ಮಧುಗಿರಿ: ಸರ್ಕಾರಿ ಶಾಲೆಯನ್ನು ಅಭಿವೃದ್ದಿ ಪಡಿಸಿ ಗ್ರಾಮದಲ್ಲಿಯೇ ಉಳಿಸಿಕೊಡುವಂತೆ ಆಗ್ರಹಿಸಿ ಗ್ರಾಮಸ್ಥರೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಂದೆಯೇ ಕೆಲ ಕಾಲ ಪ್ರತಿಭಟಿಸಿದರು.
ತಾಲೂಕಿನ ಐಡಿಹಳ್ಳಿ ಹೋಬಳಿಯ ದಾಸಪ್ಪನಪಾಳ್ಯದ ಸರಕಾರಿ ಪ್ರಾಥಮಿಕ ಶಾಲೆಯ ಉಳಿವಿಗೆ ಗ್ರಾಮಸ್ಥರು ಹಲವು ಬಾರಿ ಮನವಿ ಅಧಿಕಾರುಗಳಿಗೆ ಮಾಡಿದರೂ ಸಹ ಅಧಿಕಾರಿಗಳು ನಿರ್ಲಕ್ಷ್ಯವಹಿಸಿ ಬೇರೊಂದು ಶಾಲೆಗೆ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರವನ್ನು ಕೊಡುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಾಲೆಯಲ್ಲಿ ೨೪ ವಿದ್ಯಾರ್ಥಿಗಳಿಗೆ ೨ ಶಿಕ್ಷಕರಿದ್ದಾರೆ . ಶಾಲೆಯ ಶಿಕ್ಷಕಿಯೊಬ್ಬರು ಹೆರಿಗೆ ರಜೆಯ ಮೇಲೆ ಹೋಗಿದ್ದು ಇನ್ನೂ ಶಾಲೆಗೆ ಬಂದಿಲ್ಲ . ಪರಿಣಾಮ ಒಬ್ಬ ಶಿಕ್ಷರೆ ಎಲ್ಲ ಮಕ್ಕಳಿಗೂ ಎಲ್ಲ ವಿಷಯಲ್ಲಿ ಪಾಠ ಮಾಡಬೇಕಿದೆ . ಜೊತೆಗೆ ಬಿಸಿಯೂಟ ಕೆಲಸವನ್ನು ನಿಭಾಯಿಸುವ ಹೊಣೆಗಾರಿಕೆಯಿಂದ ಮಕ್ಕಳಿಗೆ ಪಾಠ ಮಾಡಲು ಸಾಧ್ಯವಾಗದ ಕಾರಣ ಪೋಷಕರು ಈಗಾಗಲೇ ೬ ಮಕ್ಕಳನ್ನು ಪಕ್ಕದ ಗ್ರಾಮದ ಶಾಲೆಗೆ ಸೇರಿಸಲು ಮುಂದಾಗಿದ್ದಾರೆ.
ಇದರಿಂದ ಮಕ್ಕಳ ಸಂಖ್ಯೆ ೧೭ಕ್ಕೆ ಕುಸಿದ ಪರಿಣಾಮ ಶಾಲೆಯ ಒಬ್ಬ ಶಿಕ್ಷಕನಿಂದ ಪಾಠವೂ ಇಲ್ಲ . ಇಲಾಖೆಯ ಕೆಲಸವೂ ಪೂರ್ಣ ವಾಗದೆ ಮಕ್ಕಳ ಶಿಕ್ಷಣ ಕುಂಠಿತವಾಗಿ ಪೋಷಕರಲ್ಲಿ ಆತಂಕ ಮನೆ ಮಾಡಿದೆ .ಟಿಸಿ ರೆಡಿ ಎಂದ ಅಧಿಕಾರಿಗಳು: ಗ್ರಾಮಸ್ಥರು ಹೇಳುವಂತೆ ಶಾಲೆಯನ್ನು ಉಳಿಸುವ ಜವಾಬ್ದಾರಿ ಹೊತ್ತು ಅಧಿಕಾರಿಗಳೇ ಬೇರೊಂದು ಶಾಲೆಗೆ ದಾಖಲಾಗಲು ಹೊರಟಿರುವ ವಿದ್ಯಾರ್ಥಿಗಳಿಗೆ ವರ್ಗಾವಣೆ ಪ್ರಮಾಣ ಪತ್ರವನ್ನು ನೀಡುವಂತೆ ಮೇಲಾಧಿಕಾರಿಗಳು ಶಿಕ್ಷಕರಿಗೆ ತಾಕೀತು ಮಾಡಿದ್ದಾರೆ.
