Sunday, 15th December 2024

ಸಾಮಾಜಿಕ ಸಂವೇದನೆ ಸಾಹಿತ್ಯದ ತಿರುಳು: ಪ್ರೊ.ಬರಗೂರು ರಾಮಚಂದ್ರಪ್ಪ

ತುಮಕೂರು: ಸಾಮಾಜಿಕ ಸಂವೇದನೆಎಲ್ಲ ಸಾಹಿತಿಗಳಲ್ಲಿಯೂ ಇರಬೇಕು.ಸಾಮಾಜಿಕ, ಪರಿಸರ ಅಸ್ಮಿತೆ ಯನ್ನು ಆಧರಿಸಿ ಭಾಷಾಂತರಿಸಿದಾಗ ಮಾತ್ರ  ಕೃತಿಗೆ ಸಾಮಾಜಿಕ ಸಾಂಸ್ಕೃತಿಕ ಪ್ರೇರಣಾ ಶಕ್ತಿ ಬರಲಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದಡಾ.ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇ0ದ್ರವು ಝೆನ್‌ಟೀಮ್ ಸಹಯೋಗದೊಂದಿಗೆಗುರುವಾರ ಆಯೋಜಿಸಿದ್ದ ಬಿ.ಆರ್.ಜಯರಾಮರಾಜೇಅರಸು ಅವರ ಅನುವಾದಿತ ಕೃತಿ ‘ಹೆಣ ಹೊರುವವನ ವೃತ್ತಾಂತ’ ಪುಸ್ತಕ ಬಿಡುಗಡೆಕಾರ್ಯಕ್ರಮದಲ್ಲಿಮಾತನಾಡಿದರು.

ಬಿ. ಆರ್.ಜಯರಾಮರಾಜೇಅರಸುಅವರು ನೀತಿ ನಿಯಮಗಳ ಸಮನ್ವಯಕಾರರು. ನಿಯಮವನ್ನು ನೀತಿಯ ಮಡಿಲಿಗೆ ಒಪ್ಪಿಸಿ ಸಾಮಾಜಿಕ ಕಾರ್ಯಗಳನ್ನು ಮಾಡಿದವರು. ಸಾಮಾಜಿಕತೆಯ ಬೇರು ಬರೆವಣಿಗೆಯಲ್ಲಿ ಬೆರೆತಾಗ ಮಾತ್ರಇಂತಹಕೃತಿ ಹುಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ನಿಘ0ಟಿನ ಆಧಾರದ ಮೇಲೆ ಭಾಷಾಂತರ ಮಾಡಿದರೆಅದು ಶುಷ್ಕ ಕೃತಿಯಾಗುತ್ತದೆ.ಮೂಲ ಕೃತಿಯ ಭಾವ ಮತ್ತು ಸಾಮಾಜಿಕ ಪರಿಸರ, ಅಸ್ಮಿಯತೆಯನ್ನು ಇಟ್ಟುಕೊಂಡು ಒ0ದು ಕೃತಿಯ ಅನುವಾದ ಮಾಡಬೇಕು. ಮಾನಸಿಕ ಮಡಿವಂತಿಕೆಯನ್ನು ಮೀರಿದಾಗ ಮಾತ್ರ ನಾವು ಮತ್ತೊಂದು ಕೃತಿಯ ಒಳಹೊಕ್ಕಲು ಸಾಧ್ಯ.ಒಂದು ವಿಷಯ, ವಸ್ತು ಹಾಗೂ ಭಾಷೆಯನ್ನು ನಮ್ಮದನ್ನಾಗಿಸಿಕೊಳ್ಳುವುದರ ಮೂಲಕ ಒಂದು ಭಾಷೆ ಬೆಳೆಯುತ್ತದೆ ಎಂದರು.

ತುಮಕೂರು ವಿವಿಯ ಕುಲಸಚಿವೆ ನಾಹಿದಾಜûಮ್‌ಜûಮ್ ಮಾತನಾಡಿ, ಬರಗೂರುರಾಮಚಂದ್ರಪ್ಪಅವರು ನಮಗೆಲ್ಲಾಆದರ್ಶವಾಗಿದ್ದಾರೆ.ಐಎಎಸ್‌ಅಧಿಕಾರಿ ಬಿ.ಆರ್.ಜಯರಾಮರಾಜೇಅರಸುಅವರುನಮ್ಮ ವೃತ್ತಿಜೀವನದಆದರ್ಶವಾಗಿದ್ದಾರೆ. ಉತ್ತಮ ಆಡಳಿತಕ್ಕೆ ಜಯರಾಮರಾಜೇ ಅರಸು ಅವರು ಮಾದರಿ ಯಾಗಿದ್ದಾರೆ. ಹೆಣ ಹೊರುವವನ ವೃತ್ತಾಂತಕೃತಿಯಲ್ಲಿ ಹೆಣ ಹೊರುವ ಪದ್ಧತಿಯ ವಿಸ್ಮೃತರೂಪತಿಳಿಸಿದ್ದಾರೆ ಎಂದು ಹೇಳಿದರು.

