Monday, 28th October 2024

ಕೆ ಶಿವನಗೌಡ ಅಭಿಮಾನಿಗಳ ಆರ್ಭಟಕ್ಕೆ ಬೆಚ್ಚಿಬಿದ್ದ ಶರಣಪ್ಪಗೌಡ ನಕ್ಕುಂದಿ

ರಾಯಚೂರು : ಕಳೆದ ಒಂದೆರಡು ವರ್ಷಗಳಿಂದ ದೇವದುರ್ಗದ ಬಿಜೆಪಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮತ್ತು ಶಾಸಕ ಕೆ ಶಿವನಗೌಡ ಅಭಿಮಾನಿ ಬಳಗದಿಂದ ಕ್ಷೇತ್ರದಲ್ಲಿ ವಿವಿಧ ಕಾರ್ಯಚಟುವಟಿಕೆಗಳ ಮೂಲಕ ಮಾನ್ವಿ ವಿಧಾನಸಭೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದು ಮಾಜಿ ಶಾಸಕರಿಗೆ.ಹಾಲಿ ನಗರ ಯೋಜನೆ ಪ್ರಾಧಿಕಾರದ ಶರಣಪ್ಪಗೌಡ ನಕ್ಕುಂದಿ ಅಧ್ಯಕ್ಷರಿಗೆ ನಿದ್ದೆಗೆಡಿಸಿದೆ.

ಎಸ್ ಟಿ ಮೀಸಲಾತಿ ಕ್ಷೇತ್ರವಾದ ಮಾನವಿ ವಿಧಾನ ಸಭೆ ಕ್ಷೇತ್ರದಲ್ಲಿ ದೇವದುರ್ಗ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಮತ್ತು ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ ಶಿವನಗೌಡ ನಾಯಕ ಅಭಿಮಾನಿ ಬಳಗದ ಮುಖಂಡರಾದ ಟಿ.ಎ.ಪಿ.ಎಂ.ಸಿ ಅಧ್ಯಕ್ಷ ತಿಮ್ಮರಡ್ಡಿ ಬೋಗವತಿ, ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಮಾನಪ್ಪ ನಾಯಕ, ನಯೋಪ್ರಾ ಮಾಜಿ ಅಧ್ಯಕ್ಷ ವೀರೇಶ ನಾಯಕ ಬೆಟ್ಟದೂರು ಕಾಡಾ ವಿಭಾಗದ ಅಧ್ಯಕ್ಷರಾದ ನಾಗಲಿಂಗ ಸ್ವಾಮಿ ಇವರು ಸೇರಿದಂತೆ ಅನೇಕ ಬಿಜೆಪಿ ನಾಯಕರ ದಂಡೇ ಅವರನ್ನು ಬೆಂಬಲಿಸಿ ಜನಸೇವೆ ಮತ್ತು ನಿತ್ಯ ನಿರಂತರ ಕಾರ್ಯಚಟುವಟಿಕೆಗಳನ್ನು ಗಮನಿಸಿದ ಮಾನವಿ ಕ್ಷೇತ್ರದ ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ, ಗಂಗಾಧರ್ ನಾಯಕ, ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶರಣಪ್ಪಗೌಡ ನಕ್ಕುಂದಿ ಮತ್ತು ಕೆಲವು ಇತರೆ ಮುಖಂಡರು ಕ್ಷೇತ್ರದ ನಕ್ಕುಂದಿ ಗ್ರಾಮದ ಹೊರ ವಲಯದಲ್ಲಿ ಪಕ್ಷದ ಬಲವರ್ಧನೆ ಕಾರ್ಯಕ್ರಮದ ನೆಪದಲ್ಲಿ ಕಾರ್ಯಕರ್ತರಿಗೆ ಕಂಡ, ತುಂಡುಗಳನ್ನು ನೀಡಿ ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಾ ಪಕ್ಷದ ಬಲವರ್ಧನೆ ಗಾಗಿ ಶ್ರಮಿಸಿ ಎಂದು ಮನವರಿಕೆ ಮಾಡುವಲ್ಲಿ ನಿರತರಾಗಿದ್ದು ಕ್ಷೇತ್ರದ ಜನರಲ್ಲಿ ಬಾರಿ ಗೊಂದಲ ಉಂಟು ಮಾಡಿದೆ.

