Monday, 14th October 2024

ಶಾಲಾ ಕಾಲೇಜುಗಳಿಗೆ ಮಾಡುವ ದಾನ ಶಾಶ್ವತವಾಗುಳಿಯಲಿದೆ :ಪಿ.ಎನ್. ಕೇಶವರೆಡ್ಡಿ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈಶಾ ಫೌಂಡೇಷನ್ ಸಮಾಜಮುಖಿ ಕಾರ್ಯ ಗಳನ್ನು ಮಾಡುತ್ತಿರುವ ಹಾಗೆ.ಜಲ್ಲಿ ಕ್ರಶರ್ ಘಟಕಗಳ ಸಹ ಅಸಂಖ್ಯಾತ ನಿರುದ್ಯೋಗಿಗಳಿಗೆ ಉದ್ಯೋಗ  ನೀಡುವ ಜತೆಗೆ ಸಾಮಾ ಜಿಕ ಕಾರ್ಯಗಳಿಗೂ ಟೊಂಕಕಟ್ಟಿ ನಿಂತಿರುವುದು ಸಂತೋಷ ಪಡುವ ಸಂಗತಿಯಾಗಿದೆ. ದೇಶದ ಆಗರ್ಭ ಶ್ರೀಮಂತರಾದ ಟಾಟಾ ಬಿರ್ಲಾ ಅಂಬಾನಿ ಅದಾನಿ ಅಂತಹ ದೊಡ್ಡ ಮನುಷ್ಯರಿಗೆ ದಾನ ಮಾಡೋ ಮನಸ್ಸಿಲ್ಲ.ಸಮಾಜಕ್ಕೆ ಏನಾದರೂ ಮಾಡಬೇಕು ಎನ್ನುವವರ ಬಳಿ ಹಣ ಇರಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಆಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅಭಿಪ್ರಾಯ ಪಟ್ಟರು.

ತಾಲೂಕಿನ ಕಣಿವೆ ನಾರಾಯಣಪುರ ಗ್ರಾಮದಲ್ಲಿ ಜಲ್ಲಿ ಕ್ರಶರ್ ಮಾಲಿಕರ ಸಂಘವು ೬೦ ಲಕ್ಷ÷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸರಕಾರಿ ಶಾಲೆಯ ಕಟ್ಟಡ ಲೋಕಾರ್ಪ ಣೆಗೊಳಿಸಿ ಮಾತನಾಡಿದರು.

ಮುದ್ದೇನಹಳ್ಳಿ ಎಂಬ ಕುಗ್ರಾಮವನ್ನು ವಿಶ್ವದ ಭೂಪಟದಲ್ಲಿ ಗುರುತಿಸುವಂತೆ ಮಾಡಿ ರುವ ಸರ್.ಎಂ.ವಿಶ್ವೇಶ್ವರಯ್ಯ ಅವರ ತವರು ನೆಲದಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ,ವಸತಿ ಆಶ್ರಯ ದೊರೆಯಬೇಕು ಎನ್ನುವ ಹಂಬಲದಲ್ಲಿ ಖಾಸಗಿ ಸಂಸ್ಥೆಯೊ0ದು ತನ್ನ ಸಿಎಸ್‌ಆರ್ ನಿಧಿಯನ್ನು ಬಳಸಿಕೊಂಡು ಸಹಾಯಕ್ಕೆ ಮುಂದಾ ಗಿರುವುದು ಉತ್ತಮ ಬೆಳವಣಿಗೆ ಯಾಗಿದೆ.

ಇದೇ ರೀತಿ ತಾಲೂಕಿನ ಬೇರೆ ಬೇರೆ ಭಾಗಗಳಲ್ಲಿ ಶಿಥಿಲಗೊಂಡಿರುವ ಕಟ್ಟಡಗಳಿಗೆ ನವೀಕರಣದ ಭಾಗ್ಯ ಕಲ್ಪಿಸಿದೆ ಬಡಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ನೆರವಾಗಲಿದೆ ಎಂದರು.ಮಕ್ಕಳು ಕೂಡ ಇಂತಹ ನೆರವವನ್ನು ಸಾರ್ಥಕ ಮಾಡಬೇಕಾದರೆ ಉತ್ತಮವಾಗಿ ಕಲಿತು ಸಮಾಜಕ್ಕೆ ಆಧಾರವಾಗುವ ಸತ್ಪçಜೆಗಳಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.

ಖಾದಿ ಮತ್ತು ಗ್ರಾಮೋಧ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ ಕಣಿವೆ ನಾರಾಯಣಪುರ ಸುತ್ತಮುತ್ತ ಕ್ರಷರ್ ನಿರ್ಮಾಣವಾದ ಮೇಲೆ ಈ ಭಾಗದ ಬಡವರು ಆರ್ಥಿಕ ಚೈತನ್ಯ ಪಡೆದರೆ,ರೈತರು ಶ್ರೀಮಂತರಾಗಿದ್ದಾರೆ. ಕ್ರಶರ್ ಮಾಲೀಕರು ಕೇವಲ ಹಣ ಮಾಡಲು ಸೀಮಿತವಾಗದೆ, ನಮಗೂ ಕೂಡ ಸಮಾಜದ ಬೆಳವಣಿಗೆಯಲ್ಲಿ ಭಾಗಿಯಾಗುವ ಜವಾಬ್ದಾರಿಯಿದೆ ಎಂದು ಅರಿತು ಶಾಲಾ ಕಟ್ಟಡ ನಿರ್ಮಾಣ ಮಾಡಿದ್ದಾರೆ.

ಶೈಕ್ಷಣಿಕ ಬೆಳವಣಿಗೆಗೆ ನೆರವಾಗುವುದು ಸರ್ವಕಾಲಕ್ಕೂ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವ ಕೆಲಸವಾಗಿದೆ.ಇಂತಹ ಆದರ್ಶ ಕೆಲಸಕ್ಕೆ ಮುಂದಾಗಿರುವ ಕ್ರಶರ್ ಮಾಲಿಕರು ನಿಜಕ್ಕೂ ಅಭಿನಂದನಾರ್ಹರು.ಬಡವರಿಗೂ ಕೂಡ ನೆರವಿನ ಹಸ್ತ ಚಾಚುವ ಅಗತ್ಯವಿದೆ.ಇಲ್ಲಿನ ಮಕ್ಕಳು ವಿಶ್ವೇಶ್ವರಯ್ಯ ಅವರ ಹಾಗೆ ಕಷ್ಟಪಟ್ಟು ಓದಿ ದೇಶ ಸೇವೆ ಮಾಡುವ ಶಕ್ತಿ ಪಡೆದುಕೊಳ್ಳಲು ಭಗವಂತ, ಗುರುಹಿರಿಯರು ಕರುಣಿಸಲಿ ಎಂದರು.

ವೇದಿಕೆಯಲ್ಲಿ ಡಿಡಿಪಿಐ ಜಯರಾಮರೆಡ್ಡಿ, ಪಂಚಮಿ ಸ್ಟೋನ್ ಕ್ರಷರ್ ಮಾಲೀಕ ಶ್ರೀನಿವಾಸ್, ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿನಾರಾಯಣಪ್ಪ, ಹನುಂತರೆಡ್ಡಿ, ಶೈಲಾ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭ,ಶಾಲೆಗೆ ಜಮೀನು ದಾನ ನೀಡಿದ್ದ ನಾರಾಯಣಸ್ವಾಮಿ ಇತರರು ಹಾಜರಿದ್ದರು.