ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 1 ಸಾವಿರ ಗಿಡ ನೆಡುವ ಗುರಿ ಹೊಂದಲಾಗಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಜಯರಾಮ್ ವಿವರಿಸಿದರು.
ಯೋಜನೆಯ ಕುರಿತು ಪತ್ರಿಕೆಗೆ ಮಾಹಿತಿ ಹಂಚಿಕೊ0ಡ ಅವರು ಸಾಮಾಜಿಕ ಅರಣ್ಯ ಇಲಾಖೆಯು ಶಾಲಾ ಕಾಲೇಜು, ಅಂಗನವಾಡಿ, ಹಾಸ್ಟೆಲ್, ಸರಕಾರಿ ಕಚೇರಿಗಳ ಆವರಣಗಳಲ್ಲಿ ರಸ್ತೆಬದಿ ಸಹಿತ ಖಾಲಿ ಸ್ಥಳಗಳಲ್ಲಿ 60,000 ಸಾವಿರ ಗಿಡಗಳನ್ನು ನೆಡುವ ಸಲುವಾಗಿ ಕಂದಿಕೆರೆ ಹಾಗು ತರಬೇನಹಳ್ಳಿ ನರ್ಸರಿಗಳಲ್ಲಿ ಬೆಳಸಿದೆ. ಪ್ರತಿ ಗ್ರಾ.ಪಂ ಗೆ ಬೇಡಿಕೆಗೆ ಅನುಗುಣವಾಗಿ ಕನಿಷ್ಠ 1 ಸಾವಿರ ಗಿಡಗಳನ್ನು ನೀಡಿ ತಾಲ್ಲೂಕಿನ 27 ಗ್ರಾ.ಪಂಗಳಿಗೆ ಗಿಡ ನೆಡುವ ಜವಾಬ್ದಾರಿ ನೀಡುತ್ತೇವೆ ಎಂದರು.
ಉದ್ಯೋಗ ಖಾತ್ರಿ ಯೋಜನೆಯಿಂದ ಫಲಾನುಭವಿಗಳಿಗೆ 15 ಸಾವಿರ ಸಸಿಗಳನ್ನು ನೀಡಲಾಗುತ್ತದೆ. ಪ್ರತಿ ಗಿಡಕ್ಕೆ 80 ರೂ ನರೇಗದಡಿ ಅನುದಾನ ಸಿಗಲಿದೆ. ಸಾರ್ವಜನಿಕ ಸಸಿ ವಿತರಣೆಗಾಗಿ ಆರ್‌ಎಸ್‌ಪಿಡಿ ಯೋಜನೆ ಮೂಲಕ 5000 ವಿವಿಧ ತಳಿಯ ಸಸ್ಯಗಳು ಮರಗಳಾಗುವ ಜಾತಿಯ ಗಿಡಗಳನ್ನು ಬೆಳಸ ಲಾಗಿದೆ. ರಾಷ್ಟ್ರೀಯ ವಿಕಾಸ ಯೋಜನೆಯಡಿ 10 ಸಾವಿರಕ್ಕೂ ಹೆಚ್ಚು ವಿವಿಧ ತಳಿಯ ಗಿಡಗಳು, ಶ್ರೀ ಗಂಧದ ಸಸಿಗಳನ್ನು ಬೆಳಸಲಾಗಿದೆ. ಇದರಲ್ಲಿ 5000 ಸಸಿಗಳನ್ನು ಸಾರ್ವಜನಿಕರಿಗೆ ನೀಡಿ ಉಳಿದ ಸಸಿಗಳನ್ನು ಇಲಾಖೆಯಿಂದ ಬೆಳಸಲಾಗುವುದು.
ಸಬ್ ಮಿಷನ್ ಆನ್ ಆಗ್ರೋ ಫಾರೆಸ್ಟಿç ಯೋಜನೆಯ ಮೂಲಕವೂ ಗಿಡಗಳ ನಾಟಿಗೆ ಅವಕಾಶವಿದೆ 6*9 ಅಳತೆ ಚೀಲದ ಸಸಿಗೆ 3 ರೂ, 8*12 ಅಳತೆ ಚೀಲದ ಸಸಿಗೆ 6 ರೂ ಪಾವತಿಸಿ ಫಲಾನುಭವಿಗಳು ಗಿಡ ಪಡೆಯಬಹುದು. ನರೇಗಾ, ಹಾಗು ರಾಷ್ಟ್ರೀಯ ವಿಕಾಸ ಯೋಜನೆಯ ಅಡಿಯಲ್ಲಿ ನುಗ್ಗೆ, ಸೀತಾಫಲ, ಸಾಗುವಾನಿ, ಮಹಾಗನಿ, ಕರಿಬೇವು ಶ್ರೀಗಂಧ ಸಹಿತ 10 ಜಾತಿಯ 25 ಸಾವಿರ ಗಿಡಗಳನ್ನು ಬೆಳಸಲಾಗಿದೆ. ಈ ಯೋಜನೆಯಲ್ಲಿ ಗಿಡಗಳನ್ನು ಉಚಿತವಾಗಿ ನೀಡಲಾಗುವುದು.
ಶಾಲಾ ಕಾಲೇಜುಗಳಿಗೆ, ಗ್ರಾ.ಪಂ ಮೂಲಕ ಗಿಡಗಳನ್ನು ನೀಡಲಾಗುವುದು. ಈ ಮೂಲಕ ಮಕ್ಕಳಲ್ಲೂ ಹಸಿರು ಕ್ರಾಂತಿ ಚಿಂತನೆ ಬೆಳಸಲಾಗುವುದು. ಸಸಿಗಳನ್ನು ಬೆಳಸಲು ಇಲಾಖೆ ಜವಾಬ್ದಾರಿಯುತ ಹೆಜ್ಜೆ ಇಟ್ಟಿದ್ದು ತಾಲ್ಲೂಕಿನಾದ್ಯಂತ ಹಸಿರು ಕ್ರಾಂತಿಗೆ ಮುನ್ನುಡಿ ಬರೆಯಲು ಪ್ರತಿಯೊಬ್ಬರ ಸಹಕಾರವನ್ನು ಸಾಮಾಜಿಕ ವಲಯ ಅರಣ್ಯಾಧಿಕಾರಿ ಜಯರಾಮ್ ಕೋರಿದರು.