ಗುಬ್ಬಿ : ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಪ್ರತಿಯೊಬ್ಬರೂ ಪಕ್ಷದ ಸಂಘಟನೆಗಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ, ಹಾಗೆಯೇ ಜೆಡಿಎಸ್ ಪಕ್ಷದವರು ಸಹ ಮಾಡುತ್ತಿದ್ದಾರೆ ಆದ್ದರಿಂದ ನನಗೆ 10 ಪಂಚ ರತ್ನ ಯಾತ್ರೆಗಳು ಬಂದು ಹೋದರು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ತೋಣಚನಹಳ್ಳಿ, ಚೇಳೂರು ಹಟ್ಟಿ, ಅಂತಾಪುರ, ಮಲಮಾಚನ ಕುಂಟೆ, ದಾಸಪ್ಪನಹಳ್ಳಿ ಗ್ರಾಮಗಳಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ 4 ಕೋಟಿ 5 ಲಕ್ಷ ರೂಗಳ ಮನೆ ಮನೆ ನಳ ಸಂಪರ್ಕ ಹಾಗೂ ಚೆಕ್ ಡ್ಯಾಮ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಪಂಚರತ್ನ ಯಾತ್ರೆಯ ಕಾರ್ಯಕರ್ತರೇ ಬೇರೆ ನನ್ನ ಮತದಾರರೇ ಬೇರೆ ನಾನು ನಿರಾಳವಾಗಿದ್ದೇನೆ.
ಚುನಾವಣೆ ಬಂದಾಗ ಎಲ್ಲರೂ ಮಾಡುವುದು ಸಹಜ ಹಾಗಾಗಿ ತಾಲೂಕಿ ನಲ್ಲಿ ಎಷ್ಟೇ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದರು ಜಾತಿ ಮತ ಭೇದವಿಲ್ಲದೆ ಮತದಾರರ ಆಶೀರ್ವಾದ ನನ್ನ ಮೇಲೆ ಇರುತ್ತದೆ ಪ್ರತಿ ಚುನಾವಣೆಯಂತೆ ಈ ಚುನಾವಣೆಯಲ್ಲಿಯೂ ಸಹ ಮಾಮೂಲಿನಂತೆ ನಡೆಯುತ್ತದೆ ಮತದಾರರು ಬುದ್ಧಿವಂತರು ಯಾರಿಗೆ ಮತ ಹಾಕಬೇಕೆಂಬುದನ್ನು ತೀರ್ಮಾನಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಿದವರನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳುತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷ ಸಿದ್ದರಾಜು, ಗುತ್ತಿಗೆದಾರ ಸತೀಶ್, ಪಿಡಿಒ ಮಂಜುಳಾ, ಗ್ರಾಮ ಪಂಚಾಯಿತಿ ಸದಸ್ಯರಾದ ತಿಮ್ಮೇಗೌಡ,ಬಿ. ಡಿ ರಾಜಣ್ಣ, ಹನುಮಂತಯ್ಯ, ತಾರಾ ಸಿದ್ದರಾಜು, ಪುಟ್ಟಮ್ಮ ಲಕ್ಕಣ್ಣ, ಮಮತಾ ಬೊಮ್ಮಣ್ಣ, ಮುಖಂಡರಾದ ಮಾಜಿ ಗ್ರಾ. ಪಂ. ಸದಸ್ಯ ಸಿ.ರಮೇಶ್, ದಲಿತ ಮುಖಂಡ ಚೇಳೂರು ಶಿವನಂಜಪ್ಪ, ರಾಮಕೃಷ್ಣಪ್ಪ, ಶಂಕರಪ್ಪ, ರಂಗಪ್ಪ, ಗಂಗಣ್ಣ, ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.