Thursday, 12th December 2024

ಆರುವರೆ ತಿಂಗಳಿಗೆ ಮಗು ಜನನ: ಹೆರಿಗೆ ಯಶಸ್ವಿ 

ತುಮಕೂರು: ತಾಯಿ ಗರ್ಭದಲ್ಲಿ ಸಮರ್ಪಕ ಬೆಳವಣಿಗೆ ಆಗದೆ ಆರೂವರೆ ತಿಂಗಳಿಗೆ ಜನಿಸಿದ ಶಿಶುವಿನ ಹೆರಿಗೆ ಮಾಡಿಸುವಲ್ಲಿ ನಗರದ ಶಿರಾಗೇಟ್‌ನ ಅದಿತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ  ವೈದ್ಯರು ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ವೈದ್ಯ ಡಾ.ಚಂದನ್ ಮಾತನಾಡಿ, ಸುಮಾರು ಮೂರ್ನಾಲ್ಕು ತಿಂಗಳ ಕಾಲ ತಾಯಿ ಯ ಆರೋಗ್ಯದ ಬಗ್ಗೆ ವಿಶೇಷ ನಿಗಾ ವಹಿಸಿ, ಚಿಕಿತ್ಸೆ ನೀಡಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ತಾಯಿ ಮಗುವನ್ನು ಆರೋಗ್ಯ ರಕ್ಷಿಸಲಾಗಿದೆ ಎಂದು ಹೇಳಿದರು.
ನಗರದ ಶಿರಾಗೇಟ್ ಟೂಡಾ ಲೇಔಟ್ ನಿವಾಸಿಯಾದ ಗರ್ಭಿಣಿ ತಾಯಿ ದಿವ್ಯಾ ಅವರನ್ನು ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿದಾಗ ಮಗುವಿನ ಬೆಳವಣಿಗೆ ಸಮರ್ಪಕ ವಾಗಿರಲಿಲ್ಲ ಎಂಬುದು ತಿಳಿದು ಬಂದಿತು, ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ತಾಯಿಗೆ ಹಾಗೂ ಗರ್ಭದಲ್ಲಿರುವ ಶಿಶುವಿಗೆ ಸೂಕ್ತ ಚಿಕಿತ್ಸೆ, ಔಷಧೋಪಚಾರ ಮಾಡುತ್ತಾ ಆರೋಗ್ಯ ರಕ್ಷಣೆ ಮಾಡಲಾ ಯಿತು. ಅವಧಿ ತುಂಬಿದ ಹೆರಿಗೆಗಾಗಿ ಚಿಕಿತ್ಸೆ ಮೂಲಕ ಪ್ರಯತ್ನ ಮಾಡಲಾಯಿತಾದರೂ ಸಾಧ್ಯವಾಗದೆ ಆರೂವರೆ ತಿಂಗಳಿಗೆ ಹೆರಿಗೆಯಾಯಿತು. ಜನಿಸಿದ ಗಂಡು ಶಿಶುವಿನ ತೂಕ 770 ಗ್ರಾಂ ಇತ್ತು. ಅದರ ಶ್ವಾಸಕೋಶ ಬೆಳವಣಿಗೆ ಆಗಿರಲಿಲ್ಲ, ರಕ್ತ ಉತ್ಪಾ ದನಾ ಅಂಗಾಗಗಳು ಬೆಳವಣಿಗೆ ಆಗಿರಲಿಲ್ಲ. ಹೆರಿಗೆಯಾದ ಅರ್ಧಗಂಟೆಯಿಂದ ಶಿಶುವನ್ನು ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ಆರಂಭಿಸಿದೆವು ಎಂದರು.
ಡಾ.ಲಿಖಿತಾ ಮಾತನಾಡಿ, ಇಂತಹ ಮಗುವಿಗೆ ಜೀರ್ಣ ಶಕ್ತಿಯೂ ಕಡಿಮೆ ಇರುವುದರಿಂದ ಅದಕ್ಕೂ ಚಿಕಿತ್ಸೆ ನೀಡಲಾಗಿದೆ. ಸಾಕಷ್ಟು ಕಷ್ಟ ಅನುಭವಿಸಿದ ಮಗು ಈಗ ಆರೋಗ್ಯವಾಗಿದೆ. ಈಗ ಮಗುವಿನ ತೂಕ ಒಂದು ಕೆಜಿ 400 ಗ್ರಾಂ ಆಗಿದ್ದು ಆರೋಗ್ಯ ವಾಗಿರುವ ತಾಯಿ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಚಿಕಿತ್ಸೆ ಪಡೆದ ತಾಯಿ ದಿವ್ಯಾ, ಪತಿ ಸಂಜಯ್,  ಮಗುವಿನೊಂದಿಗೆ   ಅನುಭವ ಹಂಚಿಕೊಂಡರು.