Friday, 20th September 2024

ಪರಸ್ಪರ ಶಾಲುಗಳನ್ನ ಹಾಕಿಕೊಂಡ ಬಿಜೆಪಿ, ಜೆಡಿಎಸ್‌ ನಾಯಕರು

ಬೆಂಗಳೂರು: ಆಡಳಿತರೂಢ ಕಾಂಗ್ರೆಸ್‌ ಗೆ ಠಕ್ಕರ್‌ ಕೊಡುವ ನಿಟ್ಟಿನಲ್ಲಿ ಹಲವು ತಂತ್ರಗಳನ್ನ ಹಾಕಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಪರಸ್ಪರ ಶಾಲುಗಳನ್ನ ಹಾಕಿಕೊಂಡಿದ್ದಾರೆ.

ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಜೊತೆಗಿನ ಮೈತ್ರಿಯಾದ ಬೆನ್ನಲ್ಲೇ ಕೇಸರಿ ಶಾಲನ್ನು ಹೆಗಲಿಗೆ ಹಾಕಿಕೊಂಡಿರುವುದು ರಾಜಕೀಯ ಪಡಸಾಲೆ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜ್ಯಕ್ಕೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಜೆಡಿಎಸ್‌ ಶಾಲು ಹಾಕಿದ್ದಾರೆ.

ನಾನಿಲ್ಲಿ ರಿಪೋರ್ಟ್ ಕಾರ್ಡ್ ಜೊತೆ ಮತ ಕೇಳಲು ಬಂದಿದ್ದೇನೆ. ಹಗಲಿರುಳೆನ್ನದೆ ನಿಮಗಾಗಿ ಶ್ರಮಿಸಿದ್ದೇನೆ. ನಿಮ್ಮ ಕನಸುಗಳೇ ಮೋದಿಯ ಸಂಕಲ್ಪ ಎಂದರು.

24-7 ಮೂಲಕ 20247ರಲ್ಲಿ ದೇಶ ಮುನ್ನಡೆಸುವ ಗ್ಯಾರಂಟಿ ಕೊಡುತ್ತಿದ್ದೇನೆ. ಬಡವರಿಗಾಗಿ ಉಚಿತ ಪಡಿತರ ಕೊಟ್ಟಿದ್ದೇವೆ, ಲಕ್ಷಾಂತರ ಜನರಿಗೆ ಉಚಿತ ಪಡಿತರ ಸಿಗುತ್ತಿದೆ. ಇದು ಇನ್ನೂ 5 ವರ್ಷ ಮುಂದುವರಿಯಲಿದೆ ಎಂದು ಭರವಸೆ ನೀಡಿದರು. ಉಚಿತ ಚಿಕಿತ್ಸೆಯ ಕನಸನ್ನೂ ಕಾಣದ ಜನರಿಗೆ ಆಯುಷ್ಮಾನ್ ಕಾರ್ಡ್ ಮೂಲಕ ಉಚಿತ ಚಿಕಿತ್ಸೆ ಕೊಡುತ್ತಿದ್ದೇವೆ ಎಂದು ಹೇಳಿದರು.

ಎಸ್‍ಸಿ, ಎಸ್‍ಟಿ, ಒಬಿಸಿ ಪರಿವಾರಕ್ಕೆ ನನ್ನ ಸರಕಾರದ ಗರಿಷ್ಠ ಲಾಭ ಸಿಕ್ಕಿದೆ. ನೀರಿನ ಸೌಕರ್ಯ, ಮನೆ ಇಲ್ಲದೆ, ವಿದ್ಯುತ್ ಸಂಪರ್ಕವಿಲ್ಲದೆ ಜನರು ಜೀವಿಸುತ್ತಿದ್ದರು. 10 ವರ್ಷಗಳಲ್ಲಿ 25 ಕೋಟಿ ಜನರು ಬಿಪಿಎಲ್ ರೇಖೆಗಿಂತ ಮೇಲಕ್ಕೆ ಬಂದಿದ್ದಾರೆ ಎಂದು ವಿಶ್ಲೇಷಿಸಿದರು. ಮುಂದಿನ 10 ವರ್ಷಗಳಲ್ಲಿ 3 ಕೋಟಿ ಮನೆಗಳನ್ನು ನಿರ್ಮಿಸಿಕೊಡುತ್ತೇವೆ. 2014ರಲ್ಲಿ ಎನ್‍ಡಿಎ ಸರಕಾರ ರಚಿಸಲಾಯಿತು. ಎಸ್‍ಸಿ ಕುಟುಂಬದವರು, ಬುಡಕಟ್ಟು ಸಮಾಜದವರಿಗೆ ರಾಷ್ಟ್ರಪತಿ ಆಗುವ ಅವಕಾಶ ಸಿಕ್ಕಿದೆ. ಬಾಬಾಸಾಹೇಬ ಅಂಬೇಡ್ಕರರ 5 ಸ್ಥಳಗಳನ್ನು ಪಂಚತೀರ್ಥವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.

ದೊಡ್ಡ ಶಕ್ತಿಗಳು ಮೋದಿಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಲು ಪ್ರಯತ್ನ ನಡೆಸಿವೆ. ಆದರೆ, ನಾರಿ ಶಕ್ತಿ, ಮಾತೃಶಕ್ತಿಯ ಆಶೀರ್ವಾದ, ಜನರ ಸುರಕ್ಷಾ ಕವಚ ನನ್ನ ಜೊತೆಗಿದೆ. ತಾಯಂದಿರ ಸೇವೆ ನನ್ನ ಪ್ರಾಥಮಿಕ ಆದ್ಯತೆ ಎಂದ ಅವರು, 3 ಕೋಟಿ ಸೋದರಿಯರನ್ನು ಲಕ್ಷಾಧಿಪತಿ ದೀದಿ ಮಾಡಲಿದ್ದೇವೆ ಎಂದು ನುಡಿದರು. ಕೃಷಿ ಕ್ಷೇತ್ರದಲ್ಲಿ ಡ್ರೋಣ್ ಪೈಲಟ್ ತರಬೇತಿ ನೀಡಲಾಗುತ್ತಿದೆ. ಈ ಭಾಗದ ಹೆಣ್ಮಕ್ಕಳೂ ಡ್ರೋಣ್ ತಾಂತ್ರಿಕತೆ ಬಳಸುವಂತೆ ಆಗಲಿದೆ ಎಂದು ತಿಳಿಸಿದರು.

ದೇವೇಗೌಡರು ಅತ್ಯಂತ ಅನುಭವಿ ರಾಜಕಾರಣಿ. ಅವರ ಮಾರ್ಗದರ್ಶನ ನಮ್ಮ ಜೊತೆಗಿದೆ. ಎನ್‍ಡಿಎ ಸರಕಾರ ರೈತರನ್ನು ಆರ್ಥಿಕವಾಗಿ ಬಲಪಡಿಸು ತ್ತಿದೆ. ಶ್ರೀ ಅನ್ನ ಮೂಲಕ ಸಿರಿಧಾನ್ಯವನ್ನೂ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದ್ದೇವೆ. ಇದು ಈ ಭಾಗದ ಜನರಿಗೆ ನೆರವಾಗಲಿದೆ ಎಂದು ತಿಳಿಸಿದರು. ಇಲ್ಲಿನ ನೀರಿನ ಸಮಸ್ಯೆ ಪರಿಹರಿಸಲು ಮುಂದಾಗಿದ್ದೇವೆ ಎಂದು ಹೇಳಿದರು.