Saturday, 14th December 2024

ಗ್ರಾಮಸ್ಥರು ಯೋಜನೆಯ ಸದುಪಯೋಗ ಪಡಿಸಿಕೊಳ್ಳಲಿ

ಗುಬ್ಬಿ: ಪ್ರತಿ ಗ್ರಾಮಗಳಲ್ಲಿ ಮನೆ ಮನೆ ನಲ್ಲಿ ಸಂಪರ್ಕ ಕಾಮಗಾರಿಗಳು ಮಾಡಲಾಗುತ್ತದೆ. ಗ್ರಾಮಸ್ಥರು ಯೋಜನೆಯ ಸದುಪಯೋಗ ಪಡಿಸಿಕೊಳಬೇಕೆಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.

ಗುಬ್ಬಿ ತಾಲ್ಲೂಕಿನ ಬೆಣಚಿಗೆರೆ, ಬಂಡಿಹಳ್ಳಿ. ಮುದ್ದಾಪುರ ಗೊಲ್ಲರಹಟ್ಟಿ.ಉದ್ದೆಹೊಸಕೆರೆ. ಇಡುಕನಹಳ್ಳಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾ ವತಿಯಿಂದ ಮನೆ ಮನೆ ನಲ್ಲಿ ಸಂಪರ್ಕಕ್ಕೆ 2.86 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು  ಶುದ್ದ ನೀರಿನ ಘಟಕಗಳನ್ನು ಸಂಬಂಧಪಟ್ಟ ಇಂಜಿನಿಯರ್ ಗಳ ಜೂತೆ ಮಾತುಕತೆ ಮಾಡಿದೇನೆ ಕೆಲವು ಕೆಟ್ಟು ನಿಂತ ಘಟಕಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ತಿಳಿಸಿದೇನೆ ಮುಂದೆ ಶುದ್ದ ನೀರಿನ ಘಟಕವನ್ನು ನಿರ್ವಹಣೆ ಮಾಡಲು ಪ್ರತಿ ಗ್ರಾಮ ಪಂಚಾಯತಿಗಳಿಗೆ ‌ನೀಡಲಾಗು ತ್ತದೆ. ಮುಂದೆ ಘಟಕಗಳು ಕೆಟ್ಟು ಹೋದರೆ ಆಯಾ ಗ್ರಾಮ ಪಂಚಾಯಿತಿಗಳು ಸರಿಪಡಿಸಲಾಗುತ್ತದೆ ಎಂದು ತಿಳಿಸಿದರು.
ಚೇಳೂರು ರಸ್ತೆಯಿಂದ ಗುಬ್ಬಿ ಅಂಡರ್ ಪಾಸ್ ರಸ್ತೆವರೆಗೂ ಒಂದು ಕೋಟಿ ಅನುದಾನ ಹಾಕಿದೇನೆ ಶೀಘ್ರದಲ್ಲಿ ಕಾಮಾಗಾರಿ‌ ಮಾಡಲಾಗುತ್ತದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದ ಹಳ್ಳಿಗಳ ಮೂಲಭೂತ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ವಾಗಿ ಸೇವೆ ಮಾಡುತ್ತ ಇದೇನೆ ತಾಲ್ಲೂಕಿನಲ್ಲಿ ಬಹುತೇಕ ಸಿಸಿರಸ್ತೆಗಳು ಮುಗಿದಿದ್ದು ಸಣ್ಣಪುಟ್ಟ ಕಾಮಗಾರಿಗಳನ್ನು ಶೀಘ್ರವಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು.ಗುಬ್ಬಿ ತಾಲ್ಲೂಕಿನ ನಾಗೇನಹಳ್ಳಿ ರಸ್ತೆಯನ್ನು ಶೀಘ್ರವಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು.