Sunday, 24th November 2024

74 ಲಕ್ಷ‌ ರೂ. ಮೌಲ್ಯದ ನಾನಾ ವಸ್ತುಗಳು ಮಾಲೀಕರಿಗೆ ಹಸ್ತಾಂತರ

ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಪ್ರಾಪರ್ಟಿ ರಿಟರ್ನ್ ಪರೇಡ್

ಕಲಬುರಗಿ: ಆರು ತಿಂಗಳಲ್ಲಿ ಜಿಲ್ಲೆಯಲ್ಲಿ (ನಗರ ಹೊರತುಪಡಿಸಿ) ನಾನಾ ಕಡೆ ನಡೆದ ಕಳ್ಳತನ ಸೇರಿ ದರೋಡೆ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಸುಮಾರು 74,27,270 ರೂ. ಮೌಲ್ಯದ ನಾನಾ ವಸ್ತುಗಳನ್ನು ಅವುಗಳ ಮಾಲೀಕರಿಗೆ ಪೊಲೀಸ್‌ ಇಲಾಖೆ ಡಿಎಆರ್‌ ಮೈದಾನದಲ್ಲಿ ನಡೆದ ಪ್ರಾಪರ್ಟಿ ರಿಟನ್ಸ್ ಪರೇಡ್ ನಲ್ಲಿ ಹಸ್ತಾಂತರಿಸಿತು.

2021ರ ನವೆಂಬರ್‌ 26 ರಿಂದ 2022ರ ಮೇ 26ರ ವರೆಗೆ ಸುಲಿಗೆ, ಮನೆ ಕಳ್ಳತನ, ದರೋಡೆಯ ಸುಮಾರು 152 ಪ್ರಕರಣ ಜಿಲ್ಲೆಯ ನಾನಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದವು. ಇದರಲ್ಲಿ 77 ಪ್ರಕರಣಗಳನ್ನು ಯಶಸ್ವಿಯಾಗಿ ಪೊಲೀಸ್ ಇಲಾಖೆ ಭೇದಿಸಿಸಿದ್ದು, ಆ ಪ್ರಕರಣದಲ್ಲಿ ವಶಪಡಿಸಿ ಕೊಂಡ ವಸ್ತುಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಯಿತು. ಶೇ.50ಕ್ಕಿಂತ ಹೆಚ್ಚಿನ ಪ್ರಕರಣಗಲ್ಲಿ ಆರೋಪಿಗಳನ್ನು ಪೊಲೀಸ್‌ ಸಿಬ್ಬಂದಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌ ಮಾಹಿತಿ ನೀಡಿದರು. ಹೆಚ್ಚುವರಿ ಎಸ್.ಪಿ. ಪ್ರಸನ್ನ ದೇಸಾಯಿ ಸೇರಿದಂತೆ ಇನ್ನಿತರ ಪೊಲೀಸ್ ಅಧಿಕಾರಿಗಳು ಇದ್ದರು.

ಮಾಲೀಕರಿಗೆ ಮರಳಿಸಿದ ವಸ್ತುಗಳು: ಬಂಗಾರ 1124.37 ಗ್ರಾಂ 44,42,350 ರೂ., ಬೆಳ್ಳಿ 8481 ಗ್ರಾಂ 5,96,350 ರೂ., ಜಿಯೋ ಕಂಪನಿ ರೂಟರ್‌ 1,20,000 ರೂ.,1 ಕ್ರೂಸರ್‌ ವಾಹನ 1,20,000 ರೂ., ಎರಡು ಟೆಕ್ಷ್ಮೋ ಕಂಪನಿಯ ಮೋಟಾರ್ 52,400 ರೂ., ಎರಡು ಟ್ರ್ಯಾಕ್ಟರ್ ಟ್ರ್ಯಾಲಿಗಳು 1,70,000 ರೂ., 22 ಸ್ಯಾಮ್ಸಂಗ್ ಟ್ಯಾಬ್ 1,49,000 ರೂ., 10 ಮೊಬೈಲ್‌ 1,16,350 ರೂ., 34 ಮೋಟಾರ್ ಸೈಕಲ್ ಗಳು 11,05,000 ರೂ., 9 ಸ್ಟೀಲ್ ಪ್ಲೇಟ್ 81,000 ರೂ., 10 ಫೀಟ್ ಪಿವಿಸಿ ಪೈಪ್ 84,000 ರೂ., 2 ಎತ್ತುಗಳು 85,000 ರೂ., 4 ಕುರಿಗಳು 40,000 ರೂ., 780 ಲೀಟರ್ ಟಿಸಿ ಆಯಿಲ್ 4,400 ರೂ., 100 ಲೀಟರ್ ಡಿಸೇಲ್ 10,000 ರೂ., 1 ತಾಮ್ರದ ಕಳಸಿ 3,000 ರೂ., ನಗದು ಹಣ 3,32,520 ರೂ. ಸೇರಿದಂತೆ ಒಟ್ಟು 74,27,270 ಮೌಲ್ಯದ ವಸ್ತುಗಳನ್ನು ಹಿಂತಿರುಗಿಸ ಲಾಯಿತು.