Thursday, 12th December 2024

ರಾಯಚೂರು ಜಿಲ್ಲಾ ಲಾಳಗೊಂಡ ಸಂಘದ ಜಿಲ್ಲಾ ಮಟ್ಟದ ಸಮಾವೇಶ

ಮಾನ್ವಿ: ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್.ಆವರಣದಲ್ಲಿ ನಡೆದ ರಾಯಚೂರು ಜಿಲ್ಲಾ ಲಾಳಗೊಂಡ ಸಂಘದ ಜಿಲ್ಲಾ ಮಟ್ಟದ ಸಮಾವೇಶವನ್ನು ಸಂಸದ ರಾಜಾ ಅಮರೇಶ್ವರ ನಾಯಕ ಉದ್ಘಾಟಿಸಿ ಮಾತನಾಡಿ ಲಾಳಗೊಂಡ ಸಮಾಜವು ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಹಿನ್ನಲೆಯನ್ನು ಹೊಂದಿದ್ದು, ಶೈಕ್ಷಣಕವಾಗಿ, ಅರ್ಥಿಕ ಅಭಿವೃದ್ದಿ ಹೊಂದಲು ಇಂತಹ ಸಮಾವೇಶಗಳು ಸಹಾಯಕ ವಾಗಿವೆ.

ಕೇಂದ್ರ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಪ್ರತಿಯೊಂದು ಸಮಾಜಗಳು ಕೂಡ ಪಡೆದು ಕೊಂಡು ಶೈಕ್ಷಣ ಕ ಹಾಗೂ ಆರ್ಥಿðಕವಾಗಿ ಅಭಿವೃದ್ದಿ ಹೊಂದಬೇಕು ಸಮಾಜದವರ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ನೆರವನ್ನು ನೀಡುವುದಾಗಿ ತಿಳಿಸಿದರು.

ಅ.ಕ.ವಿ.ಲಿಂ.ಮಹಾಸಭಾ ಬೆಂಗಳೂರು ಉಪಾಧ್ಯಾಕ್ಷರಾದ ಶಂಕರ ಬಿದರಿ ಮಾತನಾಡಿ ಲಾಳಗೊಂಡ ಸಮಾಜವು ೧೨ನೇ ಶತಮಾನದಲ್ಲಿ ಬಸವಾದಿ ಶರಣರ ಪ್ರಭಾವಕ್ಕೆ ಒಳಗಾಗಿ ಲಿಂಗಾಯತ ತತ್ವಗಳನ್ನು ಅನುಸರಿಸುವ ಅಗ್ರಗಣ್ಯ ಸಮಾಜವಾಗಿದ್ದು, ಬಸವಣ್ಣನವರ ಕಾಯಕತತ್ವ ,ಪ್ರಾಮಾಣ ಕತೆ ನಮಗೆ ಬಂದಿದ್ದು ಇಂತಹ ಸಮಾಜವು ಇಂದು ಬುಡಕಟ್ಟು ಸಮಾಜದಲ್ಲಿ ಅಥಾವ ಹಿಂದುಳಿದ ಸಮಾಜದಲ್ಲಿ ಇರಬೇಕಾಗಿತ್ತು.

ಆದರೆ ಇಂದು ಅಧಿಕೃತವಾಗಿ ಜಾತಿ ಪಟ್ಟಿಯಲ್ಲಿ ಕೂಡ ಇಲ್ಲದೇ ಇರುವುದರಿಂದ ಸರಕಾರದ ಸೌಲಭ್ಯಗಳಿಂದ ವಂಚಿತವಾಗಿದ್ದು ಕೂಡಲೇ ರಾಜ್ಯ ಮತ್ತು ಕೇಂದ್ರ ಸರಕಾರಗಳು ಹಿಂದುಳಿದ ಅಯೋಗದಿಂದ ಲಾಳಗೊಂಡ ಸಮಾಜದ ಕುಲ ಶಾಸ್ತç ಅಧ್ಯಯನ ನಡೆಸುವ ಮೂಲಕ ಇನ್ನು ೬ತಿಂಗಳಲ್ಲಿ ಬುಡಕಟ್ಟು ಸಮಾಜದಲ್ಲಿ ಅಥವಾ ಹಿಂದುಳಿದ ಸಮಾಜದಲ್ಲಿ ಸೇರಿಸಬೇಕು ಎನ್ನುವ ನಿಟ್ಟಿನಲ್ಲಿ ಸಮಾಜವು ಸಂಘಟಿತವಾಗಿ ಬೆಂಗಳೂರಿಗೆ ಕೂಗು ಮುಟ್ಟುವವರೆಗೂ ಹೋರಾಟನಡೆಸಬೇಕು ಶೈಕ್ಷಣ ಕವಾಗಿ ಹಿಂದುಳಿದಿರುವ ಸಮಾಜದ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಪರ್ಧಾತ್ಮಕ ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು.

