Thursday, 12th December 2024

ಮಠಾಧೀಶರಿಗೆ ಭಕ್ತರೆ ತಂದೆ, ತಾಯಿಗಳಾಗಿ ರಕ್ಷಣೆ ನೀಡಿದರೆ ದಿಗ್ಗದರ್ಶನ

ಹೊದಲೂರು ಶ್ರೀ ಶಿವಲಿಂಗೇಶ್ವರ ಮಠದ ಕಟ್ಟಡ ವಿದ್ಯುಕ್ತ ಲೋಕಾರ್ಪಣೆ

ಆಳಂದ: ಮಠಾಧೀಶರಿಗೆ ಭಕ್ತರೆ ತಂದೆ, ತಾಯಿಗಳಿದ್ದಂತೆ ಅವರಿಗೆ ಸೂಕ್ತ ಮಾರ್ಗದರ್ಶನ ರಕ್ಷಣೆ ನೀಡಿದರೆ ಭಕ್ತರಿಗೆ ದಿಗ್ಗದರ್ಶನ ಎಂದು ಶಿವಮೊಗ್ಗ ಬೇಕಿನಕಲ್ಲ ಮಠದ ಜದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಅವರು ಹೇಳಿದರು.

ತಾಲೂಕಿನ ಗಡಿಗ್ರಾಮ ಹೋದಲೂರ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ಶ್ರೀಶರಣ ಬಸವೇಶ್ವರ ಪುರಾಣ ಮಹಾಮಂಗಲ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಸಮಾಜ ಸುಧಾರಣೆಗೆ ಮಠಗಳು ರೂಪಗೊಂಡಿವೆ. ಮನೆ, ಮಠಕ್ಕೂ ಅವಿನಾ ಭಾವ ಸಂಬ0ಧವಿದೆ. ಹೀಗಾಗಿ ಊರಿಗೊಂದು ಮಠ, ದೇವಸ್ಥಾನ, ಶಾಲೆಗಳಿದ್ದರೆ ಊರಿಗೆ ಮತ್ತು ಆಡಳಿತ ವ್ಯವಸ್ಥೆಗೆ ಲಕ್ಷಣ. ಈ ಪರಂಪರೆಯಲ್ಲಿ ನಾಡಿನಾಚೆಗೂ ಮಠಗಳಿದ್ದು, ಸಮಾಜ ಕಟ್ಟಲು ಸುಧಾರಣೆ ಮಾಡಿ ನಿರಂತರ ಮಾರ್ಗ ದರ್ಶನಕ್ಕೆ ಮಠಗಳ ವ್ಯವಸ್ಥೆ ಜಾರಿಗೆ ಬಂದ0ತೆ ಹೊದಲೂರ ಮಠದ ಪೀಠಾಧಿಪತಿ ವೃಷಬೇಂದ್ರ ಶ್ರೀಗಳು ಭಕ್ತರೊಂದಿಗೆ ಸೇರಿ ಸಮಾಜ ಕಾರ್ಯಕ್ಕೆ ಮುಂದಾಗಿದ್ದು ಶ್ರೀಮಠ ಹೆಮ್ಮರವಾಗಿ ಬೆಳೆದು ಜನಪರ ಕಾರ್ಯಗೈಗೊಳ್ಳಲಿ ಎಂದು ಹಾರೈಸಿದರು.

ಸ್ವಾಮೀಜಿಗಳಿದ್ದರೆ ಮಠಕ್ಕೊಂದು ಗೌರವ ಹಾಗೂ ಯಜಮಾನವಿದ್ದರೆ ಮನೆಗೊಂದು ಗೌರವ ಇರುತ್ತದೆ. ಸುಮಾಜ ಸುಧಾರಣೆ ಗಾಗಿಯೇ ೧೨ನೇ ಶತಮಾನದಲ್ಲಿ ಬಸವಾದಿ ಶರಣರು, ನಂತರ ೧೯-೨೦ನೇ ಶತಮಾನ ಮರೆಯಬಾರದು, ಮಠಗಳಲ್ಲಿ ಸ್ವಾಮಿಗಳು ಹೇಗಿರಬೇಕು ಎಂಬುದು ಹಾನಗಲ್ಲ ಕುಮಾರ ಸ್ವಾಮಿಗಳು ಮಠಗಳಿಗೆ ರೂಪಕೊಟ್ಟಿದ್ದು ಸ್ವಾಮೀಜಿಗಳಿಗೆ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದರ ಫಲವೇ ಇಂದು ಮಠಗಳು ಮಠಾಧೀಶರು ಬದುಕಿ ಸಮಾಜ ಮುಖಿಯಾಗಿ ಸಾಗಿವೆ ಎಂದರು.

