Sunday, 24th November 2024

Yadgir News: ಯಮಸ್ವರೂಪಿ ವೈದ್ಯಳ ನಿಷ್ಕಾಳಜಿಗೆ ಬಾಣಂತಿ ಸಾವು

ಯಾದಗಿರಿ: ರೋಗಿಗಳ ಪಾಲಿಗೆ ದೇವರಾಗಬೇಕಾದ ವೈದ್ಯೆ ಈಗ ಬಾಣಂತಿಯ ಪಾಲಿಗೆ ಯಮಸ್ವರೂಪಿಯಾಗಿದ್ದಾಳೆ. ವೈದ್ಯಳ ನಿಷ್ಕಾಳಜಿತನಕ್ಕೆ ಬಾಣಂತಿ ಬಲಿಯಾಗಿದ್ದಾಳೆ. ಒಂದುವರೆ ತಿಂಗಳ ನಂತರ ಬಾಣಂತಿ ಸೋಮವಾರ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಮಗಳನ್ನು ಕಳೆದುಕೊಂಡ ಕುಟುಂಬಸ್ಥರು ಈಗ ಕಣ್ಣೀರಲ್ಲಿ ಕೈತೊಳೆ ಯುತ್ತಿದ್ದಾರೆ.

ಸೆಪ್ಟೆಂಬರ್ 2 ರಂದು ಶಹಾಪುರ ತಾಲೂಕಾ ಆಸ್ಪತ್ರೆಯಲ್ಲಿ ವೈದ್ಯೆ ಸರೋಜಾ ಪಾಟೀಲ ನಿಂದ ಯಡವಟ್ಟು ಸರ್ಜರಿ ಯಾಗಿದ್ದು ಸರಿಯಾಗಿ ಸರ್ಜರಿ ಮಾಡದೇ ಯಡವಟ್ಟು ಮಾಡಿದ ವೈದ್ಯೆಯಿಂದಾಗಿ ತೀವ್ರ ರಕ್ತಸ್ರಾವವಾಗಿ ನಂತರ ಕಲಬುರಗಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಿದ್ದ ವೈದ್ಯೆ. ನಂತರ ಕಿಡ್ನಿ ವೈಫಲ್ಯದಿಂದ ಬಳಲಿ ಬಾಣಂತಿ ಸಾವನ್ನಪ್ಪಿದ್ದಾಳೆ.

ತಪ್ಪಿತಸ್ಥ ವೈದ್ಯಳ ವಿರುದ್ಧ ಕ್ರಮಕ್ಕೆ ಪೋಷಕರ ಒತ್ತಾಯ: ವೈದ್ಯ ಸರೋಜಾ ಪಾಟೀಲ ಯಡವಟ್ಟಿಗೆ ಅಮಾ ಯಕ ಜೀವ ಬಲಿಯಾಗಿದೆ. ತಾಲೂಕಿನ ದೋರನಹಳ್ಳಿ ಗ್ರಾಮದ ಭವಾನಿ ಹೊಟ್ಟೆ ನೋವಿನಿಂದ ಬಳಲಿ ಮೃತಪಟ್ಟಿ ದ್ದಾಳೆ. ಸೆಪ್ಟೆಂಬರ್ 2 ರಂದು ಭವಾನಿ ತಾಲೂಕಾ ಆಸ್ಪತ್ರೆಗೆ ದಾಖಲಾಗಿದ್ದಳು. ಈ ವೇಳೆ ವೈದ್ಯ ಸರೋಜಾ ಪಾಟೀಲ ಸಿಜಿರಿನ್ ಮೂಲಕ ಹೆರಿಗೆ ಮಾಡಿದರು.ಭವಾನಿ ಗಂಡು ಮಗುವಿಗೆ ಜನ್ಮ ನೀಡಿದಳು. ಸಿಜಿರಿನ್ ಮಾಡುವ ವೇಳೆ ವೈದ್ಯೆ ಸರಿಯಾಗಿ ಸ್ಟಿಚಿಂಗ್ ಮಾಡದೇ ನಿರ್ಲಕ್ಷ್ಯ ತೊರಿದಳು.ಪರಿಣಾಮ ತೀವ್ರ ರಕ್ತ ಸ್ರಾವದಿಂದ ಬಳಲಿದ್ದಾಳೆ. ನಂತರ ಡಾ.ಸರೋಜಾ ಪಾಟೀಲ ಅವರೇ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಮತ್ತೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರಂತೆ.ಬ್ಲಿಡಿಂಗ್ ಹೆಚ್ಚಾದ ಹಿನ್ನಲೆ ಕಿಡ್ನಿ ಸಮಸ್ಯೆಯಾಗಿದೆ.ನಂತರ ಮಹಾರಾಷ್ಟ್ರದ ಸೊಲ್ಲಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು .ಸುಮಾರು 15 ಲಕ್ಷ ರೂಪಾಯಿ ಚಿಕಿತ್ಸೆಗೆ ಹಣ ಖರ್ಚು ಮಾಡಿದ್ದಾರೆ. ನಂತರ ಇದೆ 11 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮರಳಿ ಊರಿಗೆ ಕರೆದುಕೊಂಡು ಬರಲಾಗಿತ್ತು ನಂತರ ನಿನ್ನೆ ರಾತ್ರಿ ಹೊಟ್ಟೆ ನೋವಿನಿಂದ ಬಳಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಎಂದು ಮೃತ ಭವಾನಿ ಪತಿ ಮಹಾಂತೇಶ್ ತಿಳಿಸಿದ್ದಾರೆ.

ತಪ್ಪಿತಸ್ಥ ವೈದ್ಯರಾದ ಸರೋಜಾ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ. ಮೃತ ಕುಟುಂಬ ಸದಸ್ಯರು ಹೆದ್ದಾರಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪರಿಹಾರ ಒದಗಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಪುರ ಅವರು ಸ್ಥಳಕ್ಕೆ ಬರಬೇಕು ಕೂಡಲೇ ಡಾ. ಸರೋಜ ಪಾಟೀಲ ಅವರನ್ನು ಅಮಾನತು ಮಾಡಲು ಪಟ್ಟು ಹಿಡಿದರು. ಬಳಿಕ ಎಸ್ಪಿ ಧರಣಿಶ್ ಹಾಗೂ ಎಸಿ, ತಸೀಲ್ದಾರ್ ಉಮಾಕಾಂತ ಹಳ್ಳೆ ಅವರು ಭೇಟಿ ನೀಡಿ ಸಮಾಧಾನಗೊಳಿಸುವ ಪ್ರಯತ್ನ ಪಟ್ಟರು ಆದರೂ ಕುಟುಂಬಸ್ಥರು ಜಗ್ಗಲಿಲ್ಲ. ನಂತರ ಲಿಖಿತ ರೂಪದ ಭರವಸೆ ನೀಡಿದರು. ಸರೋಜಾ ಪಾಟೀಲ ವಿರುದ್ಧ ಶಹಾಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

*

ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ತನಿಖೆ ನಂತರ ಈ ಬಗ್ಗೆ ಗೊತ್ತಾಗಲಿದೆ.
ಡಾ.ಎಂ.ಎಸ್.ಪಾಟೀಲ (ಡಿಎಚ್ಓ)

ತಾಯಿ ನಿಧನದಿಂದ ಈಗ ನವಜಾತ ಶಿಶು ಅನಾಥವಾಗಿದೆ.ಮೃತ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.ಈ ಬಗ್ಗೆ ತಪ್ಪಿತಸ್ಥ ವೈದ್ಯಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.