ಶಾಸಕರಾದ ಡಾ.ಎಸ್.ಶಿವರಾಜ ಪಾಟೀಲ್, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಬಿ.ವಿ. ನಾಯಕ, ಅಖಿಲ ಕರ್ನಾಟಕ ಲಾಳ ಗೊಂಡರ ಸಂಘದ ರಾಜ್ಯಾಧ್ಯಕ್ಷರಾದ ಬಸವನಗೌಡ ಹರವಿ,ಮಾಜಿ ಶಾಸಕ ರಾದ ಗಂಗಾಧರನಾಯಕ, ಬಸವನಗೌಡ ಬ್ಯಾಗವಾಟ್, ಹಂಪಯ್ಯ ನಾಯಕ, ಹAಪನಗೌಡ ಬಾದರ್ಲಿ, ಶಶಿಧಾರ ಮೇಟಿ ಮಾತನಾಡಿದರು.

ವಳಬಳ್ಳಾರಿ ವಿರಕ್ತಮಠದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು, ಮಿಟ್ಟೆ ಮಲ್ಕಾಪುರದ ಶಾಂತಶ್ರಮದ ಶ್ರೀ ನಿಜಾನಂದ ಮಹಾಸ್ವಾಮಿಗಳು, ಕಲ್ಮಠದಶ್ರೀ ವಿರೂಪಾಕ್ಷ ಪಂಡಿತರಾದ್ಯ ಮಹಾಸ್ವಾಮಿಗಳು, ಶ್ರೀ ಸದಾಶಿವ ಮಾಹಾಸ್ವಾಮಿಗಳು, ಸೇರಿದಂತೆ ವಿವಿಧ ಮಠಗಳ ಪೂಜ್ಯರು,ಗಣ್ಯರು ಇದ್ದರು.

ರಾಯಚೂರು ಸಹಾಯಕ ಆಯುಕ್ತರಾದ ರಜನಿಕಾಂತ್ ಚೌಹಾಣ್ ,ತಹಸೀಲ್ದಾರ್ ಚಂದ್ರಕಾAತ್ ಎಲ್.ಡಿರವರಿಗೆ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳನ್ನು ಮನವಿ ರೂಪದಲ್ಲಿ ಸಲ್ಲಸಲಾಯಿತು.

ಡಾ.ಎಂ.ಆರ್, ಪಂಪನಗೌಡ, ಡಾ.ಸಿದ್ದಣ. ಬಿ.ಉತ್ನಾಳ್, ಡಾ.ಎಸ್.ಸಿ. ಪಾಟೀಲ್, ಲಾಳಗೋಂಡ ಸಮಾಜದ ಹಿನ್ನಾಲೆಯ ಬಗ್ಗೆ ಉಪನ್ಯಾಸ ನೀಡಿದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಲಾಳಗೊಂಡ ಸಮಾಜದ ಸಾವಿರಾರು ಜನರು ಸಮಾವೇಶದಲ್ಲಿ ಭಾಗವಹಿಸಿದರು.

ಜಿಲ್ಲಾಧ್ಯಕ್ಷ ವೀರಭದ್ರಪ್ಪಗೌಡ ಅಲ್ದಾಳ್, ತಾ.ಅಧ್ಯಕ್ಷರಾದ ಮಹಾದೇವಪ್ಪಗೌಡ ಕಟಾಲಿ,ಮುಖಂಡರಾದ ರವಿಭೋಸರಾಜ್ ಸೇರಿದಂತೆ ಇನ್ನಿತರರು ಇದ್ದರು.