Friday, 22nd November 2024

Vishwavani Impact: ಕುಡಿಯುವ ನೀರಿನ ಬವಣೆ ನೀಗಿಸಿದ ಅಭಿವೃದ್ಧಿ ಅಧಿಕಾರಿಗಳು

ಗ್ರಾಮದಲ್ಲಿ ಭರದಿಂದ ಸಾಗಿದ ಸ್ವಚ್ಛತೆ ಕಾರ್ಯ

ಚಿತ್ತಾಪುರ: ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಗ್ರಾಮದ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ ಗ್ರಾಮದಲ್ಲಿನ ಚರಂಡಿಗಳು ಮತ್ತು ರಸ್ತೆ ಸ್ವಚ್ಛತೆ ಕಾರ್ಯ ಭರದಿಂದ ಸಾಗಿದೆ.

ತಾಲೂಕಿನ ಇವಣಿ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಮತ್ತು ಚರಂಡಿ ಹಾಗೂ ರಸ್ತೆ ಸಮಸ್ಯೆಯ ಬಗ್ಗೆ ಮಂಗಳವಾರ 17ನೇ ತಾರಿಕಿನಂದು ವಿಶ್ವವಾಣಿ ಪತ್ರಿಕೆಯಲ್ಲಿ “ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪರದಾಟ, ಚರಂಡಿ ನೀರಿನಿಂದ ರಸ್ತೆ ಕೆಸರು ಗದ್ದೆ” ಎಂಬ ಶಿರ್ಷಿಕೆ ಅಡಿ ಸುದ್ದಿ ಪ್ರಸಾರವಾಗಿತ್ತು.

ಸುದ್ದಿಗೆ ಎಚ್ಚೆತ್ತುಕೊಂಡ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು ಕೆಟ್ಟು ನಿಂತ ಕುಡಿಯುವ ನೀರಿನ ಮೋಟಾರು ದುರಸ್ತಿ ಮಾಡಿ ಗ್ರಾಮದಲ್ಲಿನ ಜನರಿಗೆ ನೀರಿನ ಬವಣೆ ನೀಗಿಸಿದ್ದಾರೆ. ಅಲ್ಲದೆ, ತುಂಬಿ ನಿಂತ ಚಂಡಿಗಳಿಂದ ರಸ್ತೆಯ ಮೇಲೆ ಚರಂಡಿ ನೀರು ನಿಂತು ದುರ್ನಾತ ಬೀರಿ ಅನೇಕ ರೋಗಗಳಿಗೆ ಕಾರಣವಾಗಿತ್ತು. ಇಂತಹ ಚರಂಡಿಗಳು ಸ್ವಚ್ಛತೆ ಗೊಳಿಸಿ ರಸ್ತೆಯ ಮೇಲೆ ನಿಂತ ನೀರು ಸ್ವಚ್ಛತೆ ಕಾರ್ಯ ಮಾಡಿ ದ್ದಾರೆ.

ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ವಿಶ್ವವಾಣಿಯಲ್ಲಿ ಪ್ರಕಟವಾದ ವರದಿಗೆ ಎಚ್ಚೆತ್ತುಕೊಂಡು ಸಮಸ್ಯೆಗಳು ಬಗೆಹರಿ ಯುತ್ತಿರುವುದರಿಂದ ಗ್ರಾಮಸ್ಥರು ವಿಶ್ವವಾಣಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ,ಅಲ್ಲದೆ ಚರಂಡಿ ನೀರು ನಿಂತು ಸಂಪೂರ್ಣವಾಗಿ ಕೆಟ್ಟು ಹಾಗಿದ್ದ ರಸ್ತೆಯು ಸಿಸಿ ರಸ್ತೆ ನಿರ್ಮಾಣ ಮಾಡಿಕೊಡುವ ಬಗ್ಗೆ ಗ್ರಾಮಸ್ಥರ ಬೇಡಿಕೆಯಾಗಿದ್ದು ಈಗ ತಾತ್ಕಾಲಿಕ ವಾಗಿ ರಸ್ತೆ ನಿರ್ಮಾಣ ಮಾಡಿ ಕೊಡಲಾಗುತ್ತಿದೆ ಮುಂಬರುವ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿ ಕೊಡಲಾಗುವುದು.

*ರೇಣುಕಾ ಪಿಡಿಓ,ಗ್ರಾಮ ಪಂಚಾಯಿತಿ ಇವಣಿ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸಮಸ್ಯೆಗಳು ಬಗೆಹರಿಸಲು ಸದಾ ಸಿದ್ದರಾಗಿದ್ದು ಇದಕ್ಕೆ ಗ್ರಾಮಸ್ಥರು ಮತ್ತು ಸದಸ್ಯರ ಸಹಾಯ ಸಹಕಾರ ಅವಶ್ಯವಾಗಿದೆ.

ಸುಮಿತ್ರಾಬಾಯಿ ಪಾಟೀಲ್, ಅಧ್ಯಕ್ಷರು, ಗ್ರಾಮ ಪಂಚಾಯಿತಿ ಇವಣಿ

ಇದನ್ನೂ ಓದಿ: Kalaburagi News: ತಡಕಲನಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