Sunday, 27th October 2024

ಜು.೯ ರಂದು ಪ್ರತಿಭಾ ಪುರಸ್ಕಾರ

ಚಿಕ್ಕನಾಯಕನಹಳ್ಳಿ: ಕನಕ ವಿದ್ಯಾಭಿವೃದ್ಧಿ ಸೇವಾ ಟ್ರಸ್ಟ್ ಜು.೯ ರಂದು ಮಧ್ಯಾಹ್ನ ೨ಕ್ಕೆ ಪಟ್ಟಣದ ಕನಕ ಭವನದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾಥಿ೯ಗಳ ಶಾಲಾ ಕಾಲೇಜು ಶುಲ್ಕ ಪಾವತಿ, ಉಚಿತ ನೋಟ್ ಪುಸ್ತಕ ಹಾಗೂ ಸಹಾಯಧನ ವಿತರಣೆ ಸಮಾರಂಭ ಹಮ್ಮಿಕೊಂಡಿದೆ.

ಎಸ್ಎಸ್ಎಲ್ಸಿಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ತಾಲೂಕಿನ ಹಾಲುಮತ ಸಮು ದಾಯದ ಏಳು ವಿದ್ಯಾಥಿ೯ಗಳು, ಪಿಯುಸಿ ಯಲ್ಲಿ ಅತಿಹೆಚ್ಚು ಅಂಕಪಡೆದ ಐವರು ವಿದ್ಯಾಥಿ೯ಗಳಿಗೆ ಪ್ರತಿಭಾ ಪುರಸ್ಕಾರ, ಎಂಬಿಬಿಎಸ್, ಇಂಜಿನಿಯರಿಂಗ್, ಡಿಪ್ಲೊಮಾ ಮತ್ತಿತರ ವೃತ್ತಿಪರ ಕೋಸ್೯ಗೆ ದಾಖಲಾಗಿರುವ ವಿದ್ಯಾಥಿ೯ಗಳಿಗೆ ಶುಲ್ಕಪಾವತಿ, ೭ ರಿಂದ ೧೦ನೇ ತರಗತಿವರೆಗೆ ಆಥಿ೯ಕ ಸಂಕಷ್ಟದಲ್ಲಿರುವ ೮೦೦ ವಿದ್ಯಾಥಿ೯ಗಳಿಗೆ ನೋಟ್ ಪುಸ್ತಕಗಳನ್ನು ಜಾತ್ಯತೀತವಾಗಿ ವಿತರಿಸಲಾಗುವುದು ಎಂದು ಟ್ರಸ್ಟ್ನ ಕಾಯ೯ದಶಿ೯ ಸಿ.ಡಿ. ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿಭಾ ಪುರಸ್ಕಾರ ಸಮಾರಂಭವನ್ನು ನಿವೃತ್ತ ಪ್ರಾಚಾಯ೯ರಾದ ಎನ್. ಇಂದಿರಮ್ಮ ಊದ್ಘಾಟಿಸುವರು. ಮಾಜಿ ಶಾಸಕ ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ತಾಂತ್ರಿಕ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಸಿ.ಡಿ. ರಾಮಲಿಂಗಯ್ಯ, ವಿದ್ಯ ಇ-ಇನ್ಪೊ ಮೀಡಿಯಾ ಲಿ.ನ ಅಶೋಕಗಿರಿ, ಪವಿತ್ರ ಯಗಟಿ ಸುಂದರೇಶ್, ಸಮಾಜ ಸೇವಕ ಕೆ. ರಾಘವೇಂದ್ರ, ವಕೀಲ ಸಿ.ಎಂ. ಧನಂಜಯ ಕುಮಾರ್, ರಾಜ್ಯ ಸಕಾ೯ರಿ ನೌಕರರ ಸಂಘದ ಖಜಾಂಚಿ ಶ್ರೀನಿವಾಸ್, ಬಿಇಒ ಎಚ್.ಕೆ. ಮನಮೋಹನ್, ರಾಜ್ಯ ಸಕಾ೯ರಿ ನೌಕರರ ಸಂಘದ ಆಧ್ಯಕ್ಷ ಆರ್. ಪರಶಿವಮೂತಿ೯, ಕನಕ ಭವನ ಸಮಿತಿ ಅಧ್ಯಕ್ಷ ಸಿ.ಎಸ್.ಬಸವರಾಜು, ಕಂಬಳಿ ಸೊಸೈಟಿ ಆಧ್ಯಕ್ಷ ವಿಜಯಕುಮಾರ್ ಭಾಗವಹಿಸುವರು ಎಂದು ಹೇಳಿದರು.

ಟ್ರಸ್ಟ್ ಅಧ್ಯಕ್ಷ ಎನ್. ಶ್ರೀಕಂಠಯ್ಯ, ಖಜಾಂಚಿ ಪ. ನಾಗರಾಜು, ಸಿ.ಎಸ್. ವಿಜಯಕುಮಾರ್, ಸಿ.ಟಿ. ಸಿದ್ದಲಿಂಗಪ್ಪ, ರಾಮಲಿಂಗಯ್ಯ, ರಾಮಯ್ಯ ಇತರರು ಸುದ್ದಿಗೋಷ್ಟಿಯಲ್ಲಿದ್ದರು.