Friday, 22nd November 2024

ಕುರಿ ಸಾಕಾಣಿಕೆ ಹಟ್ಟಿಗೆ ಬೀದಿ ನಾಯಿಗಳ ದಾಳಿ

ಪಾವಗಡ: ತಾಲೂಕಿನ ವೈನ್ ಹೊಸಕೋಟೆ ಹೋಬಳಿ ವ್ಯಾಪ್ತಿಯ ಜಾಲೊಡ್ ಗ್ರಾಮದ ಹನುಮಕ್ಕ w/o ಸಿದ್ದ ಲಿಂಗಪ್ಪ ಎಂಬವರು ಕುರಿ ಸಾಕಾಣಿಕೆ ಮಾಡಿಕೊಂಡು ತಮ್ಮ ಜೀವನ ನಡೆಸುತ್ತಿದ್ದರು.

ಶನಿವಾರ ಮಧ್ಯಾಹ್ನದ ಸಮಯದಲ್ಲಿ ಗ್ರಾಮದಲ್ಲಿದ್ದ ಬೀದಿ ನಾಯಿಗಳಿಂದ ಕುರಿ ಸಾಕಾಣಿಕೆ ಹಟ್ಟಿಗೆ ಏಕಾಏಕಿ ನುಗ್ಗಿ 20 ಕುರಿ ಮರಿಗಳನ್ನು ಕಚ್ಚಿ ತಿಂದಿರುತ್ತವೆ. ಈ ಒಂದು ದೃಶ್ಯಾವಳಿ ಕಂಡ ಬಡ ಮಹಿಳೆಯಾದ ಹನುಮಕ್ಕ ತೀರ್ವ ದುಃಖಕ್ಕೆ ಈಡಾಗಿದ್ದಾರೆ.

ಸುಮಾರು ಒಂದು ಲಕ್ಷ ರೂ. ವೆಚ್ಚದ ಮರಿಗಳೆಂಬುದು ತಿಳಿದು ಬಂದಿದೆ. ಸ್ಥಳಕ್ಕೆ ಪಶು ಇಲಾಖೆ ವೈದ್ಯರು ಭೇಟಿ ನೀಡಿ ಕುರಿಗಳ ಕುರಿ ಮರಿಗಳ ಮರಣೋತ್ತರ ಪರೀಕ್ಷೆ ನಡೆಸಿ ಮಾಹಿತಿ ತಿಳಿಸಿದ್ದಾರೆ.