ಪೀಠಾಧಿಪತಿ ಶ್ರೀ ವೃಷಬೇಂದ್ರ ಮಹಾಸ್ವಾಮೀಜಿ ಮಾತನಾಡಿ, ಹಿರಿಯ ಪೂಜ್ಯರ ಮಾರ್ಗದರ್ಶನ ಹಾಗೂ ಭಕ್ತರ ಆಪೇಕ್ಷೆಯಂತೆ  ಗಡಿಭಾಗದಲ್ಲಿ ಸಾಮಾಜಿಕ ಸಾಮರಸ್ಯ ಹಾಗೂ  ಧಾರ್ಮಿಕ ಕಾರ್ಯದ ಉದ್ದೇಶದಿಂದಾಗಿ ಮಠದ ಕಟ್ಟಡ ನಿರ್ಮಾಣ ಕೈಗೊಂಡಿ ದ್ದು, ಬರುವ ದಿನಗಳಲ್ಲಿ ಜನಪರ ಕಾರ್ಯಕ್ಕೆ ಸರ್ವ ಭಕ್ತಾದಿಗಳು ಕೈಜೋಡಿಸಬೇಕು ಎಂದು ಅವರು ಹೇಳಿದರು.

ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ಪಡಸಾವಳಿ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯರು, ನರೋಣಾದ ಗುರುಮಹಾಂತ ಸ್ವಾಮಿಗಳು, ಗೋಳಾ ಶ್ರೀಗಳು ಮಾತನಾಡಿ ದರು.

ನಂದಗಾಂವ ಮಠದ ರಾಜಶೇಖರ ಮಹಾಸ್ವಾಮೀಜಿ, ಮಾಡಿಯಾಳದ ಮರಳಸಿದ್ಧ ಶ್ರೀಗಳು, ಬಸವಲಿಂಗ ಶ್ರೀ,  ಅಣೂರ, ಸೊರಬ, ಹಿರೇನಾಗಾಂವ, ಸೋಲಾಪೂರ, ಬಂಗರಗಾ, ಹತ್ತಿಕಣಮಸ, ಬಿರೂರ, ಬಿಳಕಿ, ಕಿಣ್ಣಿಸುಲ್ತಾನ, ಲಾಡಗಮುಗಳಿ, ಚಾಂಬಾಳ ಮಠದ ಶ್ರೀಗಳು ಸೇರಿದಂತೆ ಭಾಗವಹಿಸಿದ್ದ ನಾಡಿನ ಹರಗರು, ಚರಮೂರ್ತಿಗಳಿಗೆ ಶ್ರೀಮಠದ ಭಕ್ತರು ವೇದಿಕೆಯಲ್ಲಿ ಇದ್ದರು.

ಕೆಎಂಎಪ್ ಅಧ್ಯಕ್ಷ ಆರ್.ಕೆ. ಪಾಟೀಲ, ಗ್ರಾಪಂ ಅಧ್ಯಕ್ಷೆ ಸಂಗೀತಾ ಎಸ್. ಬನಶೆಟ್ಟಿ ಮತ್ತು ಮಹಾದೇವ ವಡಗಾಂವ, ಬಿಜೆಪಿ ಮಂಡಲ ಅಧ್ಯಕ್ಷ ಆನಂದ ಪಾಟೀಲ, ತಾಪಂ ಮಾಜಿ ಉಪಾಧ್ಯಕ್ಷ ಗುರುನಾಥ ಪಾಟೀಲ, ಮಾಜಿ ಸದಸ್ಯ ಮಲ್ಲಿಕಾರ್ಜುನ ಕಂದಗುಳೆ, ವೀರಭದ್ರ ಖೂನೆ ಸೇರಿದಂತೆ ನೆರೆಹೊರೆಯ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.

*
ಈ ಮೊದಲು ಪ್ರಮುಖ ರಸ್ತೆಗಳ ಮೂಲಕ ಜದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿಗೆ ಅಡ್ಡಪಲ್ಲಕಿ ಪಲ್ಲಕ್ಕಿ ಉತ್ಸವ ತಾಯಂದಿರು ಕುಂಭ,ಕಳಸದೊಂದಿಗೆ ಸಾಗಿ ಶ್ರೀಮಠಕ್ಕೆ ಅದ್ಧೂರಿಯಾಗಿ ವಾದ್ಯ ವೈಭವಗಳೊಂದಿಗೆ ಸ್ವಾಗತಿಸಲಾಯಿತು. ಸಮಾರಂಭ ಗುಂಡೇರಾವ್ ಆಲಗುಡ ಸ್ವಾಗತಿಸಿದರು. ನೂರಂದಯ್ಯಾ ಸ್ವಾಮಿ ನಿರೂಪಿಸಿದರು. ಶಿವರಾಜ ಪಾಟೀಲ ವಂದಿಸಿದರು.