Thursday, 18th July 2024

ಪಂಚರತ್ನ ಯೋಜನೆಯ ಜಾರಿಗೆ ದೇವರು ಸಕಲ ಶಕ್ತಿ ನೀಡಲಿ

ಮಧುಗಿರಿ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ರಾಜ್ಯದ ಬಡವರ ಬಗ್ಗೆ ಅಪಾರ ಕಾಳಜಿಯಿದ್ದು ಅದರಂತೆ ಪಕ್ಷದ ಪ್ರಣಾಳಿಕೆಯಲ್ಲಿರುವ ಪಂಚರತ್ನ ಯೋಜ ನೆಯ ಜಾರಿಗೆ ದೇವರು ಸಕಲ ಶಕ್ತಿ ನೀಡುವಂತೆ ಪುರಸಭೆ ಅಧ್ಯಕ್ಷ ತಿಮ್ಮರಾಯಪ್ಪ ತಿಳಿಸಿ ದರು.

ಪಟ್ಟಣದ ಸಾಯಿ ವೃದ್ಧಾಶ್ರಮ, ವಿಶೇಷ ಚೇತನ ಮಕ್ಕಳಿಗೆ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿಯವರ ೬೩ನೇ ಹುಟ್ಟು ಹಬ್ಬದ ಅಂಗವಾಗಿ ಹಣ್ಣು ಬ್ರೆಡ್ ವಿತರಿಸಿ ಮಾತನಾಡಿದ ಅವರು, ರಾಜ್ಯದ ಬಡವರ ಕಷ್ಟಗಳಿಗಾಗಿ ಪಂಚರತ್ನ ಯೋಜನೆಯನ್ನು ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ತರಲಾಗಿದೆ. ಇದು ಜಾರಿಯಾಗಲು ೨೦೨೩ರಲ್ಲಿ ಮುಖ್ಯಮಂತ್ರಿಯಾಗಬೇಕಿದೆ ಅವರಿಗೆ ದೇವರು ಅಂತಹ ಶಕ್ತಿಯನ್ನು ನೀಡುವಂತೆ ಪ್ರಾರ್ಥಿಸಿದ್ದೇವೆ ಎಂದರು.

ಸದಸ್ಯ ಎಂ.ಆರ್.ಜಗನಾಥ್ ಮಾತನಾಡಿ, ಕುಮಾರಸ್ವಾಮಿಯವರ ಹುಟ್ಟುಹಬ್ಬವನ್ನು ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಅಚರಿಸುತ್ತಿದ್ದು ಮುಂದಿನ ಮುಖ್ಯಮಂತ್ರಿಗೆ ದೇವರು ಬಡವರ ಪರವಾದ ಕೆಲಸ ಮಾಡಲು ಎಲ್ಲ ರೀತಿಯ ವಾತವರಣವನ್ನು ಕಲ್ಪಿಸಿಕೊಡಲಿ ಎಂದು ತಿಳಿಸಿದರು.

ಮುಖಂಡ ಬಿಜವರ ಶ್ರೀನಿವಾಸ್ ಮಾತನಾಡಿ, ಉಚಿತ ಆರೋಗ್ಯ ಹಾಗೂ ಶಿಕ್ಷಣದ ಕನಸು ಕಾಣುತ್ತಿರುವ ಜನತೆಯ ಬದುಕು ಹಸನಾಗಲು ಕುಮಾರಸ್ವಾಮಿ ಮತ್ತೆ ಸಿಎಂ ಆಗಬೇಕು ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ತುಂಗೋಟಿ ರಾಮಣ ಪುರಸಭೆ ಸದಸ್ಯರಾದ ಚಂದ್ರಶೇಖರ್ ಬಾಬು, ಕೆ.ನಾರಾಯಣ್, ತಾಪಂ, ಮಾಜಿ ಸದಸ್ಯರಾದ ನಾಗರಾಜು, ಹರೀಶ್, ಶಫೀ ಅಹಮದ್, ಚೌಡಪ್ಪ, ಪ್ರಭು, ಮಂಜುನಾಥ್, ಶಿವಪ್ಪ ನಾಯಕ, ಕನ್ನಡ ಪರ ಸಂಘಟನೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ತಿಮ್ಮರಾಜು, ಮೋಹನ್, ಗೋವಿಂದರಾಜು, ಸಿದ್ದೇಶ್, ಸಲ್ಮಾನ್, ಹಾಗೂ ದೇವರಾಜು ಮುಂತಾದವರು ಇದ್ದರು.

error: Content is protected !!