Sunday, 24th November 2024

ಖಾಸಗಿ ಶಿಕ್ಷಣ ಸಂಸ್ಥೆಯ ವಿರುದ್ಧ ಹೋರಾಟ: ಹನುಮಂತ

ಶುಲ್ಕಕ್ಕಾಗಿ ವಿದ್ಯಾರ್ಥಿಗೆ ದೈಹಿಕ ಹಿಂಸೆ..

ಮಾನವಿ : ತಾಲೂಕಿನ ಅಮರಾವತಿ ಗ್ರಾಮದ ಆರನೇ ತರಗತಿಯ ವಿದ್ಯಾರ್ಥಿ ಇಮಾನ ವೇಲ್ ಕಳೆದ ಐದಾರು ವರ್ಷಳಿಂದ ಉಚಿತ ಮತ್ತು ಕಡ್ಡಾಯ ಶಿಕ್ಷಣದಡಿಯಲ್ಲಿ ಪಟ್ಟಣದ ಲಕ್ಷ್ಮೀ ಮಹಾವೀರ ಗಣೇಶ ಸರಸ್ವತಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತಿರುವ ವಿದ್ಯಾರ್ಥಿಗೆ ಶಾಲೆ ಶುಲ್ಕ ಕಟ್ಟುವಂತೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯ ಎಂ ಭಾಗ್ಯಲಕ್ಷ್ಮೀ ಮತ್ತು ಅವರ ಪತಿ ನಾಗೇಶರಾವ್ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ದ್ದಲ್ಲದೆ ಪಾಲಕರಿಗೆ ಶುಲ್ಕ ಕಟ್ಟುವಂತೆ ನೋಟೀಸ್ ಜಾರಿ ಮಾಡಿ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಆ.19 ರಂದು ದಲಿತ ಸಂರಕ್ಷ ಸಮಿತಿಯಿಂದ ಹೋರಾಟ ಮಾಡಲಾಗುತ್ತದೆ ಎಂದು ಹನುಮಂತ ಜೆ ಹೇಳಿದರು.

ನಂತರ ಮಾತಾನಾಡಿದ ಅವರು ವಿದ್ಯಾರ್ಥಿ ದಲಿತ ಎನ್ನುವ ಕಾರಣಕ್ಕೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಪಾಲಕರನ್ನು ತರಾಟೆಗೆ ತೆಗೆದುಕೊಂಡರು ನೀವು ಏನು ಮಾಡ್ತಿರೋ ಮಾಡಿ ನಾವು ಯಾವ ರಾಜಕಾರಣಿಳಿಗೆ ಅಥವಾ ಅಧಿಕಾರಿಗಳಿಗೆ ಬೆದರುವು ದಿಲ್ಲ ಎಂದು ನೇರವಾಗಿ ಹೇಳಿಕೆ ನೀಡುವುದರ ಜೊತೆಗೆ ವಿದ್ಯಾರ್ಥಿಯನ್ನು ಅವಮಾ ನಿಯ ರೀತಿಯಲ್ಲಿ ನಡೆಸಿಕೊಂಡು ಮಾನ ಹಾರಜು ಹಾಕಿದ್ದಾರೆ ಇದನ್ನು ಗಂಭೀರವಾಗಿ ಪರಿಗಣಿಸಿ ತಾಲೂಕಿ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಶಿಕ್ಷಣ ಅಧಿಕಾರಿಗಳು ಕೂಡ ಕಾನೂನು ಕ್ರಮವನ್ನು ಕೈಗೊಳ್ಳಲು ಹೋರಾಟ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಿದ್ದಪ್ಪ ದೊಡ್ಡಮನಿ,ಕೆಂಚಪ್ಪ ಸಿಕೆ, ಶಾಂತ,ಬಸವರಾಜ,ಪೇತ್ರ,ಸಿಮೋನಾ,ವಿರೇಶ,ಸಂದೀಪ ಕುರ್ಡಿ, ಸುಧಾಕರ,ಹನುಮೇಶ,ರಾಜೇಶ ಸೇರಿದಂತೆ ಅನೇಕರು ಇದ್ದರು.