Monday, 14th October 2024

ಉಪಾಧ್ಯಕ್ಷರಾಗಿ ಆರ್ ಸುರೇಶ್ ನಾಯ್ಕ್ ನೇಮಕ

ಚಿಕ್ಕನಾಯಕನಹಳ್ಳಿ : ತಾಲ್ಲೂಕು ಬ್ಲಾಕ್ ಕಾಂಗ್ರೆಸ್‌ನ ಉಪಾಧ್ಯಕ್ಷರನ್ನಾಗಿ ಸಾಲ್ಕಟ್ಟೆ ತಾಂಡ್ಯದ ಆರ್. ಸುರೇಶ ನಾಯ್ಕ್ ಅವರನ್ನು ನೇಮಕಗೊಳಿಸಿ ಬ್ಲಾಕ್ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಆದೇಶ ಹೊರಡಿಸಿದ್ದಾರೆ.

ತಾಲ್ಲೂಕಿನ ಅಭಿವೃದ್ದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಿದೆ. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿನ ದೇಶ ಮತ್ತು ರಾಜ್ಯ ಹೇಗಿತ್ತು ಎಂಬುದು ಜನ ಸಾಮಾನ್ಯರಿಗೆ ತಿಳಿಸಬೇಕಿದೆ. ಬೆಲೆ ಏರಿಕೆ ಕುರಿತಂತೆ ಉಂಟಾಗುತ್ತಿರುವ ಸಮಸ್ಯೆ ಕುರಿತು ವ್ಯಾಪಕ ಪ್ರಚಾರ ಮಾಡುತ್ತೇವೆ ಎಂದು ಸುರೇಶ್ ನಾಯ್ಕ್ ಹೇಳಿದರು.