Thursday, 12th December 2024

ಪೋಷಕರ ಯೋಗ ಕ್ಷೇಮ ನೋಡಿಕೊಳ್ಳದ ಮಗಳ ಹೆಸರಿನಲ್ಲಿದ್ದ ಆಸ್ತಿ ವಾಪಸ್…!

love jihad

ಡಿಕೇರಿ: ತಂದೆ ತಾಯಿಯರ ಯೋಗ ಕ್ಷೇಮ ನೋಡಿಕೊಳ್ಳದ ಕಾರಣ ಮಗಳ ಹೆಸರಿನಲ್ಲಿದ್ದ ಆಸ್ತಿಯನ್ನು ಉಪ ವಿಭಾಗಧಿಕಾರಿ ಅವರ ನ್ಯಾಯಾಲಯ ತಾಯಿಗೆ ವಾಪಸ್ ಕೊಡಿಸಿದೆ.

ಕುಶಾಲನಗರ ತಾಲ್ಲೂಕಿನ ಬೊಳ್ಳೂರು ಗ್ರಾಮದ ಬಿ.ಎಸ್.ಜಾನಕಿ ತಮ್ಮ ಹೆಸರಿನಲ್ಲಿ 0.15 ಎಕ್ರೆ ಆಸ್ತಿ ಹೊಂದಿದ್ದರು. ಅವರಿಂದ ಅವರ ಎರಡನೇ ಮಗಳಾದ ಜಯಲಕ್ಷಿ ಬಿ.ಎಸ್ ದಾನಪತ್ರದ ಮೂಲಕ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಪೋಷಕರ ಯೋಗ ಕ್ಷೇಮ ನೋಡಿಕೊಳ್ಳದೆ ನಿರ್ಲಕ್ಷಿಸಿದರು.

ಇದರಿಂದ ನೊಂದ ಪೋಷಕರು ಇವರು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗೆ ಅರ್ಜಿ ಸಲ್ಲಿಸಿ ದಾನಪತ್ರ ರದ್ದುಗೊಳಿಸಿ ಆಸ್ತಿಯನ್ನು ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದರು.

ಆ ನಿಟ್ಟಿನಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ಅರ್ಜಿಯನ್ನು ಉಪ ವಿಭಾಗಧಿಕಾರಿ ಗಳ ನ್ಯಾಯಾಲಯಕ್ಕೆ ವರ್ಗಾಯಿಸಿ ಸೂಕ್ತ ಕ್ರಮಕ್ಕೆ ಮನವಿ ಮಾಡಿದ್ದರು.

ವಿಚಾರಣೆ ನಡೆಸಿದ ಉಪವಿಭಾಗಧಿಕಾರಿ ಡಾ.ಯತೀಶ್ ಉಲ್ಲಾಳ್ ಅವರು ದಾನಪತ್ರ ರದ್ದು ಗೊಳಿಸಿ ಅಸ್ತಿಯನ್ನು ಬಿ.ಎಸ್. ಜಾನಕಿ ಅವರ ಹೆಸರಿಗೆ ವರ್ಗಾಯಿಸುವಂತೆ ಆದೇಶ ನೀಡಿರುತ್ತಾರೆ.