Sunday, 15th December 2024

ಜೂ.೧೪ ರಂದು ೪೨ ಕಲಾ ತಂಡಗಳೊ೦ದಿಗೆ ಭವ್ಯ ಮೆರವಣಿಗೆ

ಜೂ ೧೩,೧೪,೧೫ ಮುನ್ನೂರು ಕಾಪು ಸಮಾಜದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ

ರಾಯಚೂರು: ಕೋವಿಡ್-೧೯ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ನಂತರ ಮುನ್ನೂರು ಕಾಪು ಸಮಾಜದಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಇದೇ ತಿಂಗಳು ದಿ ೧೩,೧೪,೧೫ ರಂದು ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದು ಹಬ್ಬದ ರೂವಾರಿ, ಮುನ್ನೂರು ಕಾಪು ಶಿಕ್ಷಣ ಸಂಸ್ಥೆ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎ.ಪಾಪಾರೆಡ್ಡಿ ಅವರು ಹೇಳಿದರು.

ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ.ಮುನ್ನೂರು ಕಾಪು ಸಮಾಜ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ವನ್ನು ಅತ್ಯಂತ ಅದ್ದೂರಿಯಿಂದ ಆಚರಿಸಿಕೊಂಡು ಬಂದಿದೆ.ಕಳೆದ ಎರಡು ವರ್ಷಗಳ ಕಾಲ ಕೊವಿಡ್-೧೯ ಹಿನ್ನೆಲೆಯಲ್ಲಿ
ಹಬ್ಬ ಆಚರಣೆಗೆ ಅಡ್ಡಿಯಾಗಿತ್ತು.ವರ್ಷಗಳ ನಂತರ ಮತ್ತೆ ಗತ ವೈಭವದ ಮಾದರಿ ಈ ವರ್ಷ ಹಬ್ಬ ಆಚರಿಸಲಾಗುತ್ತಿದೆ.

ಈ ಹಿಂದಿಗಿ0ತಲು ಅದ್ದೂರಿಯಾಗಿ ಹಬ್ಬ ಆಚರಣೆಗೆ ಸಿದ್ದತೆ ನಡೆದಿದೆ.ಒಟ್ಟು ೫೦ ರಿಂದ ೬೦ ಲಕ್ಷ ರೂ ವೆಚ್ಚದಲ್ಲಿ ಈ ಹಬ್ಬ ಆಚರಿಸಲಾಗುತ್ತಿದೆ. ಮೂರು ದಿನಗಳ ಕಾಲ ಎತ್ತುಗಳ ಭಾರದ ಕಲ್ಲು ಎಳೆಯುವ ಸ್ಪರ್ಧೆ.ನೃತ್ಯ, ಕೈ ಕಲ್ಲು ಎತ್ತುವ ಮತ್ತು ಪೈಲ್ವಾನ್ ಕುಸ್ತಿ ನಡೆಸಲಾಗುತ್ತದೆ.ದಿ ೧೪ ರಂದು ಮುಂಗಾರು ಹಬ್ಬದ ಭವ್ಯ ಮೆರವಣಿಗೆ ನಡೆಸಲಾಗುತ್ತದೆ. ಉದ್ದೇಶಿತ ಕಾರ್ಯಕ್ರಮಕ್ಕೆ ಸಮಾಜದ ಬಾಂಧವರು ೪೦ ಲಕ್ಷರು ದೇಣಿಗೆ ನೀಡಿದ್ದಾರೆ.

ಉಳಿದಂತೆ ಹಟ್ಟಿ,ನಗರಸಭೆ ಮತ್ತು ಎಪಿಎಂಸಿಗಳಿ0ದ ಆರ್ಥಿಕ ನೆರವು ನಿರೀಕ್ಷಿಸಲಾಗುತ್ತಿದೆ.ರಾಯಚೂರಿನಲ್ಲಿ ನಡೆಯುವ ಈ ಕಾರ್ಯಕ್ರಮ ರಾಜ್ಯದಲ್ಲಿ ಬೇರೆಲ್ಲು ನಡೆಯದಷ್ಟು ಅದ್ದೂರಿಯಾಗಿ ನಡೆಸಲಾಗುತ್ತದೆ.ಜೂನ್ ೧೩ ರಂದು ಕೊಪ್ಪಳ ಜಿಲ್ಲಾ ಉಸ್ತವಾರಿ ಸಚಿವರಾದ ಹಾಲಪ್ಪ ಆಚಾರ ಅವರಿಂದ ಕಾರ್ಯಕ್ರಮ ಉದ್ಘಾಟಿಸಲಾಗುತ್ತದೆ. ಪ್ರಥಮ ದಿನ ಕರ್ನಾಟಕ ಎತ್ತುಗಳ ಭಾರದ ಕಲ್ಲು ಎಳೆಯುವ ಸ್ಪರ್ಧೆ ನಡೆಯಲಿದೆ.ಒಂದುವರೆ ಟನ್ ಭಾರದ ಕಲ್ಲು ಎಳೆಯುವ ಈ ಸ್ಪರ್ಧೆಯಲ್ಲಿ ಜಯಗಳಿಸಿದ ಎತ್ತುಗಳಿಗೆ ಪ್ರಥಮ ಬಹುಮಾನ ೫೫ ಸಾವಿರ ರೂ,ದ್ವಿತೀಯ ಬಹುಮಾನ ೪೫ ಸಾವಿರ ರೂ, ತೃತೀಯ ಬಹುಮಾನ ೩೫ ಸಾವಿರ ರೂ, ನಾಲ್ಕನೇ ಬಹುಮಾನ ೨೫ ಸಾವಿರ ರೂ ಮತ್ತು ಐದನೇ ಬಹುಮಾನ ೨೦ ಸಾವಿರ ರೂ ನೀಡಲಾಗುತ್ತದೆ.

