Friday, 13th December 2024

ಗುದ್ದಲಿ ಪೂಜೆ ನೆರವೇರಿಸಿದ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ

ಪಾವಗಡ: ತಾಲ್ಲೂಕಿನ ಗುಂಡಾರ್ಲಹಳ್ಳಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿದರು.

ಪಟ್ಟಣದ ಸಮೀಪವಿರುವ ಗುಂಡಾರ್ಲಹಳ್ಳಿ ಮತ್ತು ವೀರ್ಲಗೊಂದಿ ರಸ್ತೆಗೆ ವಿಶ್ವೇಶ್ವರಯ್ಯ ಭದ್ರಾ ಮೇಲ್ದಂಡೆ ಯೋಜನೆ ಅಡಿಯ 50 ಲಕ್ಷ ವೆಚ್ಚದ ರಸ್ತೆ ಕಾಮಗಾರಿ, ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಬ್ಯಾಡ 100 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಗ್ರಾಮಗಳಿಗೆ ಸುಮಾರು ಎರಡು ಕೋಟಿ 50 ಲಕ್ಷ ವೆಚ್ಚದಲ್ಲಿ ಮನೆ ಮನೆಗೆ ಕೊಳಾಯಿ ಕಾಮಗಾರಿ ಹಾಗೂ ಗುಂಡಾರ್ಲಹಳ್ಳಿ ಗ್ರಾಮದ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಬಳಿ 6 ಲಕ್ಷ ವೆಚ್ಚದ ಸಮುದಾಯ ಭವನಕ್ಕೆ , ಗುಂಡಾರಹಳ್ಳಿ, ಬಿ.ದೊಡ್ಡಹಟ್ಟಿ ಗ್ರಾಮದ ನೂತನ ಶಾಲಾ ಕಟ್ಟಡ ನಿರ್ಮಾಣಗಳಿಗೆ 32 ಲಕ್ಷ ಸೇರಿ ಒಟ್ಟು ನಾಲ್ಕು ಕೋಟಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ವೆಂಕಟರಮಣಪ್ಪ ಮಾತನಾಡುತ್ತ , ಸುಮಾರು ವರ್ಷಗಳಿಂದ ಗುಂಡಾರಹಳ್ಳಿ ಗ್ರಾಮದಿಂದ ವೀರ್ಲಗೊಂದಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ನೆನೆಗುದಿಗೆ ಬಿದ್ದಿದ್ದು.ಕಳೆದ ಎರಡು ಮೂರು ತಿಂಗಳ ಹಿಂದೆಯೇ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಬೇಕಿತ್ತು ಅದರೆ ಮಳೆಯ ಅವಾಂತರದಿಂದ ತಡವಾಗಿದೆ ಎಂದರು.

ನನ್ನ ರಾಜೀಕಿಯ ಪೂರ್ಣ ಅವಧಿಯಲ್ಲಿ ದೂರ ದೃಷ್ಟಿ ಇರುವಂತಹ ಅಭಿವೃದ್ಧಿ ಕೆಲಸ ಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ನಾಗಲಮಡಿಕೆ ಚೆಕ್ ಡ್ಯಾಮ್, ಪಟ್ಟಣದ ವೈ ಇ ರಂಗಯ್ಯ ಶೆಟ್ಟಿ ಪ್ರಥಮ ದರ್ಜೆ ಕಾಲೇಜು. ಮುರಾರ್ಜಿ, ಅಟಲ್ ವಸತಿ ಶಾಲೆಗಳು ಮತ್ತು ನೂತನವಾಗಿ ನಿರ್ಮಿಸುತ್ತಿರುವ ಪಟ್ಟಣದ ಅಂತರದಲ್ಲಿರುವಂತಹ ಕಣಿವೆ ದೇವಸ್ಥಾನ ಬಳಿ ತಾಲ್ಲೂಕಿನ ಬಡ ಮಕ್ಕಳ ಶಿಕ್ಷಣಕ್ಕೆ ಹೊತ್ತು ನೀಡುವ ಉದ್ದೇಶದಿಂದ 22 ಕೋಟಿ ವೆಚ್ಚದಲ್ಲಿ ಹೊಸ ವಿದ್ಯಾರ್ಥಿ ನಿಲಯಗಳು ಅಭಿವೃದ್ಧಿ ಗೊಳಿಸುತ್ತಿದ್ದೇನೆ.

