Thursday, 12th December 2024

ಕಾಂಗ್ರೇಸ್ ಅಭ್ಯರ್ಥಿ ಪರ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಂದ ಬಹಿರಂಗ ಪ್ರಚಾರ

ಮಾನ್ವಿ: ಪಟ್ಟಣದ ಟಿ.ಎ.ಪಿ.ಎಂ.ಸಿ. ಬಯಲು ಜಾಗದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಹಂಪಯ್ಯನಾಯಕ ಸಾಹುಕರ್ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಹಿರಂಗ ಪ್ರಚಾರ ನಡೆಸುವ ಮೂಲಕ ಮತಯಾಚನೆ ಮಾಡಿ ಮಾತನಾಡಿ ರಾಜ್ಯದಲ್ಲಿನ ಎಲ್ಲಾ ಸಮುದಾಯಗಳ ಜನರಿಗೆ ಒಳಿತನ್ನು ನೀಡುವ ಉತ್ತಮವಾದ ಸರಕಾರ ಬರಬೇಕು ಎನ್ನುವ ಉದ್ದೇಶದಿಂದ ಎಂ.ಈರಣ್ಣನವರು ಕಳೆದ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆದಿದ್ದರು ಕೂಡ ತಮ್ಮ ಸೊಸೆಯ ನಾಮಪತ್ರವನ್ನು ಹಿಂಪಡೆಯುವ ಮೂಲಕ ಕಣದಿಂದ ಹಿಂದೆ ಸರಿಯುವ ಮೂಲಕ ಪಕ್ಷದ ಅಭ್ಯರ್ಥಿ ಗೇಲುವಿಗೆ ಸಹಕಾರ ಮಾಡಿದ್ದಾರೆ.

ಕಾಂಗ್ರೇಸ್ ಪಕ್ಷದಿಂದ ನಡೆಸಲಾದ ಸಮೀಕ್ಷೆಯಲ್ಲಿಯು ಕ್ಷೇತ್ರದಲ್ಲಿ ಹಂಪಯ್ಯನಾಯಕ ಪರ ಜನಭಿಪ್ರಯ ವ್ಯಕ್ತವಾಗಿದ್ದಾರಿಂದ ಈ ಬಾರಿ ಅವರಿಗೆ ಪಕ್ಷದಿಂದ ಟಿಕೇಟ್ ನೀಡಲಾಗಿದೆ ಆದ್ದರೆ ಬಿ.ವಿ.ನಾಯಕರವರಿಗೆ ಕಳೆದ ಲೋಕಸಭ ಚುನಾವಣೆಯಲ್ಲಿ ಹೆಚ್ಚಿನ ಮತಗಳು ಬಂದಿರುವ ದೇವದುರ್ಗದಿಂದ ಚುನಾವಣೆಗೆ ಸ್ಪರ್ಧೆ ನಡೆಸಲು ಪಕ್ಷದಿಂದ ಟಿಕೆಟ್ ನೀಡುವುದಾಗಿ ತಿಳಿಸಿದರು. ಕೂಡ ಮಾನ್ವಿ ಕ್ಷೇತ್ರದಿಂದಲೇ ಟಿಕೆಟ್ ನೀಡುವಂತೆ ಪಟ್ಟು ಹಿಡಿದು ಬಿಜೆಪಿ ಪಕ್ಷವನ್ನು ಸೇರಿದ್ದಾರೆ.