ಕಳೆದ ಮೊದಲ ಕರೋನ ಸಂದರ್ಭದಲ್ಲಿ ಉಚಿತ ಅನ್ನ ದಾಸೋಹ ಸೇರಿದಂತೆ ಇಲ್ಲಿಯವರೆಗೆ ಅನೇಕ ರೀತಿಯ ಸೇವೆಯನ್ನು ಮಾಡುತ್ತಾ ಬಂದಿರುವ ದೇವದುರ್ಗ ಶಾಸಕ ಮತ್ತು ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ ಶಿವನಗೌಡ ನಾಯಕ ಅವರ ಅಭಿಮಾನ ಬರದ ಕಾರ್ಯಚಟುವಟಿಕೆಗಳು ಆರ್ಭಟಕ್ಕೆ ಬಿಜೆಪಿ ನಾಯಕರನ್ನು ಬೆಚ್ಚಿ ಬೀಳಿಸುತ್ತಿದ್ದಾರೆ..

ಇನ್ನೊಂದು ವಿಶೇಷ ಏನೆಂದರೆ ಅವರ ಹುಟ್ಟು ಹಬ್ಬದ ಅಂಗವಾಗಿ ಕಬ್ಬಡಿ, ರಂಗೋಲಿ, ವಾಲಿಬಾಲ್ ಸೇರಿದಂತೆ ಅನೇಕ ಕ್ರೀಡೆಯನ್ನು ಆಯೋಜನೆ ಮಾಡಿ ಯುವಕರಿಗೆ ಸ್ಪೂರ್ತಿ ತುಂಬುವ ಕೆಲಸವನ್ನು ಇದೇ ಕ್ಷೇತ್ರದ ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿಯವರು ಮಾಡಿಕೊಂಡು ಬಂದರು ಕೂಡ ಒಂದೇ ಒಂದು ಕಾರ್ಯಕ್ರಮದಲ್ಲಿ ಕಮಲ ಪಕ್ಷದ ಚಿನ್ಹೆಯನ್ನು ಬಳಸದಿರುವುದು ಮಾತ್ರ ಜನರಲ್ಲಿ ಕುತೂಹಲ ಮೂಡಿಸಿದೆ.

ಇತ್ತ ಮಾಜಿ ಶಾಸಕ ಹಾಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾದ ಗಂಗಾಧರ ನಾಯಕ ಮತ್ತು ಮಾಜಿ ಶಾಸಕ ಬಸನಗೌಡ ಬ್ಯಾಗವಾಟ ಇವರು ತಮ್ಮ ಅನುಯಾಯಿಗಳು ಕರೆದುಕೊಂಡು ಅನೇಕ ಸಭೆಯನ್ನು ಮಾಡಿ ನಾವೇ ಈ ಬಾರಿ ಸ್ಪರ್ಧೆ ಮಾಡುತ್ತಿದ್ದು ಜನರಲ್ಲಿ ಗೊಂದಲ ಬೇಡ ಎನ್ನುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ಕೂಡ ನಾನೇ ಅಭ್ಯರ್ಥಿ ಎನ್ನುತ್ತಿದ್ದ ಅನೇಕರಿಗೆ ಟಿಕೆಟ್ ತಪ್ಪಿ ಮಾನಪ್ಪ ನಾಯಕ ಇವರಿಗೆ ಟಿಕೆಟ್ ದೊರೆತರು ಪಕ್ಷದ ನಾಯಕ ಒಳ ಗಲಾಟೆಗಳು ಹೊರಬಂದು ಶರಣಪ್ಪ ನಾಯಕ ಗುಡದಿನ್ನಿ ಇವರಿಗೆ ಟಿಕೆಟ್ ನೀಡುವಲ್ಲಿ ಯಶಸ್ವಿಯಾಗಿತ್ತು.. ಆದರೆ ಈ ಬಾರಿಯ ಮಾನವಿ ವಿಧಾನ ಸಭಾ ಕ್ಷೇತ್ರದಲ್ಲಿ ದೇವದುರ್ಗ ಶಾಸಕ ಕೆ ಶಿವನಗೌಡ ನಾಯಕ ಇವರ ಅಭಿಮಾನಿ ಅರ್ಭಟಕ್ಕೆ ಬೆಚ್ಚಿಬಿತ್ತಾ ಮಾನ್ವಿ ಬಿಜಿಪಿ ನಾಯಕರ ದಂಡು ಎನ್ನುವಂತಾಗಿದೆ ಕ್ಷೇತ್ರದ ಜನತೆ… ಯಾರ ಪರ ಯಾರ ಒಲವು ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾಯ್ದು ನೋಡಬೇಕಾಗಿದೆ….