Thursday, 12th December 2024

ಕಾಮಗಾರಿಗೆ ಗುದ್ದಲಿ ಪೂಜೆ

ಗುಬ್ಬಿ : ತಾಲೂಕಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಲಕ್ಕೇನಹಳ್ಳಿ, ತಿಮ್ಮಪ್ಪನ ಹಟ್ಟಿ, ಕಾಡೇಗೌಡನ ಹಟ್ಟಿ ಗ್ರಾಮದಲ್ಲಿ ಶಾಲಾ ಕೊಠಡಿ ಕಾಮಗಾರಿ ಹಾಗೂ ಗ್ರಾಮೀಣ ಪಂಚಾಯಿತಿ ರಾಜ್ ಇಲಾಖೆ ವತಿಯಿಂದ ರಾಯವಾರ,ಚಿದಂಬರ ಆಶ್ರಮದಿಂದ ಬಿದರೆ, ಅಮ್ಮನಘಟ್ಟ ಕೂಡುವ ರಸ್ತೆಯವರೆಗೂ ಒಂದು ಕೋಟಿ ರೂಗಳ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಶಾಸಕ ಎಸ್ಆರ್ ಶ್ರೀನಿವಾಸ್ ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಬಿಇಓ ಸೋಮಶೇಖರ್, ಎ ಇ ಇ ಇಂಜಿನಿಯರ್ ನಟರಾಜು, ಪಿಡಿಒ ಸಿದ್ದರಾಮಯ್ಯ , ಮುಖ್ಯ ಶಿಕ್ಷಕ ಲಕ್ಷ್ಮಣ್, ಯೋಗಾನಂದ, ಮಹೇಂದ್ರ ಕುಮಾರ್, ನರಸಿಯಪ್ಪ, ಪಾಂಡುರಂಗಯ್ಯ, ದೇವೇಗೌಡ, ಪುಟ್ಟರಾಜು, ಗಂಗಾಧರ್, ಶಿವಾಜಿ ರಾವ್, ಸಿದ್ದಯ್ಯ, ಹಾಗೂ ಗ್ರಾಮಸ್ಥರು ಹಾಜರಿದ್ದರು.