Thursday, 19th September 2024

‘ಪುಷ್ಪಕ್’ ಮರುಬಳಕೆ ಉಡಾವಣಾ ವಾಹನದ ಲ್ಯಾಂಡಿಂಗ್‌ ಪ್ರಯೋಗ ಯಶಸ್ವಿ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಶುಕ್ರವಾರ ಕರ್ನಾಟಕದ ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್) ನಿಂದ ‘ಪುಷ್ಪಕ್’ ಎಂಬ ಹೆಸರಿನ ಮರುಬಳಕೆ ಉಡಾವಣಾ ವಾಹನದ (ಆರ್‌ಎಲ್‌ವಿ) ಲ್ಯಾಂಡಿಂಗ್‌ ಪ್ರಯೋಗವನ್ನು ಯಶಸ್ವಿಗೊಳಿಸಿದೆ.

ಉಡಾವಣಾ ವಾಹನವನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಿಂದ ಸುಮಾರು 4.5 ಕಿಮೀ ಎತ್ತರಕ್ಕೆ ಕೊಂಡೊಯ್ದು ಬಳಿಕ ಪೂರ್ವನಿರ್ಧರಿತ ಪಿಲ್‌ಬಾಕ್ಸ್ ನಿಯತಾಂಕಗಳನ್ನು ಪಡೆದ ನಂತರ ಬಿಡುಗಡೆ ಮಾಡಲಾಯಿತು ಎಂದು ಸಂಸ್ಥೆ ಹೇಳಿದೆ.

‘ಸಂಪೂರ್ಣ ಮರುಬಳಕೆ ಮಾಡಬಹುದಾದ ಉಡಾವಣೆಗೆ ಅಗತ್ಯವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಬಾಹ್ಯಾಕಾಶ ಸಂಸ್ಥೆಯ ಪ್ರಯತ್ನದ ಭಾಗ ಇದಾಗಿದೆ. ಅಲ್ಲದೆ ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶವನ್ನು ಪ್ರವೇಶಿಸುವ ಯತ್ನವಿದು ಎಂದು ಇಸ್ರೊ ಹೇಳಿದೆ.