾಜದಲ್ಲಿ ಜಾತಿ, ಮತ, ಧರ್ಮಗಳ ಬೇಧವನ್ನು ಮರೆತು ಎಲ್ಲರೂ ಎಲ್ಲರಿಗೂ ಗೌರವ, ಪ್ರೀತಿ, ಸಹಕಾರ ನೀಡಿ ಒಂದಾಗಿ ಬಾಳುವಂತಹ ಮನೋಭಾವ ವನ್ನು ಬೆಳೆಸಿಕೊಳ್ಳಬೇಕಿದೆ.
ಕೆಂಪೇಗೌಡರು ಸ್ಥಾಪಿಸಿದ ಬೆಂಗಳೂರು ಜಗದ್ವಿಖ್ಯಾತವಾಗಿದ್ದು, ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಇಂತಹ ಅವರ ವಿವೇಚನಾ ಯುತ ಯೋಜನೆಗೆ ವ್ಯಕ್ತಿತ್ವವೇ ಕಾರಣ. ಬೆಂಗಳೂರು ತಂತ್ರಜ್ಞಾನ, ಶಿಕ್ಷಣ ಸಂಸ್ಥೆಗಳು, ಉದ್ಯೋಗ ಕಂಪನಿಗಳು ತಲೆ ಎತ್ತಿದ್ದು ಎಷ್ಟೋ ನಿರುದ್ಯೋಗಿಗಳಿಗೆ ಕೆಲಸ ಕಲ್ಪಿಸಿವೆ. ಲಕ್ಷಾಂತರ ಮಂದಿ ಬೇದ ಭಾವವಿಲ್ಲದೆ ವಾಸಿಸುತ್ತಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ಕೆಂಪೇಗೌಡರು ಎಂದರು.
ಈ ಸಂದರ್ಭದಲ್ಲಿ ಹಾಸನದ ಜಾವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ, ಚೌಡೇಶ್ವರಿ ಪ್ರೌಢಶಾಲೆಯ ಎಚ್.ಬಿ.ಕುಮಾರ ಸ್ವಾಮಿ, ಟಿ.ರಂಗಸ್ವಾಮಿ, ಡಿ.ಲಕ್ಷಿö್ಮÃದೇವಮ್ಮ, ಎಂ.ದೇವಪಾರ್ಥ, ಗ್ರಾಮಸ್ಥರಾದ ಡಿ.ಸಿ.ಗೌಡ್ರು ಸೇರಿದಂತೆ ಮಠದ ಸಿಬ್ಬಂದಿಗಳು ಇದ್ದರು.