Sunday, 15th December 2024

ಹರಸಿಣ ಕುಂಕುಮ ಮೇಲಾಣೆ: ಬಿಜೆಪಿಗೆ ಮತನೀಡಲು ಪ್ರಮಾಣ..!

ರಾಯಚೂರು : ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಿಪ್ಪರಾಜ್ ಹವಾಲ್ದಾರ ತಮ್ಮ ಪರ ಮತ ಸೆಳೆಯುವ ಬರದಲ್ಲಿ ಜನರಿಗೆ ವಿಶೇಷವಾಗಿ ಮಹಿಳೆಯರಿಗೆ ಹಂಚಿಕೆ ಮಾಡಬಹದಾದ ವಸ್ತುಗಳ ಜೊತೆಗೆ ಹರಸಿಣ ಕುಂಕುಮವನ್ನು ನೀಡಿ ಅದರ ಮೇಲೆ ಆಣೆ ಪ್ರಮಾಣ ಮಾಡಿಸಿ ನೀವು ಬಿಜೆಪಿಗೆ ಮತ ನೀಡಬೇಕು ಎನ್ನುವ ಹುನ್ನಾರ ಮಾಡಿ ಜನರ ನಂಬಿಕೆಯನ್ನು ದುರ್ಬಳಕೆ ಮಾಡಿ ಕೊಳ್ಳುವ ಸಂಚು ನಡಸಿದ್ದು ಬೆಳಕಿಗೆ ಬಂದಿದೆ.

ಇನ್ನು ಕೆಲವೇ ನಾಲ್ಕೆ ದಿನದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ರಾಯಚೂರು ಗ್ರಾಮೀಣ ಬಿಜೆಪಿ ಕಛೇರಿಯಲ್ಲಿ ಮೂಟೆಗಟ್ಟಲೆ ಕುಂಕುಮವನ್ನು ತರಸಿಕೊಂಡು ಪ್ಯಾಕೆಟ್ ಮಾಡುತ್ತಿರುವ ವಿಡಿಯೋ ಬಾರಿ ಸದ್ದು ಮಾಡುತ್ತಿದ್ದೆ, ಪ್ಯಾಕ್ ಮಾಡುವ ಕಾರ್ಮಿಕರನ್ನು ವಿಚಾರ ಮಾಡಲಾಗಿದ್ದು ನಮಗೆ ಇದರ ಮಾಹಿತಿ ಇಲ್ಲ ಇದನ್ನು ಪಾಕೇಟ್ ಮಾಡಿ ಬೂತ್ ಮಟ್ಟ ದಲ್ಲಿ ಕಳಿಸಬೇಕಾಗಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

ಈಗಾಗಲೇ ದೇಶದಲ್ಲಿ ಧರ್ಮದ ಹೆಸರಲ್ಲಿ ಮತ ಪಡೆಯುವ ಅಭ್ಯರ್ಥಿಗಳ ಸಂಖ್ಯೆ ಅಧಿಕ ವಾಗಿದೆ. ಇಂತಹ ಸಂದರ್ಭಗಳಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೇರ ಹಣಿ ಅಣಿ ಇದ್ದು ಸೋಲುವ ಭೀತಿಯಲ್ಲಿ ಭಾರತೀಯ ಮಹಿಳೆಯರಿಗೆ ಹರಸಿಣ ಕುಂಕುಮದ (ಬಿಂದಿ) ಮೇಲೆ ಅದರದ್ದೆ ಆಗಿರುವ ಗೌರವ ಇದೆ ಅದನ್ನು ಅರಿತ ಅಭ್ಯರ್ಥಿ ಅವರ ನಂಬಿಕೆಯನ್ನು ದುರ್ಬಳಕೆ ಮಾಡಿಕೊಳ್ಳುವ ಧರ್ಮ ಧಂತೆಯನ್ನು ಬಳಸಿಕೊಂಡು ಅವರಿಗೆ ಆಸೆ ಅಮೀಷಗಳ ಜೊತೆಗೆ ಹರಸಿಣ ಕುಂಕುಮ ನೀಡಿ ಅದರ ಮೇಲೆ ಅಣೆ ಪ್ರಮಾಣ ಮಾಡಿಕೊಳ್ಳುವ ದುರುದ್ದೇಶವನ್ನು ಹೊಂದಿದ್ದು ಕೂಡಲೇ ಜಿಲ್ಲಾ ಚುನಾವಣೆ ಅಧಿಕಾರಿಗಳು ಹಾಗೂ ಜನರ ನಂಬಿಕೆಯನ್ನು ದುರ್ಬಳಕೆ ಮಾಡಿಕೊಳ್ಳುವ ಉದ್ದೇಶವನ್ನು ಸೂಕ್ತ ತನಿಖೆ ಮಾಡಬೇಕಾಗಿದೆ.