ಮಾಜಿ ಶಾಸಕ ತಿಮ್ಮಾರಾಯಪ್ಪ ಆಡ್ಡಿಪಡಿಸಿದರೂ ಸಹ ಅಭಿವೃದ್ಧಿ ವಿಚಾರದಲ್ಲಿ ನಾನು ರಾಜೀಯಾಗದೆ ಇಂದು ಬೃಹದಾ ಕಾರದಲ್ಲಿ ವಸತಿ ನಿಲಯ ಸಿದ್ದಗೊಂಡಿದ್ದು ಮುಂದಿನ ಪೀಳಿಗೆಗೆ ನನ್ನ ಅಭಿವೃದ್ಧಿ ಕೆಲಸಗಳೇ ನನ್ನ ಹೆಸರು ತಿಳಿಸುತ್ತವೆ,
ಅಧಿಕಾರ ಎಂದಿಗೂ ಶಾಶ್ವತವಾಗಿರುವುದಿಲ್ಲ ಅಭಿವೃದ್ಧಿ ಮಾತ್ರ ಶಾಶ್ವತವಾಗಿ ಇರುತ್ತದೆ. ಅಭಿವೃದ್ಧಿ ಮಾಡುವವರಿಗೆ ಅಡಚಣೆಗಳಿಗೆ ದಿಟ್ಟ ಉತ್ತರ ಕೊಡಬೇಕು ಎಂದರು.

ನಂತರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹೆಚ್ ವಿ ವೆಂಕಟೇಶ್ ಮಾತನಾಡಿ , ತಾಲೂಕಿನ ಗ್ರಾಮೀಣ ಭಾಗದ ಅಭಿವೃದ್ಧಿ ಮತ್ತು ಅದ್ಭುತ ಸೌಕರ್ಯ ಕಲ್ಪಿಸುವಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಈ ಕ್ಷೇತ್ರದ ಜನಾನು ನಾಯಿಗಳು ಆಶೀರ್ವಾದ ಆಶೀರ್ವಾದ ಕೊಟ್ಟ ಪ್ರತಿ ಬಾರಿಯೂ ದೂರ ದೃಷ್ಟಿಯುಳ್ಳ ಅಭಿವೃದ್ಧಿ ಕಾರ್ಯಕ್ರಮಗಳು ಒದಗಿಸಿಕೊಟ್ಟು ನಿರಂತರವಾಗಿ ಜನರ ಮನದಲ್ಲಿ ನಾನು ನಮ್ಮ ತಂದೆ ಮಾಡಿಕೊಂಡು ಬಂದಿರುತ್ತೇವೆ.ಮುಂಬರುವ 2023 ರ ಚುನಾವಣೆಯಲ್ಲಿ ಭಾಗದ ಜನರು ಮತ್ತೊಮ್ಮೆ ಕೈ ಹಿಡಿಯಬೇಕೆಂದು ಮನವಿ ಮಾಡಿದರು.

ಈ ವೇಳೆಯಲ್ಲಿ ಗ್ರಾ ಪಂ ಉಪಾಧ್ಯಕ್ಷೆ ಅಕ್ಕಮ್ಮ, ಸುದೇಶ್ ಬಾಬು, ಯುವ ಮುಖಂಡ ನಾನಿ, ಮಾಜಿ ಗ್ರಾ ಪo ವೆಂಕಟೇಶ್, ಕೃಷ್ಣಮೂರ್ತಿ, ನರಸಪ್ಪ, ಗ್ರಾಪಂ ಸದಸ್ಯರಾದ ಕೃಷ್ಣ, ನರಸಿಂಹಪ್ಪ ಗಂಗಾಧರಪ್ಪ ಎಸ್ ಡಿ ಎಂ ಸಿ ಪ್ರೆಸಿಡೆಂಟ್ ರಾಜಕುಮಾರ್, ಉಗ್ರ ನರಸಿಂಹಪ್ಪ,ನರಸಿಂಹ ರೆಡ್ಡಿ. ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.