ಡಿಡಿಪಿಐರವರ ಆದೇಶ ನೀಡಿದರೂ ಬಿಇಓ ನಿರ್ಲಕ್ಷ್ಯ : ಶಾಲೆ ಉಳಿಸಿ ಈ ಶಾಲೆಗೆ ಇಬ್ಬರು ಶಿಕ್ಷಕರನ್ನು ನೀಡುವ ಬಗ್ಗೆ ಗ್ರಾಮಸ್ಥರು ಮನವಿ ಮಾಡಿದ್ದು ಜ .೧೧ ರಂದೇ ಶಿಕ್ಷಕ ವಿನಯ್‌ಕುಮಾರ್ ರವರನ್ನು ದಾಸಪ್ಪ ಪಾಳ್ಯದ ಶಾಲೆಗೆ ನೇಮಿಸುವಂತೆ ಡಿಡಿಪಿಐ ಸೂಚಿಸಿದ್ದರು . ಇಲ್ಲಿಯವರೆಗೂ ಆ ಬಗ್ಗೆ ಬಿಇಓ , ಯಾವುದೇ ಕ್ರಮಕ್ಕೆ ಮುಂದಾಗಿಲ್ಲ .
ಗ್ರಾ. ಪಂ . ಸದಸ್ಯ ಗೋವಿಂದರಾಜು ಮಾತನಾಡಿ ಶಾಲೆಯ ಶೌಚಾಲಯ ಹಾಗೂ ಕಾಂಪೌAಡ್ ಗೋಡೆ ಕುಸಿದಿದೆ . ಇರುವ ೩ ಕೊಠಡಿಗಳಲ್ಲಿ . ೨ ಕೊಠಡಿಗಳು ಶಿಥಿಲವಾಗಿವೆ ಒಂದೇ ಕೊಠಡಿಯಲ್ಲಿ ೧ ರಿಂದ ೫ನೇ ತರಗತಿಯವರೆಗೂ ಪಾಠ ನಡೆಯುತ್ತಿವೆ . ಇದು ಅಭಿವೃದ್ಧಿಯೇ ಕನಿಷ್ಠ ಶಾಲೆಯ ಕಟ್ಟಡವಿಲ್ಲದೆ ಉತ್ತಮ ಶಿಕ್ಷಕರಿಲ್ಲದ ಸರ್ಕಾರಿ ಶಾಲೆಗೆ ಮಕ್ಕಳೇ ಬನ್ನಿ ಎಂದರೆ ಹೇಗೆ ಸಾಧ್ಯ . ಇದರಿಂದ ನಮ್ಮೂರಿನ ಮಕ್ಕಳ ಭವಿಷ್ಯ ಏನಾಗಬೇಡ , ಈ ಬಗ್ಗೆ ಶೀಘ್ರ ಕ್ರಮಕ್ಕೆ ಮುಂದಾಗ ಬೇಕೆಂದಿದ್ದಾರೆ.
ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಿಆರ್‌ಪಿ ಹೇಮಲತಾ , ಪ್ರಾಣೇಶ್ ಡಿಡಿಪಿಐ ಬಿಇಓ ರವರು ಸಭೆಯಲ್ಲಿದ್ದು , ನಾಳೆ ನಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ ಮೇಲೆ ಗ್ರಾಮಸ್ಥರು ವಾಪಸ್ಥಾದರು.
ಪ್ರತಿಭಟನೆಯಲ್ಲಿ ಗ್ರಾ.ಪಂ.ರAಗಯ್ಯ ಮಾಜಿ ಗ್ರಾ.ಪಂ. ಸದಸ್ಯ ಮುದ್ದಣ್ಣ, ಗಿರೀಶ್ , ನಾಗಭೂಷಣ್ , ಕುಮಾರ್, ತಿಮ್ಮಯ್ಯ , ಸಣ್ಣೀರಪ್ಪ , ಚಂದ್ರಣ್ಣ , ರಂಗಪ್ಪ , ಮಲೇಶಪ್ಪ , ವೀರಮಲ್ಲಪ್ಪ , ಶ್ರೀನಿವಾಸ , ಕೃಷ್ಣಮೂರ್ತಿ , ಮಲ್ಲಯ್ಯ ಇತರರಿದ್ದರು .