ತುಮಕೂರು :ಕರ್ನಾಟಕ ಪಶುವೈದ್ಯಕೀಯ ಸಂಘ, ಇನ್ನರ್ ವ್ಹೀಲ್ ಕ್ಲಬ್ ಮರಳೂರು, ತುಮಕೂರು, ಹಾಗೂ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ ಪಶು ಆಸ್ಪತ್ರೆ ಆವರಣದಲ್ಲಿ ವಿಶ್ವ ರೇಬಿಸ್ ದಿನಾಚರಣೆ ಪ್ರಯುಕ್ತ ನಾಯಿಗಳಿಗೆ ಉಚಿತ ರೇಬಿಸ್ ಲಸಿಕೆ ಹಾಕುವ ಹಾಗೂ ಪಶು ಸಖಿಯರಿಗೆ ರೇಬಿಸ್ ರೋಗದ ಬಗ್ಗೆ ಅರವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ತುಮಕೂರು ಉಪನಿರ್ದೇಶಕ ಡಾ: ಗಿರೀಶ್ಬಾಬು ರೆಡ್ಡಿ, ಕರ್ನಾಟಕ ಪಶುವೈದ್ಯಕೀಯ ಸಂಘ ತುಮಕೂರು ಅಧ್ಯಕ್ಷ ಡಾ: ವೈ. ಸಿ ಕಾಂತರಾಜು, ಇನ್ನರ್ ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಪವಿತ್ರ, ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ಮುಖ್ಯಸ್ಥ ಡಾ: ಪುಟ್ಟಸ್ವಾಮಿ , ಡಾ: ಮಲ್ಲೇಶಪ್ಪ, ಡಾ: ದಿವಾಕರ್, ಡಾ: ವೆಂಕಟೇಶ್ಬಾಬುರೆಡ್ಡಿ ಹಾಗೂ ಇನ್ನರ್ ವ್ಹೀಲ್ ಸಂಸ್ಥೆಯ ಕಾರ್ಯ ದರ್ಶಿ ಪ್ರತಿಭಾ ಹಾಗೂ ಕ್ಲಬ್ನ ಮಾಜಿ ಅಧ್ಯಕ್ಷರುಗಳು ಹಾಗೂ ಹಾಲಿ ಸದಸ್ಯರುಗಳು ಮತ್ತು ಇಲಾಖೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಉಚಿತ ಲಸಿಕಾ ಕಾರ್ಯಕ್ರಮದ ಅಂಗವಾಗಿ ನೇತೃತ್ವದಲ್ಲಿ ೧೫೮ ನಾಯಿಗಳು, ೩೧ ಬೆಕ್ಕು ಹಾಗೂ ೧ ಕೋತಿಗೆ ರೇಬಿಸ್ ಲಸಿಕೆ ಹಾಕಲಾಯಿತು.