Friday, 20th September 2024

ಪೊಲೀಸ್ ರ ದಾಳಿ: ನಕಲಿ ನೋಟು ಪತ್ತೆ

ಮುದಗಲ್ : ಎಣ್ಣೆ ಸೀಝ್ ಮಾಡಲು ಹೋದ ಪೊಲೀಸರಿಗೆ ಸಿಕ್ತು ಕಂತೆ ಕಂತೆ ನಕಲಿ ನೋಟು ಸಿಕ್ಕ ಘಟನೆ ರಾಯಚೂರ ಜಿಲ್ಲೆಯಲ್ಲಿ ಲಿಂಗಸೂಗೂರ ಪಟ್ಟಣದ ಗೌಳೀಪುರ ಓಣಿಯಲ್ಲಿ ಘಟನೆ ನಡೆದಿದೆ.

ಒಂದು ಕಡೆ 500 ಮುಖಬೆಲೆ, ಮತ್ತೊಂದು ಕಡೆ ಪೇಪರ್ ಇರುವ ನಕಲಿ ನೋಟುಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳೇ ಕಕ್ಕಾ ಬಿಕ್ಕಿಯಾಗಿದ್ದಾರೆ. 500 ಮುಖಬೆಲೆಯ 62 ಬಂಡಲ್ ಮುದ್ರಿತ ನೋಟು ಪತ್ತೆಯಾಗಿದ್ದು ಜನರಿಗೆ ವಂಚಿಸುವ ದೃಷ್ಟಿಯಿಂದ ನಕಲಿ‌ ನೋಟು ತಯಾರಿಸುತ್ತಿದ್ದ ಎಂಬ ಮಾಹಿತಿ ಇದೆ.

ಲಿಂಗಸ್ಗೂರು ಸಹಾಯಕ ಆಯುಕ್ತರು ಹಾಗೂ ಪಿಐ ಪುಂಡಲೀಕ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. ಚೋಟಾಸಾಬ ಎಂಬ ನೋಟು ತಯಾರಿಸುತ್ತಿದ್ದ ವ್ಯಕ್ತಿ ಬಂಧನ ಮಾಡಲಾಗಿದೆ. ಯಾತಕ್ಕಾಗಿ ನಕಲಿ ನೋಟು ಶೇಖರಿಸಿದ್ದ, ಎಂಬ ಹೆಚ್ಚಿನ ತನಿಖೆ ಕೈಗೊಂಡ‌ ಪೊಲೀಸರು, ಎಸ್ಪಿ ನಿಖಿಲ್ ಬಿ. ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ಮಾರ್ಗದರ್ಶನ ದಲ್ಲಿ ತನಿಖೆ ಚುರುಕುಗೊಳಿಸಲಾಗಿದೆ.

ಲಿಂಗಸ್ಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.