ಚಿಕ್ಕನಾಯಕನಹಳ್ಳಿ: 26 ಕೆರೆಗಳಿಗೆ ನೀರು ಹರಿಸುವ ಹೇಮಾವತಿ ನಾಲೆಯ ಬಾಕಿ ಕಾಮಾಗಾರಿ ಆರಂಭಿಸಲು ಒತ್ತಾಯಿಸಿ ನೀರಾವರಿ ಹೋರಾಟ ಸಂಚಲನಾ ಸಮಿತಿ ನೇತೃತ್ವದಲ್ಲಿ ನ. 4 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಹೋರಾಟದ ರೂಪುರೇಷೆ ಸಿದ್ದಪಡಿಸಲು ಶಾವಿಗೆಹಳ್ಳಿಯ ಜಿ.ಎಂ.ಆರ್.ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ಗುರುವಾರ ನಡೆಯಿತು. ಹುಳಿಯಾರು ಗೇಟ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನೆಹರು ವೃತ್ತದಲ್ಲಿ ಮಾನವ ಸರಪಳಿ ರಚಿಸಿ ತಾಲ್ಲೂಕು ಕಚೇರಿಗೆ ಪಾದಯಾತ್ರೆ ಮತ್ತು ಟ್ರಾö್ಯಕ್ಟರ್, ಎತ್ತಿನಬಂಡಿ ಮೂಲಕ ರ್ಯಾಲಿ ನಡೆಸಲು ಉದ್ದೇಶಿಸಲಾಗಿದೆ. ತಾಲ್ಲೂಕು ಕಚೇರಿ ಬಳಿ ದೌಡಾಯಿಸಿ ಹೇಮೆ ನಾಲಾ ಕಾಮಾಗಾರಿ ಪ್ರಾರಂಭಕ್ಕಾಗಿ ಬೃಹತ್ ಹೋರಾಟ ಯೋಜಿತವಾಗಿದೆ. ತಾಲ್ಲೂಕಿನಾದ್ಯಂತ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
ಪ್ರಮುಖವಾಗಿ ಪ್ರತಿ ಗ್ರಾಮಗಳಿಂದ ರೈತರು ಪಾಲ್ಗೊಳ್ಳುವಂತೆ ಸಿದ್ದತೆ ಮಾಡಿಕೊಳ್ಳುವುದು. ಪ್ರತಿಯೊಬ್ಬ ರೈತರು ತಮ್ಮ ಬಳಿ ಇರುವ ಟ್ರಾö್ಯಕ್ಟರ್ ರಸ್ತೆಗಿಳಿಸಿ ಅದರಲ್ಲಿ ಜನ ತುಂಬಿಕೊAಡು ತಾಲ್ಲೂಕು ಕಚೇರಿ ಕಡೆಗೆ ಧಾವಿಸು ವುದು. ಬಳಿಕ ತಾಲ್ಲೂಕು ಕಚೇರಿ ಎದುರು ಪ್ರತಿಭಟಿಸುವುದು. ಸರಕಾರ 26 ಕೆರೆಗಳಿಗೆ ನೀರು ಹರಿಸುವ ನಾಲಾ ಕಾಮಾಗಾರಿ ಆರಂಭಿಸುವವರಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರೆಸಲು ಸಮಿತಿ ನಿರ್ಧರಿಸಿದೆ.
ಪ್ರತಿಭಟನೆಗೆ ವಕೀಲರ ಬೆಂಬಲ
ತಾಲ್ಲೂಕು ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಪ್ರತಿಭಟನೆಯಲ್ಲಿ ಪಾಲ್ಗೋಳ್ಳಲಿದ್ದಾರೆ. ಹೋರಾಟಕ್ಕೆ ಸಂಘದ ಬೆಂಬಲ ವ್ಯಕ್ತಪಡಿಸುವ ನಿರ್ಣಯವನ್ನು ಸಹ ಕೈಗೊಳ್ಳಲಾಗಿದೆ. ಕನ್ನಡ ಪರ ಸಂಘಟನೆಗಳು, ವಿದ್ಯಾರ್ಥಿ ಸಮೂಹ, ಮತ್ತು ವಿವಿಧ ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.
ಇದನ್ನೂ ಓದಿ: Tumkur News: ಉಪ್ಪಾರ ಪ್ರತಿಭಾ ಪುರಸ್ಕಾರಕ್ಕೆ ಶಾಸಕ ಸಿಬಿಎಸ್ ಗೈರು: ಆಕ್ರೋಶ