Thursday, 19th September 2024

ಪಾವಗಡ ಕಾಂಗ್ರೆಸ್ ಪಕ್ಷದಲ್ಲಿ ಬಿರುಕು, ಪಕ್ಷದ ಹೈಕಮಾಂಡ್ ಮೌನ: ಅತೃಪ್ತ ಮುಖಂಡರ ಆರೋಪ

ಪಾವಗಡ : ಸೋಮವಾರ ಪಟ್ಟಣದ ಯಾದವ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಪಾವಗಡ ಕಾಂಗ್ರೆಸ್ ಅತೃಪ್ತ ಹಿರಿಯ ಮುಖಂಡರುಗಳೆಲ್ಲ ಸೇರಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಪಾವಗಡ ದಿನೇ ದಿನೇ ಕಾವೇರಿತ್ತಿರುವ 2023ರ ಚುನಾವಣೆಯ ಒಂದು ಕಡೇ ಯಾದರೆ ಇನೂಂದು ಕಡೆ ಪಕ್ಷದಲ್ಲಿ ಬಿರುಕು ಗಮನಿಸದೆ ಕಂಡು ಕಾಣದೆ ರೀತಿಯಲ್ಲಿ ವರ್ತಿಸು ತ್ತಿರುವ ಜಿಲ್ಲಾ ಮಟ್ಟದ ಅಧ್ಯಕ್ಷ, ಕಾಂಗ್ರೆಸ್ ಪಕ್ಷದಲ್ಲಿ ಒಳ ಜಗಳ ತಾರಕಕ್ಕೇರಿದೆ. ಪಕ್ಷದಲ್ಲಿ ಎಲ್ಲವೂ ಚನ್ನಾಗಿದೆ ಎಂಬುದಾಗಿಯೂ ಜನರ ಮುಂದೆ ಹೇಳೀಕೊಳ್ಳುತ್ತಿರುವ ಪಕ್ಷದ ಕೆಲ ಮುಖಂಡರು.

ಪಾವಗಡ ಕಾಂಗ್ರೆಸ್ ಪಕ್ಷದಲ್ಲಿ ಏಕಪಕ್ಷೀಯ ವಾಗಿ ವರ್ತಿಸುವ ಕೆಲಸ ಇತ್ತಿಚಿನ ದಿನಗಳಲ್ಲಿ ಹೆಚ್ಚಾಗಿದೆ.ಪಾವಗಡ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಅನುಭವಿಸುತ್ತಿರುವ ನಾಯಕರು ಕಾಂಗ್ರೆಸ್ ನ ಹಿರಿಯ ಮುಖಂಡರುಗಳನ್ನು ಕಡೆಗಣನೆ ಮಾಡಿದ್ದಾರೆಂದು ಕಾಂಗ್ರೆಸ್ ಹಿರಿಯ ಮುಖಂಡರು ಹಾಗೂ ಅತೃಪ್ತ ಬಣ್ಣದ ಅವರು ಆರೋಪಿಸಿದರು.

ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ತರುವಲ್ಲಿ ತಮ್ಮ ಜೋಬಿನಿಂದ ಹಣವನ್ನು ಖರ್ಚು ಮಾಡಿ ಅಧಿಕಾರಕ್ಕೆ ತರಲು ಶ್ರಮಿಸಿ ಇರುತ್ತೇವೆ. ಅಧಿಕಾರಕ್ಕೆ ತಂದ ನಂತರ ಅಧಿಕಾರಕ್ಕೆ ತಂದವ ರನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.

ಚುನಾವಣೆ ಸಮೀಪಿಸುತ್ತಿರುವಲ್ಲಿ ನಮ್ಮನ್ನು ಪರಿಗಣಿಗೆ ತೆಗೆದುಕೊಳ್ಳಲು ಸಂಪರ್ಕಿಸಲು ಪ್ರಯತ್ನ ಪಡುತ್ತಾರೆ. ಈ ಬಾರಿ ಅತೃಪ್ತ ಮುಖಂಡರುಗಳಿಂದ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಉತ್ತಮ ಎಂದು ಸೂಚಿಸಿದರು.

ಈ ಪಕ್ಷವು ಮುಖಂಡರು ಪಕ್ಷವಲ್ಲ ಕಾರ್ಯಕರ್ತರ ಪಕ್ಷ ಎಂದು ಮಾಜಿ ಸಂಸದ ಚಂದ್ರಪ್ಪ ಹೇಳುತ್ತಾ ಈ ಪಕ್ಷದ ಅಭ್ಯರ್ಥಿ ಯನ್ನು ಆಯ್ಕೆ ಮಾಡುವ ವಿಚಾರವಾಗಿ ಸೂಕ್ಷ್ಮವಾಗಿ ಹೈಕಮಾಂಡ್ ಗಮನಿಸುತ್ತಿರುವುದು ಗಮನಾರ್ಹವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸೋಮ್ಲ ನಾಯಕ್ ಮಾತನಾಡುತ್ತಾ ಕಾಂಗ್ರೆಸ್ ಪಕ್ಷದ ಚಿಹ್ನೆಯ ಅಡಿಯಲ್ಲಿ ಯಾವ ಅಭ್ಯರ್ಥಿಯನ್ನು ಹೈಕಮಾಂಡ್ ಸೂಚಿಸಿದರು ನಾವು ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡ ಹಾಗೂ ವಕೀಲರಾದ ನಾಗೇಂದ್ರಪ್ಪ. ಜಿಲ್ಲಾ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಕೆಂಚ ಮಾರಯ್ಯ. ಮಾಜಿ ಜಿ ಪಂ ಸದಸ್ಯ ಗಾಯತ್ರಿ ಬಾಯಿ. ಕೋರ್ಟ್ ನರಸಪ್ಪ. ಕೆಪಿಸಿಸಿ ಸದಸ್ಯ ಮೈಲಾರರೆಡ್ಡಿ.ಮಾಜಿ ತಾಪಂ ಅಧ್ಯಕ್ಷ ಗೋಪಾಲ್ ರೆಡ್ಡಿ. ಮಾಜಿ ತಾಪಂ ಸದಸ್ಯ ಗುಜ್ಜನುಡು ಹನುಮಂತ ರಾಯಪ್ಪ. ಹಿರಿಯ ಮುಖಂಡ ಜ್ಞಾನೇಶ್ ಬಾಬು. ಪಳವಳ್ಳಿ ನರಸಿಂಹ ರೆಡ್ಡಿ.ಮೋಹನ್. ರಾಜವಂತಿ ಅಕ್ಕಲಪ್ಪ. ದಲಿತ್ ಕುಮಾರ್ ಸೇರಿದಂತೆ ಮುಂತಾದ ಮುಖಂಡರುಗಳು ಉಪಸ್ಥಿತ ರಿದ್ದರು.