ಅದೇ ದಿನ ಸಂಜೆ ನಗರದ ಮಹಿಳಾ ಸಮಾಜದಲ್ಲಿ ನೃತ್ಯ ಕಾರ್ಯಕ್ರಮ ನಡೆಯಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯ ಸೇರಿದಂತೆ ಮಹಾರಾಷ್ಟ್ರ, ಗುಜರಾತ್, ಬಾಂಬೆ, ಹೈದ್ರಾಬಾದ ಮೂಲದ ಸುಪ್ರಸಿದ್ಧ ಕಲಾ ತಂಡಗಳಿAದ ನೃತ್ಯ ನಡೆಸಲಾಗುತ್ತದೆ.

ದಿ ೧೪ ರಂದು ಅಖಿಲ ಭಾರತ ಮುಕ್ತ ಎತ್ತುಗಳ ಕಲ್ಲು ಎಳೆಯುವ ಸ್ಪರ್ಧೆ ನಡೆಯಲಿದೆ ಆಂಧ್ರ ಮತ್ತು ತೆಲಂಗಾಣ ಮೂಲಕ ದಿಂದ ಆನೆ ಗಾತ್ರದ ಎತ್ತುಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. ಎರಡು ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ನಡೆಯ ಲಿದೆ. ಈ ಸ್ಪರ್ಧೆಯಲ್ಲಿ ಜಯಗಳಿಸಿದ ಎತ್ತುಗಳಿಗೆ ಈ ಕೆಳಗಿನಂತೆ ಬಹುಮಾನ ನೀಡಲಾಗುತ್ತದೆ.ಎರಡನೇ ದಿನದ ಸ್ಪಧೆಯಲ್ಲಿ ಪಾಲ್ಗೊಂಡ ವಿಜೇತ ಎತ್ತುಗಳಿಗೆ ಪ್ರಥಮ ಬಹುಮಾನ ೭೦ ಸಾವಿರ ರೂ, ದ್ವಿತೀಯ ಬಹುಮಾನ ೫೫ ಸಾವಿರ ರೂ, ತೃತೀಯ ಬಹುಮಾನ ೪೫ ಸಾವಿರ ರೂ, ನಾಲ್ಕನೇ ಬಹುಮಾನ ೩೫ ಸಾವಿರ ರೂ ಮತ್ತು ಐದನೇ ಬಹುಮಾನ ೩೦ ಸಾವಿರ ರೂ ಹಾಗೂ ಆರ ನೇ ಬಹುಮಾನ ೨೦ ಸಾವಿರ ನೀಡಲಾಗುತ್ತದೆ.ದಿ ೧೪ ರಂದು ಸಂಜೆ ಸಾಂಸ್ಕೃತಿ ಕಾರ್ಯಕ್ರಮ ನಗರದ ಐಡಿಎಸ್‌ಎಂಟಿ ಲೇಓಟ್ ನಲ್ಲಿ ಆಯೋಜಿಸಲಾಗುತ್ತದೆ.ರಾಜ್ಯ ಮತ್ತು ಇತರೆ ರಾಜ್ಯಗಳಿಂದ ಬಂದ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ.

