Thursday, 12th December 2024

ರಾಜ್ಯ ಸರಕಾರದ ವಿರುದ್ದ ವಕೀಲರ ಸಂಘದಿ0ದ ಪ್ರತಿಭಟನೆ

ಜನನ ಮತ್ತು ಮರಣ ನೊಂದಣಿ ಕಾಯ್ದೆಗೆ ತಿದ್ದುಪಡಿ: ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ ವಕೀಲರ ಸಂಘ

ಕೊರಟಗೆರೆ: ಜನನ ಮತ್ತು ಮರಣ ನೊಂದಣಿ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಕೊರಟಗೆರೆ ಜೆಎಂಎಫ್‌ಸಿ ನ್ಯಾಯಾಲಯದ ಬದಲಾಗಿ ಮಧುಗಿರಿ ಎಸಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿರುವ ಜನವಿರೋಧಿ ಆದೇಶದ ವಿರುದ್ದ ಕೊರಟಗೆರೆ ವಕೀಲರ ಸಂಘ ವು ರಾಜ್ಯ ಸರಕಾರದ ವಿರುದ್ದ ಸೋಮವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ ದ್ದಾರೆ.

ಕೊರಟಗೆರೆ ಪಟ್ಟಣದ ಸಿವಿಲ್ ನ್ಯಾಯಾಲಯದ ಕಚೇರಿಯಿಂದ ಮುಖ್ಯರಸ್ತೆಯ ಮೂಲಕ ಕಾಲ್ನಡಿಕೆಯಲ್ಲಿ ಕಂದಾಯ ಕಚೇರಿಗೆ ವಕೀಲರ ಸಂಘದ ಪದಾಧಿಕಾರಿಗಳು ಆಗಮಿಸಿ ತಹಶೀಲ್ದಾರ್ ನಾಹೀದಾರವರ ಮೂಲಕ ಘನ ರಾಜ್ಯ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿ ಗ್ರಾಮೀಣ ಪ್ರದೇಶದ ಜನವಿರೋಧಿ ಆದೇಶವನ್ನು ತಕ್ಷಣ ರದ್ದುಪಡಿಸುವಂತೆ ಆಗ್ರಹ ಮಾಡಿದರು.

ಕೊರಟಗೆರೆ ವಕೀಲರ ಸಂಘದ ಅಧ್ಯಕ್ಷ ಬಿ.ಎಲ್.ನಾಗರಾಜು ಮಾತನಾಡಿ ಜನನ ಮತ್ತು ಮರಣ ನೊಂದಣಿ ಕಾಯ್ದೆಯ ತಿದ್ದುಪಡಿ ಆದೇಶದಿಂದ ಜನಸಾಮಾನ್ಯರಿಗೆ ಸಾಕಷ್ಟು ಸಮಸ್ಯೆ ಆಗಲಿದೆ. ಸರಕಾರದ ಏಕಾಏಕಿ ಆದೇಶದಿಂದ ಜನಸಾಮಾನ್ಯ, ಕಕ್ಷಿದಾರ ಮತ್ತು ವಕೀಲರಿಗೆ ಜನನ ಮತ್ತು ಮರಣ ದೃಢಿಕರಣ ಪತ್ರ ಪಡೆಯಲು ತೊಂದರೆಯ ಜೊತೆ ದುಬಾರಿ ಆಗಲಿದೆ. ಸರಕಾರ ಮಾಡಿರುವ ಆದೇಶವನ್ನು ತಕ್ಷಣ ರದ್ದುಪಡಿಸು ವಂತೆ ವಕೀಲರ ಸಂಘದ ಆಗ್ರಹ ಮಾಡುತ್ತೀದೆ ಎಂದು ಹೇಳಿದರು.

ಕೊರಟಗೆರೆ ಪಟ್ಟಣದ ಹಿರಿಯ ವಕೀಲರಾದ ಟಿ.ಕೃಷ್ಣಮೂರ್ತಿ ಮಾತನಾಡಿ ಗ್ರಾಮೀಣ ಪ್ರದೇಶದ ಗಡಿಭಾಗದ ಜನತೆ ವಾಹನದ ಸೌಲಭ್ಯವಿಲ್ಲದೇ ಕೊರಟಗೆರೆ ಪಟ್ಟಣಕ್ಕೆ ಬರುವುದೇ ಕಷ್ಟಸಾಧ್ಯ. ಈಗ ಮಧುಗಿರಿಗೆ ಹೇಗೆ ಹೋಗೊದು, ಯಾರನ್ನು ಬೇಟಿ ಆಗೋದು ಎಂಬುದೇ ಯಕ್ಷಪ್ರಶ್ನೆ. ಈಗಾಗಲೇ ಕಂದಾಯ ಇಲಾಖೆಯಲ್ಲಿ ನೂರಾರು ಕಡತಗಳು ವಿಲೇವಾರಿ ಆಗದ ಪರಿಣಾಮ ನ್ಯಾಯಾಲಯಕ್ಕೆ ಬರುತ್ತೀವೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸರಕಾರ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹ ಮಾಡಿದರು.

ಪ್ರತಿಭಟನೆಯಲ್ಲಿ ಕೊರಟಗೆರೆ ವಕೀಲರ ಸಂಘದ ಉಪಾಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ, ಜಂಟಿಕಾರ್ಯದರ್ಶಿ ಹುಸೇನ್‌ಪಾಷ, ಖಜಾಂಚಿ ಸಂತೋಷಲಕ್ಷಿö್ಮÃ, ವಕೀಲರ ಸಂಘದ ಮಾಜಿ ಅಧ್ಯಕ್ಷ ದೇವರಾಜು, ವಕೀಲರಾದ ಶಿವರಾಮಯ್ಯ, ಕೃಷ್ಣಮೂರ್ತಿ, ಅನಿಲ್‌ಕುಮಾರ್, ಸಂತೋಷ್, ನರಸಿಂಹರಾಜು, ಮಂಜುನಾಥ, ಕೃಷ್ಣಪ್ಪ, ಅನಂತರಾಜು, ನಾಗರಾಜು, ಅರುಂಧತಿ, ಕೆಂಪರಾಜಮ್ಮ ಸೇರಿದಂತೆ ಇತರರು ಇದ್ದರು.