ಕೃತಿಯ ಲೇಖಕ ಮತ್ತು ನಿವೃತ್ತಐಎಎಸ್‌ಅಧಿಕಾರಿ ಬಿ.ಆರ್.ಜಯರಾಮರಾಜೇಅರಸು ಮಾತನಾಡಿ, ‘ಹೆಣ ಹೊರುವವನ ವೃತ್ತಾಂತ’ ಕೃತಿಯಲ್ಲಿ ಬರುವ ಪ್ರತಿಯೊಂದು ಪಾತ್ರ ಮತ್ತು ಸಂಗತಿಗಳ ಬಗ್ಗೆ ಅರ್ಥಪೂರ್ಣವಾಗಿ ವಿವರಿಸಿದರು.ಅನುವಾದ ಮಾಡುವಾಗಯಾವಯಾವರೀತಿಅಧ್ಯಯನ ಮಾಡಿದ್ದರು, ನವ್ಯ ಪದಗಳ ಸಂಗ್ರಹಣೆ ಹೇಗೆ ಸಂಗ್ರಹಿಸಲಾಯಿತು ಎ0ದು ತಿಳಿಸಿದರು.

ತುಮಕೂರು ವಿವಿಯಡಾ.ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇ0ದ್ರದ ಮುಖ್ಯಸ್ಥೆ ಪ್ರೊ.ಅಣ್ಣಮ್ಮ ಮಾತನಾಡಿ, ‘ಹೆಣ ಹೊರುವವನ ವೃತ್ತಾಂತ’ ಕೃತಿಯಕರ್ತೃ ಬಿ.ಆರ್.ಜಯರಾಮರಾಜೇಅರಸುಅವರುಉಜ್ವಲ ಪ್ರತಿಭೆ. ಇನ್ನಷ್ಟು ಕೃತಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂದರು.

ತುಮಕೂರು ವಿವಿಯ ಡಾ.ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇ0ದ್ರದ  ಸಹಾಯಕ ಪ್ರಾಧ್ಯಾಪಕಿಡಾ.ಗೀತಾ ವಸಂತ‘ಹೆಣ ಹೊರುವವನ ವೃತ್ತಾಂತ’ ಕೃತಿಯಕುರಿತು ಮಾತನಾಡಿ, ಹೆಣ ಹೊರುವವನ ವೃತ್ತಾಂತ ಕೃತಿಯಲ್ಲಿ ಕಥಾಸ0ಗಮವನ್ನು ಕಾಣಬಹುದು. ಇಲ್ಲಿ ನೆನಪುಗಳು ಕನ್ನಡಿಯಾಗಿವೆ. ಕಾನೂನುಗಳ ವಿದ್ಯಾಮಾನಗಳ ಚರ್ಚೆ, ರಾಜಕೀಯಚಿಂತನೆ, ಇವೆಲ್ಲವನ್ನೊಳಗೊಂಡಿರುವುದನ್ನೂ ಗಮನಿಸಬಹುದು.ಈ ಕೃತಿಕನ್ನಡಕ್ಕೆ ಹೊಸ ಸಂವೇದನೆಯನ್ನು ಪರಿಚಯಿಸುತ್ತದೆಎಂದು ತಿಳಿಸಿದರು.

ಇರಾನಿನ ಪಾರ್ಸಿ ಧರ್ಮದಜ್ವರಾಷ್ಟಿ ಜನಾಂಗದ ಪರಿಕಲ್ಪನೆಯನ್ನು ಈ ಪುಸ್ತಕದಲ್ಲಿತುಂಬಾ ಸುಂದರವಾಗಿಕಟ್ಟಿಕೊಡಲಾಗಿದೆ.ಈ ಧರ್ಮದ ಶುದ್ಧತೆ ಮತ್ತು ಮಾಲಿನ್ಯದ ಬಗ್ಗೆ, ಅಂದರೆ, ಆ ಜನಾಂಗದಲ್ಲಿ ಮರಣದ ನಂತರಮೃತದೇಹದ ಅ0ತ್ಯಕ್ರಿಯೆಯ ವಿಧಿ ವಿಧಾನದ ಬಗ್ಗೆ ಇಲ್ಲಿಅರ್ಥಪೂರ್ಣವಾಗಿ ತಿಳಿಸಿದ್ದಾರೆ ಎಂದರು.

ತುಮಕೂರಿನಝೆನ್‌ಟೀಮ್ ಮುಖ್ಯಸ್ಥ ಉಗಮ ಶ್ರೀನಿವಾಸ್ ಸ್ವಾಗತಿಸಿದರು.ಲೇಖಕ ಕೆ. ಪಿ. ಲಕ್ಷಿö್ಮÃಕಾಂತರಾಜೇಅರಸ್‌ಪ್ರಾಸ್ತಾವಿಕ ನುಡಿಗಳನ್ನಾಡಿದರು.