ತುಮಕೂರು : ಗ್ರಾಮಾಂತರ ಕ್ಷೇತ್ರದಲ್ಲಿ ಡಿ. ೨೯ ರಂದು ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಆಗಮಿಸಲಿದ್ದು ಯಾತ್ರೆ ಸಾಗುವ ಮಾರ್ಗದಲ್ಲಿ ಸಿಂಗಾರ ಮಾಡಲಾಗಿದೆ. ಜಿಲ್ಲೆಯ ಕೊನೆಯ ರಥಯಾತ್ರೆ ಆಗಿದ್ದು ಶಾಸಕ ಡಿ.ಸಿ. ಗೌರಿಶಂಕರ ಪಂಚರತ್ನ ರಥ ಯಾತ್ರೆಯನ್ನು ಯಶಸ್ವಿಗೊಳಿಸಲು ಸಕಲ ಸಿದ್ದತೆ ಕೈಗೊಂಡಿದ್ದಾರೆ.
ಹೆಬ್ಬೂರು, ಬಳ್ಳಗೆರೆ, ನಾಗವಲ್ಲಿ ಮಾರ್ಗದಲ್ಲಿ ಸಾಗಿ, ಹೊನ್ನುಡಿಕೆ, ಗೂಳೂರು, ಊರ್ಡಿಗೆರೆ, ಬೆಳಗುಂಬ ಮಾರ್ಗವಾಗಿ ಸಾಗಿ ಯಲ್ಲಾಪುರದಲ್ಲಿ ಗ್ರಾಮ ವಾಸ್ತöವ್ಯ ಮಾಡುವ ಮೂಲಕ ರಥಯಾತ್ರೆಯನ್ನು ಅಂತಿಮಗೊಳಿಸಿದ್ದಾರೆ.
ಪಂಚರತ್ನ ರಥ ಯಾತ್ರೆಯಿಂದಾಗಿ ಜೆಡಿಎಸ್‌ನ ಶಕ್ತಿ ಹೆಚ್ಚಿದೆ. ಹೆಚ್.ಡಿ.ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.