Friday, 20th September 2024

ಸಾರ್ವಜನಿಕ ಸಾರಿಗೆ ಉಪಕ್ರಮಗಳ ಬಲವರ್ಧನೆಗೆ ಪ್ರವಾಸ್ ೪.೦ ಪ್ರದರ್ಶನ

• ಬೆಂಗಳೂರಿನ ಪ್ರವಾಸ್‌ನ ೪ ನೇ ಆವೃತ್ತಿ
• ಅಂತಾರಾಷ್ಟಿçÃಯ ಪ್ರದರ್ಶನ ಕೇಂದ್ರದಲ್ಲಿ ಪ್ರದರ್ಶನ
• ಆಗಸ್ಟ್ ೨೯ ರಿಂದ ೩೧ ರವರೆಗೆ ನಡೆಯಲಿರುವ ಪ್ರದರ್ಶನ

ಬೆಂಗಳೂರು: ಬಹುನಿರೀಕ್ಷಿತ ಭಾರತದ ಬಹುಮಾದರಿ ಸಾರಿಗೆ ಪ್ರದರ್ಶನವಾದ ಪ್ರವಾಸ್ ೪.೦ ದ ೪ ನೇ ಆವೃತ್ತಿಯನ್ನು ಬಸ್ ಅಂಡ್ ಕಾರ್ ಆಪರೇಟರ್ಸ್ ಕಾನ್‌ಫೆಡರೇಷನ್ ಆಫ್ ಇಂಡಿಯಾ (BOCI) ಘೋಷಣೆ ಮಾಡಿದ್ದು, ಬೆಂಗಳೂರಿನ ಇಂಟರ್‌ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ (ಬಿಐಇಸಿ)ಯಲ್ಲಿ ಆಗಸ್ಟ್ ೨೯ ರಿಂದ ೩೧ ರವರೆಗೆ ಈ ಪ್ರದರ್ಶನ ನಡೆಯಲಿದೆ.

“ಸುರಕ್ಷತೆ, ಸ್ಮಾರ್ಟ್ ಮತ್ತು ಸುಸ್ಥಿರ ಪ್ರಯಾಣಿಕ ಸಾರಿಗೆ’’ (Safe, Smart, and Sustainable Passenger Mobility) ಎಂಬ ಪ್ರಮುಖ ವಿಷಯದೊಂದಿಗೆ ಈ “ಪ್ರವಾಸ್ ೪.೦’’ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ಬಹುಮಾದರಿಯ ಸಾರಿಗೆ ಭಾಗಿದಾರರೆಲ್ಲರನ್ನೂ ಒಟ್ಟಿಗೆ ಸೇರಿಸಲು ಈ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ದೇಶದ ೩೬ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಸ್ ಮತ್ತು ಕಾರುಗಳ ಉತ್ಪಾದಕ ಸಂಸ್ಥೆಗಳು, ಸಾರಿಗೆ ಕ್ಷೇತ್ರದ ಮಾಲೀಕರಯ ಹಾಗೂ ಮೆಟ್ರೋ ಮತ್ತು ಎಲ್‌ಇವಿ ಸಂಸ್ಥೆಗಳು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿವೆ. ಗೌರವಾನ್ವಿತ ಪ್ರಧಾನಮಂತ್ರಿಯವರ “ವಿಕಸಿತ್ ಭಾರತ’’ದ ದೃಷ್ಟಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದಕ್ಷ ಸಾರ್ವಜನಿಕ ಸಾರಿಗೆಯ ಪ್ರಮುಖ ಪಾತ್ರವನ್ನು ಈ ಪ್ರವಾಸ್ ೪.೦ ವಹಿಸುತ್ತಿದೆ. ಈ ಮೂಲಕ ಸಾರ್ವಜನಿಕ ಸಾರಿಗೆ ಬಳಕೆಯನ್ನು ಹೆಚ್ಚು ಮಾಡುವುದನ್ನು ಪ್ರೋತ್ಸಾಹಿಸುತ್ತಿದೆ. ಇಂತಹ ಬದಲಾವಣೆಯು ರಸ್ತೆಯಲ್ಲಿನ ವಾಹನ ಸಂಚಾರ ದಟ್ಟಣೆಯನ್ನು ನಿವಾರಿಸುವುದಲ್ಲದೇ ಸುಸ್ಥಿರತೆಯ ಉದ್ದೇಶಗಳನ್ನು ಹೊಂದಿದೆ.

ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಖಾಸಗಿ ಸಾರಿಗೆ ಮಾಲೀಕರ ಸಂಘ, ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇರ‍್ಸ್ ಅಸೋಸಿಯೇಷನ್, ಕರ್ನಾಟಕ ಟೂರಿಸ್ಟ್ ಮೋಟರ್ ಕ್ಯಾಬ್ ಮ್ಯಾಕ್ಸಿ ಓರ‍್ಸ್ ವೆಲ್‌ಫೇರ್ ಅಸೋಸಿಯೇಷನ್, ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಓರ‍್ಸ್ ಅಸೋಸಿಯೇಷನ್ ಸಂಸ್ಥೆಗಳು ಈ ಪ್ರವಾಸ್ ೪.೦ ನ ಆತಿಥ್ಯ ವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.