Saturday, 12th October 2024

ಜೈಲಲ್ಲಿ ನಟ ದರ್ಶನ್ ಸ್ಥಿತಿ ಕಂಡು ಕಣ್ಣೀರಿಟ್ಟ ನಟಿ ರಚಿತಾ

ಬೆಂಗಳೂರು: ರಾಜನನ್ನು ರಾಜನ ರೀತಿ ನೋಡೋಕೆ ಇಷ್ಟ. ಆದರೇ ಎನ್ನುತ್ತಲೇ ನಟಿ ರಚಿತಾ ರಾಮ್ ಅವರು ಜೈಲಲ್ಲಿ ನಟ ದರ್ಶನ್ ಸ್ಥಿತಿ ಕಂಡು ಕಣ್ಣೀರಿಟ್ಟರು.

ಗುರುವಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ನಟಿ ರಚಿತಾ ರಾಮ್ ತೆರಳಿ, ನಟ ದರ್ಶನ್ ಭೇಟಿಯಾದರು. ಅವರ ಆರೋಗ್ಯ ವಿಚಾರಿಸಿ, ಮಾತನಾಡಿಕೊಂಡ ಬಂದು, ಸುದ್ದಿಗಾರರೊಂದಿಗೆ ಮಾತನಾಡಿದರು.

ನಾನು ನಟಿ ರಚಿತಾ ರಾಮ್ ಎಂಬುದಾಗಿ ಗುರುತಿಸಿಕೊಳ್ಳಲು ನಟ ದರ್ಶನ್ ಕಾರಣ. ಅವರುಅವರ ಬ್ಯಾನರ್ ಅಡಿಯಲ್ಲಿ ನನಗೆ ಅವಕಾಶ ನೀಡದೇ ಇದ್ದಿದ್ದರೇ, ಒಂದು ಮಾತು ನೋ ಎಂದಿದ್ದರೇ ನಾನು ಹೀಗೆ ನಟಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ನಾನು ದರ್ಶನ್ ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದೆ. ಅವರು ಆರೋಗ್ಯವಾಗಿದ್ದಾರೆ. ನಾನು ಅವರ ಸ್ಥಿತಿಯನ್ನು ಕಂಡು ಭಾವುಕರಾದ ವೇಳೆಯಲ್ಲಿ ನಟ ದರ್ಶನ್ ಅವರೇ ನನ್ನನ್ನು ಸಮಾಧಾನಿಸಿದರು. ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ನಟ ದರ್ಶನ್ ಆದಷ್ಟು ಬೇಗ ಹೊರಗೆ ಬರ್ತಾರೆ ಎಂದು ತಿಳಿಸಿದರು.

ರಾಜನನ್ನು ರಾಜನ ರೀತಿ ನೋಡೋಕೆ ಇಷ್ಟ. ಆದರೇ ನಟ ದರ್ಶನ್ ಸ್ಥಿತಿ ಕಂಡು ಎನ್ನುತ್ತಲೇ ನಟಿ ರಚಿತಾ ರಾಮ್ ಭಾವುಕರಾಗಿ ಕಣ್ಣೀರಿಟ್ಟರು.