ಚಿಕ್ಕನಾಯಕನಹಳ್ಳಿ: ಪುರಾತನವಾದ ಮಹಂತಿಮಠದ ನಂದೀಶ್ವರನ ದೇವಾಲಯವನ್ನು ನೂತನವಾಗಿ ನಿರ್ಮಿಸಲಾಗುವುದು ಎಂದು ದೊಡ್ಡಗುಣಿ ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯಸ್ವಾಮೀಜಿ ಹೇಳಿದರು.
ಪಟ್ಟಣದ ಧರ್ಮವರ ಬೀದಿಯಲ್ಲಿರುವ ಮಂಹತಿಮಠದ ನಂದೀಶ್ವರನ ದೇಗುಲಕ್ಕೆ ಬೇಟಿ ನೀಡಿ ಮಾತನಾಡಿದರು. ವೀರಶೈವ ಮಠಗಳ ಪೈಕಿ ಮಹಂತಿ ಮಠವು ಒಂದಾಗಿದ್ದು ದೇಗುಲವು ಹಾಗಲವಾಡಿ ಸಂಸ್ಥಾನದ ಪಾಳೇಗಾರರ ಕಾಲದಲ್ಲಿ ಸ್ಥಾಪಿತವಾದುದ್ದು ಎಂದು ದೊಡ್ಡಗುಣಿ ಹಿರೇಮಠದ ಹಿರಿಯ ಲಿಂಗೈಕ್ಯ ಶ್ರೀಗಳು ಹೇಳುತ್ತಿದ್ದರು.
ಗುರುಪರಂಪರೆ ಹೊಂದಿರುವ ದೊಡ್ಡಗುಣಿ ಮಠಕ್ಕೂ ಚಿನಾಹಳ್ಳಿ ಮಹಂತಿ ಮಠಕ್ಕೂ ಅವಿನಾಭವ ಸಂಬಂಧ ಇತ್ತು ಎಂಬುದಕ್ಕೆ ನಾವೇ ಸಾಕ್ಷಿ ಎಂದರು. ಮಹಂತಿ ಮಠದ ನಂಧೀಶ್ವರನ ದೇವಾಲಯಕ್ಕೆ ಜಾತಿ ಮತ ಪಂಥ ಎಂಬ ಬೇದವಿಲ್ಲದೆ ಭಕ್ತರು ಇರುವುದು ಕಂಡುಬರುತ್ತದೆ. ಇಲ್ಲಿ ಬೇರೆ ತಾಲ್ಲೂಕಿನಲ್ಲೂ ಭಕ್ತರು ಇದ್ದಾರೆ. ಸದ್ಯ ನಂದೀಶ್ವರನ ಅನುಗ್ರದಲ್ಲಿ ನೂತನ ಕಲ್ಲಿನ ದೇವಾಲಯವನ್ನು ನಿರ್ಮಾಣ ಮಾಡಲು ಶ್ರೀ ಬಸವೇಶ್ವರ ಸೇವಾ ಟ್ರಸ್ಟ್ ಸ್ಥಾಪಿಸಿಲಾಗಿದೆ ಈ ಟ್ರಸ್ಟಿನಲ್ಲಿ ನಾವು ಗೌರವಾಧ್ಯಕ್ಷರಾಗಿ ಜವಾಬ್ದಾರಿ ಸ್ಥಾನವನ್ನ ಹೊಂದಿದ್ದೇವೆ ಎಂದರು.
ಈಗಾಗಲೆ ಟ್ರಸ್ಟಿನಲ್ಲಿ ಸಭೆಗಳನ್ನ ನೆಡೆಸಿ ತೀರ್ಮಾನಿಸಿ ಜನವರಿ ತಿಂಗಳಲ್ಲಿ ಶಿಥಿಲಗೊಂಡಿರುವ ದೇವಾಲಯದಲ್ಲಿರುವ ನಂದೀಶ್ವರನ ವಿಗ್ರಹದ ದೈವಿ ಶಕ್ತಿಯನ್ನ ಕಳಶಕ್ಕೆ ಆಕರ್ಷಣೆಗೋಳಿಸಿ ವಿಗ್ರಹವನ್ನ ಸ್ಥಳಾಂತರ ಗೊಳಿಸಲಾಗುವುದು. ನಂತರ ಹಳೇ ದೇಗುಲವನ್ನ ತೆರವುಗೊಳಿಸಿ ಪೆಬ್ರವರಿಯಲ್ಲಿ ಶುಭ ದಿವಸದಂದು ಪೂಜೆಯೊಂದಿಗೆ ನೂತನ ದೇವಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು.
ದೇಗುಲ ನಿರ್ಮಾಣ ಕಾರ್ಯಕ್ಕೆ ಸದ್ಭಕ್ತರು ತಮ್ಮ ತನುಮನ ಧನಸಹಾಯ ನೀಡಬೇಕೆಂದು ಮನವಿಮಾಡಿದರು. ಶ್ರೀ ಬಸವೇಶ್ವರ ಸೇವಾ ಟ್ರಷ್ಟಿನ ಆಢಳಿತ ಮಂಡಳಿಯ ಅಧ್ಯಕ್ಷರಾದ ಸಿ.ವೈ.ಕುಮಾರಸ್ವಾಮಿˌಪ್ರಧಾನಕಾರ್ ಯದರ್ಶಿ ಆಲದಕಟ್ಟೆ ಗುರುಮೂರ್ತಿˌಶರ್ಮ ಬಸ್ ರಾಜಣ್ಣˌಸಿ.ಮಲ್ಲಿಕಾರ್ಜುನಸ್ವಾಮಿ ಶ್ರೀಶೈಲಮಲ್ಲಿಕಾರ್ಜುನˌಆಲದಕಟ್ಟೆ ಮರುಳಸಿದ್ಧಯ್ಯˌತೀರ್ಥಪುರದ ಪ್ರಸನ್ನಕುಮಾರ್,ˌತೋಂಟಾರಾಧ್ಯˌಚರಣ್ˌ ಅರ್ಚಕ ಕರಿಬಸವಯ್ಯ ಇದ್ದರು.