Thursday, 12th December 2024

ಜ.10 ರಿಂದ ಜ.26 ರವರೆಗೆ ವಿದ್ಯುತ್‌ ವ್ಯತ್ಯಯ

ಬೆಂಗಳೂರು: ಬೆಂಗಳೂರಿನ ಮಾಗಡಿರೋಡ್, ತಾವರೆಕೆರೆ ಸೇರಿ ಮೂವತ್ತಕ್ಕೂ ಹೆಚ್ಚು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಕೆಪಿಟಿಸಿಲ್ ಮಾಗಡಿ-ಬ್ಯಾಡರಹಳ್ಳಿ 66 ಕೆ.ವಿ. ಮಾರ್ಗದ ದುರಸ್ತಿ ಕಾರ್ಯ ಕೈಗೊಂಡಿರುವ ಹಿನ್ನೆಲೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.
ಜ.10 ರಿಂದ ಜ.26 ರವರೆಗೆ 16 ಬರೋಬ್ಬರಿ 16 ದಿನಗಳ ಕಾಲ ತಾವರೆಕೆರೆ ಹಾಗೂ ಮಾಚೋಹಳ್ಳಿ ಸುತ್ತಮುತ್ತ ಬೆಳಗ್ಗೆ 8ರಿಂದ ರಾತ್ರಿ 8ರ ಅವಧಿ ನಡುವೆ 2-3 ಗಂಟೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.
ಬೆಂಗಳೂರಿನ ಯಾವ ಕ್ಷೇತ್ರದಲ್ಲಿ ವಿದ್ಯುತ್ ವ್ಯತ್ಯಯ! ತಾವರೆಕೆರೆ ವ್ಯಾಪ್ತಿಯ ಚನ್ನೇನಹಳ್ಳಿ, ಯರ್ರಪ್ಪ ಕೈಗಾರಿಕಾ ಪ್ರದೇಶ, ದೊಡ್ಡಾಲದ ಮರ, ಹೊನಗನಹಟ್ಟಿ, ಗಾಣಕಲ್ ಕೈಗಾರಿಕಾ ಪ್ರದೇಶ, ಯಲಚಗುಪ್ಪೆ, ಗಂಗಪ್ಪನಹಳ್ಳಿ, ಯಲ್ಲಪ್ಪನ ಪಾಳ್ಯ, ಕೆಂಪಗೊಂಡನಹಳ್ಳಿ, ನಾಗನಹಳ್ಳಿ, ಪೆದ್ದನಪಾಳ್ಯ, ದೇವಮಾಚೋಹಳ್ಳಿ. ಹಾಗೂ ಮಾಚೋಹಳ್ಳಿ ವ್ಯಾಪ್ತಿಯ ಕಾಚೋಹಳ್ಳಿ, ಕಲ್ಪಾ ಕೈಗಾರಿಕಾ ಪ್ರದೇಶ, ಚಿಕ್ಕಗೊಲ್ಲರಹಟ್ಟಿ, ಫಾರೆಸ್ಟ್ ಗೇಟ್ ಕೈಗಾರಿಕಾ ಪ್ರದೇಶ, ಕೆ.ಜಿ. ಲಕ್ಕೇನಹಳ್ಳಿ. ಮಂಚನಬೆಲೆ ಕಾಲೋನಿ, ಸೀಗೇಹಳ್ಳಿ ಗೇಟ್, ಕಡಬಗೆರೆ ಕ್ರಾಸ್, ಶ್ರೀನಿಧಿ ಲೇಔಟ್, ವಿನಾಯಕ ಬಡಾವಣೆ, ರಾಘವೇಂದ್ರ ಲೇಔಟ್, ಸೂರ್ತಿ ಬಡಾವಣೆ, ಕೆ.ಕೆ.ಲೇಔಟ್, ಅರ್ಕಾವತಿ ಲೇಔಟ್, ಮಹಿಮಣ್ಣನಪಾಳ್ಯ, ಲಕ್ಷ್ಮೀ ಬಡಾವಣೆ, ಕಿನ್ನಹಳ್ಳಿ ರಸ್ತೆ, ಸ್ಫೂರ್ತಿ ಬಡಾವಣೆ, ರಾಘವೇಂದ್ರ ಬಡಾವಣೆ, ಸೀಗೆಹಳ್ಳಿ, ಕಡಬ ಗೆರೆ, ಬೈಲಾಕೋನೆನಹಳ್ಳಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.