ಬೆಂಗಳೂರೂ: ಲೈಂಗಿಕ ಕೇಸ್ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ, ಸಂಸದ ಪ್ರಜ್ವಲ್ ರೇವಣ್ಣ ಬ್ಯಾಂಕ್ ಖಾತೆಗೆ ಭಾರತದಿಂದ ಹಣ ವನ್ನು ಹಾಕಿದ್ದಾರೆ ಎನ್ನಲಾಗಿದೆ.
ಈ ನಡುವೆ ಪ್ರಜ್ವಲ್ ರೇವಣ್ಣನೊಂದಿಗೆ ಇಬ್ಬರು ಸ್ನೇಹಿತರು ಕೂಡ ಇದ್ದು, ಅದರಲ್ಲಿ ಒಬ್ಬರು ಬೆಂಗಳೂರಿನವರು, ಮತ್ತೊಬ್ಬರು ದುಬೈ ಮೂಲದವರು ಎನ್ನಲಾಗಿದೆ.
ಇನ್ನೂ ಸಂಸದರಿಗೆ ಬ್ಯಾಂಕ್ ಖಾತೆ ಬಂದ್ ಮಾಡುವ ಸಲುವಾಗಿ ಕೋರ್ಟ್ನಿಂದ ಅನುಮತಿ ಪಡೆದುಕೊಳ್ಳುವ ಸಲುವಾಗಿ ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನೂ ಹಲವು ಮಂದಿ ಕೂಡ ವಿದೇಶದಲ್ಲಿ ಅವರಿಗೆ ಸಹಾಯ ನೀಡುತ್ತಿರುವುದು ಈಗ ಎಸ್ಐಟಿ ಅಧಿಕಾರಿಗಳಿಗೆ ತಲೆನೋವಾಗಿದೆ.
ಇದಲ್ಲದೇ, ಕೆಲವು ಮಂದಿ ಲಂಡನ್ಗೆ ತೆರಳುವುದಕ್ಕೆ ಹಾಸನ ಮೂಲದ ಉದ್ಯಮಿಯೊಬ್ಬರು, ಸದ್ಯ ಲಂಡನ್ನಲ್ಲಿದ್ದು ಅವರು ಪ್ರಜ್ವಲ್ ಅವರಿಗೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ.