Friday, 1st December 2023

ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ

ಇಂಡಿ: ನಗರದ ಹಂಜಗಿ ರಸ್ತೆಯ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಇಂದು ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧ ವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಭಾರತ ಭಾವೈಕ್ಯತೆ ಬೀಡು ಇಂತಹ ಸುಂದರ ದೇಶ ಜಗತ್ತಿನಲ್ಲಿ ಎಲ್ಲಿಯೂ ಸಿಗದು . ಭಗವಂತ ಸುಂದರವಾದ ಶರೀರ ಕೊಟ್ಟಿ ದ್ದಾನೆ. ಯಾವುದೇ ದುಷ್ಠ ಮಾರ್ಗಗಳಿಂದ ಹಾನಿ ಮಾಡಿಕೊಳ್ಳಬಾರದು ಪ್ರತಿಯೋಬ್ಬ ಮಾನವನು ಸಮಾಜದ ಒಳಿತಿಗಾಗಿ ಶ್ರಮಿಸ ಬೇಕು. ದೀನರನ್ನು ಬಡವರನ್ನು ಅನಾಥರನ್ನು ಕೈಲಾದಮಟ್ಟಿಗೆ ಧಾನ ಮಾಡಬೇಕು. ನಿಮ್ಮ ದುಡಿಮೆಯಲ್ಲಿ ಬೇರೆಯ ವರಿಗಾಗಿ ಪಾಲು ಇರಲಿ ಗಳಿಸಿದ್ದೇಲ್ಲ ನಿಮ್ಮದಲ್ಲ ಅಲ್ಲಾ ಕೊಟ್ಟು ನೋಡುತ್ತಾನೆ, ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಲ್ಲಾ ಧರ್ಮಗ್ರಂಥಗಳ ಸಾರ ಒಂದೇ ದೇವರು ಒಬ್ಬನೇ ಅವನು ನಿರಾಕಾರ. ಭಗವಂತ ಮಳೆ ಬೆಳೆ ಕರುಣಿಸಲಿ ರೈತರ ಮೋಗದಲ್ಲಿ ಮಂದ ಹಾಸ ಬೀರಲಿ ದೇಶ ಸಸ್ಯ ಶ್ಯಾಮಲ್ಯಗಳಿಂದ ಕಂಗೊಳಿಸಲಿ ಸೃಷ್ಠೀಕರ್ತ ಎಲ್ಲರಿಗೂ ಆರೋಗ್ಯ ಭಾಗ್ಯ ಕೊಟ್ಟು ಕರುಣಿಸಲಿ ಎಂದು ಮುಪ್ತಿ ಅಬ್ದುಲ ರಹೇಮಾನ ಅರಬ ಮಾತನಾಡಿದರು.

ಮಹಿಬೂಬ ಅರಬ, ರೈಸ ಅಷ್ಠೇಕರ್, ಸಲೀಮ ಶೇಖ ತುರಬ ಪಠಾಣ, ಹಫೀಜ ಶಹಾನವಾಜ್ , ಷರೀಫ ಪಟೇಲ, ಅಬ್ದುಲ ರಶೀದ ಮುಗಳಿ, ರಷೀದ ಅರಬ,ಸತಾರ ಭಾಗವಾನ, ಅಯುಬ ಬಾಗವಾನ, ಅಸ್ಲಂ ಕಡಣಿ , ಜಬ್ಬಾರ ಅರಬ, ಇಲಿಯಾಸ ಬೋರಾಮಣಿ, ಜಾವೀದ ಮೋಮಿನ್, ಜಹಾಂಗೀರ ಸೌದಾಗರ, ಮುಸ್ತಾಕ ಇಂಡಿಕರ್, ಜೈನೂದೀನ ಬಾಗವಾನ, ಇಮ್ರಾನ ಮುಜಾವರ, ಪುರಸಭೆ ಉಪಾಧ್ಯಕ್ಷ ಇಸ್ಮಾಯಿಲ್ ಅರಬ, ಯಾಸೀನ ತುರ್ಕಿ, ಯುನಿಸ್ ರೇವೂರಕರ್, ಖ್ಯಾತ ಉದ್ದೀಮೆದಾರ ಅತೀಕಅಹಮ್ಮದ ಶೇಖ, ಮುಕ್ತಾರ ಅರಬ, ಉಸ್ಮಾನಗಣಿ ಶೇಖ, ಅತೀಕ ಮೋಮಿನ್, ಮುನ್ನಾ ಡಾಂಗೆ, ಫಾರೂಕ ಪಠಾಣ, ನಜೀರ ಪಠಾಣ, ಅಪ್ಪು ಬಾಗವಾನ, ಸಲೀಂ ಶೇಖ, ಮುನ್ನಾ ಬಾಗವಾನ ,ಸೇರಿದಂತೆ ಇಸ್ಲಾಂ ಧರ್ಮಗುರುಗಳು ಹಾಗೂ ಮುಖಂಡರು ಹಿರಿಯರು ಪ್ರಾರ್ಥನೆಯಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!