Thursday, 12th December 2024

ಅಧ್ಯಯನಕ್ಕೆ ಯೋಜನೆ ರೂಪಿಸಿಕೊಳ್ಳಬೇಕು

ಬಸವನಬಾಗೇವಾಡಿ: ವಿದ್ಯಾರ್ಥಿಗಳು ವರ್ಷದಲ್ಲಿ ಲಭ್ಯವಾಗುವ ದಿನಗಳ ಆಧಾರದ ಮೇಲೆ ಅಧ್ಯಯನಕ್ಕೆ ಯೋಜನೆ ರೂಪಿಸಿ ಕೊಳ್ಳಬೇಕು. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಅಗತ್ಯವಿರು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಬೆಂಗಳೂರಿನ ಕಲಿಕಾ ತರಬೇತುದಾರ ಡಾ.ನಾ.ಸೋಮೇಶ್ವರ ಹೇಳಿದರು.

ಪಟ್ಟಣದ ಬಸವ ಭವನದಲ್ಲಿ ಜಿಲ್ಲಾ ಪಂಚಾಯ್ತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ವಿಜಯಪುರದ ಚಾಣಕ್ಯ ಕರಿಯರ ಅಕಾಡೆಮಿ ಸಹಯೋಗದಲ್ಲಿ ತಾಲ್ಲೂಕಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಲಿಕಾ ಕರ‍್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯರ‍್ಥಿಗಳು ನೋಡಿ ಕಲಿಯಬೇಕು, ಕೇಳಿ ಕಲಿಯಬೇಕು, ಮಾಡಿ ಕಲಿಯಬೇಕು. ಉತ್ತಮ ಅಭ್ಯಾಸವನ್ನು ರೂಢಿಸಿಕೊಂಡು ಪಾಠವನ್ನು ನೆನಪಿಸಟ್ಟುಕೊಳ್ಳಬೇಕಾದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು.

ಪಾಲಕರು ತಮ್ಮ ಮಕ್ಕಳಿಗೆ ಆಗಾಗ್ಗೆ ವೈದ್ಯಕೀಯ ಪರೀಕ್ಷೆ ಮಾಡಿಸುವ ಮೂಲಕ ಮಕ್ಕಳ ಉತ್ತಮ ಆರೋಗ್ಯಕ್ಕೆ ಗಮನ ಹರಿಸಬೇಕು. ಪಂಚೆಂದ್ರಿಯಗಳು ಆರೋಗ್ಯವಾಗಿದ್ದರೆ ಮಾತ್ರ ನಾವು ಮಾಡುವ ಕರ‍್ಯದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಋಣಗಳಿಂದ ಮುಕ್ತವಾಗುವುದೇ ನಮ್ಮ ಜೀವನದ ಗುರಿಯಾಗಬೇಕು. ಹೆತ್ತವರ ಮತ್ತು ಗುರುಗಳು ಋಣಗಳ ಗಣಿಯಗಿದ್ದಾರೆ. ರ‍್ತವ್ಯವನ್ನು ನೆನಪಿಸುವ ಸಂಸ್ಕೃತಿ ನಮ್ಮದು. ಜಾನಪದವು ನಮ್ಮ ಹಿರಿಯರು ರೂಢಿಸಿ ಕೊಂಡು ಬಂದ ಸಂಸ್ಕೃತಿ, ಸಂಸ್ಕಾರ ಗಳನ್ನು ನೆನಪಿಸುವುದರೊಂದಿಗೆ ಬದುಕಿಗೆ ಅಗತ್ಯವಿರುವ ಗುಣಗಳನ್ನು ತಿಳಿಸಿಕೊಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಶಿವಾನಂದ ಪಾಟೀಲ, ಇಂದಿನ ವೈಜ್ಞಾನಿಕ ಯುಗದಲ್ಲಿ ಪ್ರತಿಯೊಬ್ಬರೂ ಮನುಷ್ಯತ್ವವನ್ನು ಮರೆಯಬಾರದು. ಮನುಷ್ಯತ್ವ ಮರೆತರೆ ಅನಾಹುತಗಳು ಉಂಟಾಗುತ್ತದೆ. ಇಂತಹ ಕಾರ‍್ಯಾಗಾರದ ಸದುಪ ಯೋಗ ಪಡೆದುಕೊಳ್ಳಬೇಕು. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆ ಮತ್ತು ರಾಜ್ಯಕ್ಕೆ ಹೆಸರು ತರುವಂತಹ ಕೆಲಸವಾಗಬೇಕು. ಅಂದಾಗ ಮಾತ್ರ ಇಂತಹ ಕರ‍್ಯಕ್ರಮಕ್ಕೆ ರ‍್ಥ ಬರುತ್ತದೆ ಎಂದು ಹೇಳಿದರು.

ಮಧ್ಯಾಹ್ನದ ಕಾರ್ಯಾಗಾರಕ್ಕೆ ಭೇಟಿ ನೀಡಿದ ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ (ಸಾಸನೂರ ಮಾತನಾಡಿ), ಕೋವಿಡ್ ರೋಗದಿಂದಾಗಿ ವಿದ್ಯರ‍್ಥಿಗಳ ಕಲಿಕೆಗೆ ಹಿನ್ನಡೆಯಾಗಿತ್ತು. ಈಗ ಎಂದಿನಂತೆ ಶಾಲೆಗಳು ಆರಂಭವಾಗಿವೆ. ವಿದ್ಯರ‍್ಥಿಗಳಲ್ಲಿ ಕಲಿಕಾ ಉತ್ಸಾಹ ಹೆಚ್ಚಳವಾಗಿದೆ. ಇಂತಹ ಕರ‍್ಯಾಗಾರದ ಮೂಲಕ ವಿದ್ಯರ‍್ಥಿಗಳಲ್ಲಿ ಆತ್ಮ ವಿಶ್ವಾಸ ತುಂಬುವುದ ರೊಂದಿಗೆ ಸರಳ ಕಲಿಕೆಗೆ ಅಗತ್ಯವಿರುವ ಅಂಶಗಳನ್ನು ತಿಳಿಸಿಕೊಡುತ್ತಿರುವ ಕರ‍್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಮುಖಂಡರಾದ ಈರಣ್ಣ ಪಟ್ಟ ಣಶೆಟ್ಟಿ, ಬಿ.ಕೆ.ಕಲ್ಲೂರ, ಶಿವನಗೌಡ ಬಿರಾದಾರ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಎಂ.ಎನ್.ಚೋರಗಸ್ತಿ, ಶಿಕ್ಷಣಾಧಿಕಾರಿ ಮಂಜುನಾಥ ಗುಳೇದಗುಡ್ಡ ವೇದಿಕೆಯಲ್ಲಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಂಗಮೇಶ ಪೂಜಾರಿ ಸ್ವಾಗತಿಸಿದರು, ಶಿಕ್ಷಕ ಅಶೋಕ ಹಂಚಲಿ ನಿರೂಪಿಸಿದರು, ಕಾರ‍್ಯಾಗಾರದಲ್ಲಿ ತಾಲ್ಲೂಕಿನ ಪ್ರೌಢ ಶಾಲೆಗಳಿಂದ ೪೫೦ಕ್ಕೂ ಹೆಚ್ಚು ಎಸ್.ಎಸ್.ಎಲ್.ಸಿ ವಿದ್ಯರ‍್ಥಿಗಳು ಪಾಲ್ಗೊಂಡಿದ್ದರು.