Friday, 20th September 2024

ನಾಳೆಯಿಂದ ಮೂರು ದಿನ ವಿದ್ಯುತ್ ವ್ಯತ್ಯಯ

ಬೆಂಗಳೂರು : ಬೆಸ್ಕಾಂ ವಿವಿಧ ವಿದ್ಯುತ್ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುವ ಕಾರಣ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಆ.31 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಆಗಸ್ಟ್ 29ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಲಕ್ಷ್ಮಿ ಲೇಔಟ್, ಕಮ್ಮನಹಳ್ಳಿ, ಶಾಂತಿನಿಕೇತನ ಮತ್ತು ಉಪವಿಭಾಗದ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಂಜೀವಪ್ಪ ಕಾಲೋನಿ, ನ್ಯೂ ಬಿ.ಇ.ಎಲ್ ರಸ್ತೆ, ಎಂ.ಎಸ್. ಆರ್ ನಗರ, ಮೋಹನ್ ಕುಮಾರ ನಗರ, ಪಂಪಾ ನಗರ, ಬಿ.ಕೆ. ನಗರ,ಬಾಂಬೆ ಡೈಯಿಂಗ್ ರಸ್ತೆ, ಹೆಚ್.ಎಂ.ಟಿ. ಲೇ ಔಟ್, ಬೃಂದಾವನ ನಗರ, ಎಸ್.ಬಿ.ಎಮ್ ಕಾಲೋನಿ, ಎಂ.ಆರ್.ಜೆ ಕಾಲೋನಿ, ವಿ.ಆರ್.ಲೇ ಔಟ್, ಜೆ.ಪಿ ಪಾರ್ಕ್ ಯಶವಂತಪುರ ಮೊದಲನೆ ಮುಖ್ಯ ರಸ್ತೆ, ಗೋಕುಲ, ಹೆಚ್.ಎಂ.ಟಿ. ಮುಖ್ಯ ರಸ್ತೆ,ಯಲ್ಲಿ ಕರೆಂಟ್ ಇರಲ್ಲ.

ಆಗಸ್ಟ್ 31ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ವೆಗಾ ಸಿಟಿ ಮಾಲ್, ಬನ್ನೇರುಘಟ್ಟ ಮುಖ್ಯ ರಸ್ತೆ, ಐಎಎಸ್ ಕಾಲೋನಿ, ಕೆಎಎಸ್ ಕಾಲೋನಿ, ಎನ್‌ಎಸ್ ಪಾಳ್ಯ ಕೈಗಾರಿಕಾ ಪ್ರದೇಶ, ಬಿಳೇಕಹಳ್ಳಿ ಮುಖ್ಯ ರಸ್ತೆ, ಜಯನಗರ 4 ಟಿ, 9 ಬ್ಲಾಕ್, ಈಸ್ಟ್ ಎಂಡ್, ಬಿಎಚ್‌ಇಎಲ್ ಲೇಔಟ್, ಎನ್‌ಎಎಲ್ ಲೇಔಟ್, ತಿಲಕ್ ನಗರ, ಜಯದೇವ ಆಸ್ಪತ್ರೆ, ರಂಕಾ ಕಾಲೋನಿ ರಸ್ತೆ, ಬಿಸ್ಮಿಲ್ಲಾ ನಗರ, ಬಿಟಿಎಂ 1 ಹಂತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.