ಅಲ್ಲದೆ ದಿ ೧೪ ರಂದು ಮುಂಗಾರು ಹಬ್ಬದ ಅದ್ದೂರಿ ಮೆರವಣಿಗೆ ನಡೆಸಲಾಗುತ್ತದೆ. ಮುನ್ನೂರು ಕಾಪು ಕುಲ ದೇವತೆ ಮಾತಾ ಶ್ರೀಲಕ್ಷö್ಮಮ್ಮ ದೇವಿ ಮಂದಿರದಿAದ ಈ ಮೆರಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಕಾಶಿ ಮತ್ತು ಶ್ರೀಶೈಲ ಪೀಠಗಳ ಜಗದ್ಗುರುಗಳು ಆಗಮಿಸಲಿದ್ದಾರೆ.ಮೆರವಗೆಯಲ್ಲಿ ಒಟ್ಟು ೪೨ ಕಲಾ ತಂಡಗಲು ಪಾಲ್ಗೊಳ್ಳಲಿವೆ. ೩೦ ತಂಡಗಳು ರಾಜ್ಯದಿಂದ, ಆಂಧ್ರ ಮತ್ತು ತೆಲಂಗಾಣದಿ೦ದ ತಲಾ ೫ ತಂಡ ಮತ್ತು ಕೇರಳದಿಂದ ಎರಡು ತಂಡಗಳು ಭಾಗವಹಿಸಲಿವೆ.

ವೀರಗಾಸೆ, ಕತ್ತಿವರಸೆ, ಗಾಲಿ ಹಲಗೆ, ಕರಡಿ ಮಜಲು, ನಾದಸ್ವರ ಸೇರಿದಂತೆ ವಿವಿಧ ಕಲಾ ತಂಡಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಮೈಸೂರು ನಂತರ ಅದೇ ರೀತಿಯಲ್ಲಿ ಅದ್ದೂರಿ ಮೆರವಣಿ ನಗರದಲ್ಲಿ ನಡೆಯಲಿದೆ.ದಿ ೧೫ ರಂದು ಮೂರನೇ ಮತ್ತು ಕೊನೆ ದಿನದ ಕಾರ್ಯಕ್ರಮ ನಡೆಯಲಿದೆ. ಎರಡುವರೆ ಟನ್ ಭಾರದ ಕಲ್ಲು ಎಳೆಯುವ ಈ ಸ್ಪರ್ಧೆಯಲ್ಲಿ ಜಯಗಳಿಸಿದ ಎತ್ತುಗಳಿಗೆ ಪ್ರಥಮ ಬಹುಮಾನ ೮೦ ಸಾವಿರ ರೂ, ದ್ವಿತೀಯ ಬಹುಮಾನ ೬೫ ಸಾವಿರ ರೂ, ತೃತೀಯ ಬಹುಮಾನ ೫೫ ಸಾವಿರ ರೂ, ನಾಲ್ಕನೇ ಬಹುಮಾನ ೪೫ ಸಾವಿರ ರೂ ಮತ್ತು ಐದನೇ ಬಹುಮಾನ ೩೫ ಸಾವಿರ ರೂ, ಆರನೇ ಬಹುಮಾನ ೨೫ ಸಾವಿರ ರೂ ನೀಡಲಾಗುತ್ತದೆ.

ಸಂಜೆ ೫ ಗಂಟೆಗೆ ಕುಸ್ತಿ ಪೋಟಿ ನಡೆಸಲಾಗುತ್ತದೆ. ಈ ಸಲ ೧೧೦ ಕೆ.ಜಿ ಪೈಲ್ವಾನ್‌ಗಳು ಕುಸ್ತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ೨೫ ಪೈಲ್ವಾನರು ಸ್ಪರ್ಧೆಯಲ್ಲಿ ಪೈಪೋಟಿ ನಡೆಸಲಿದ್ದಾರೆ. ೧೧೦ ಕೆ.ಜಿ ಪೈಲ್ವಾನ್‌ರಿಗೆ ಪ್ರಥಮ ಬಹುಮಾನ ಒಂದು ಲಕ್ಷ ರೂ ನೀಡಗುತ್ತದೆ. ಸೋತವರಿಗೆ ೨೫ ಸಾವಿರ ಪಾರಿತೋಷಕ ನೀಡಲಾಗುತ್ತದೆ. ಅಂದು ಸಂಜೆ ೩ ಗಂಟೆಗೆ ಕೈ ಕಲ್ಲು ಮತ್ತು ಉಸುಕಿನ ಚೀಲ ಎತ್ತುವ ಸ್ಪಧೇ ನಡೆಸಲಾಗುತ್ತದೆ. ದಿ ೧೫ರ ಸಂಜೆ ಕಾರ್ಯಕ್ರಮ ಗಂಜ್ ಕಲ್ಯಾಣ ಮಂಟಪದಲ್ಲಿ ನಡೆಸಲಾಗುತ್ತದೆ.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ಬೆಲ್ಲಂ ನರಸರೆಡ್ಡಿ, ಉಟ್ಕೂರು ಕೃಷ್ಣಮೂರ್ತಿ, ಪುಂಡ್ಲ ನರಸರೆಡ್ಡಿ, ಬಂಗಿ ನರಸರೆಡ್ಡಿ ಅವರು ಉಪಸ್ಥಿತರಿದ್ದರು.