ಪಕ್ಷದಿಂದ ಇವರಿಗೆ ಲೋಕಸಭೆಗೆ ಸ್ಪರ್ಧೇಸಲ್ಲಿಸಲು ಅವಕಾಶ ನೀಡಲಾಗಿತ್ತು ಅವರ ತಂದೆಯವರಿಗೆ ಒಂದು ಬಾರಿ ವಿಧಾನ ಸಭೆ,೪ ಬಾರಿ ಲೋಕಸಭೆಗೆ ಸ್ಪರ್ಧೆ ನಡೆಸಲು ಹಾಗೂ ಅವರ ಸೋದಾರರಿಗೆ ವಿಧಾನಸಭೆಗೆ ಸ್ಪರ್ಧೇ ನಡೆಸಲು ಅವಕಾಶ ನೀಡಿದ್ದು ಈ ಬಾರಿ ಕೂಡ ಕಾಂಗ್ರಸ್ ವತಿಯಿಂದ ಇವರ ಕುಟುಂಬದ ಶ್ರೀದೇವಿಯವರಿಗೆ ಟಿಕೆಟ್ ನೀಡಲಾಗಿದೆ ಪಕ್ಷದಿಂದ ಇವರ ಕುಟುಂಬಕ್ಕೆ ಸಾಕಷ್ಟು ಅನುಕೂಲ ವಾಗಿದ್ದರು ಕೂಡ ಬಿಜೆಪಿ ಪಕ್ಷವನ್ನು ಸೇರಿ ಪಕ್ಷದ ಅಭ್ಯರ್ಥಿ ವಿರುದ್ದ ಸ್ಪರ್ಧೆ ನಡೆಸುತ್ತಿರುವ ಇವರಿಗೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ.

ನಮ್ಮ ಸರಕಾರದ ಅವಧಿಯಲ್ಲಿ ೪ ಕೋಟಿ ೩೦ ಲಕ್ಷ ಬಡಜನರಿಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಕುಟುಂಬದ ತಲಾ ವ್ಯಕ್ತಿಗೆ ಕೂಡ ೭ ಕೆಜಿ ಅಕ್ಕಿಯನ್ನು ನೀಡುವ ಮೂಲಕ ಹಸಿವು ಮುಕ್ತ ಸಮಾಜವನ್ನು ನಿರ್ಮಾಣ ಮಾಡಲಾಗಿತ್ತು ಆದ್ದರೆ ಬಿಜೆಪಿ ಸರಕಾರ ದಿಂದ ಇಂದು ತಲಾ ಒಬ್ಬರಿಗೆ ೪ಕೆಜಿ ಅಕ್ಕಿಯನ್ನು ಮಾತ್ರ ನೀಡುವ ಮೂಲಕ ಬಡವರ ಶಾಪಕ್ಕೆ ಗುರಿಯಾಗಿದ್ದಾರೆ.

ನಮ್ಮ ಪಕ್ಷದಿಂದ ಈ ಬಾರಿ ಹೆಚ್ಚಿನ ಅಭ್ಯರ್ಥಿಗಳು ಗೇಲುವು ಸಾಧಿಸಲಿದ್ದು ರಾಜ್ಯದಲ್ಲಿ ಕಾಂಗ್ರೇಸ್ ನೇತೃತ್ವದ ಸರಕಾರ ಬಂದ ನಂತರ ಮೋದಲ ಕ್ಯಾಬಿನೆಟ್ ಸಭೆಯಲ್ಲಿಯೇ ಪ್ರತಿ ಪಡಿತರ ಕುಟುಂಬ ಸದಸ್ಯರಿಗೆ ತಲಾ ಹತ್ತು ಕೆಜಿ ಅಕ್ಕಿಯನ್ನು ನೀಡುವ ಕಡತಕ್ಕೆ ಸಹಿ ಹಾಕಲಾಗುವುದು. ಗ್ಯಾರಂಟಿ ಕಾರ್ಡನಲ್ಲಿ ತಿಳಿಸಿದ ಬರವಸೆಯಂತೆ ಪ್ರತಿ ಕುಟುಂಬದ ಮಹಿಳೆಗೆ ೨ಸಾವಿರ ಸಹಯದಾನ,೨೦೦ ಯೂನಿಟ್ ವರೆಗೆ ಉಚಿತವಾದ ವಿದ್ಯುತ್, ನಿರೊದ್ಯೋಗಿ ಯುವಜನರಿಗೆ ಮಾಸಿಕ ಭತ್ಯ ನೀಡುವ ಯೋಜನೆ ಗಳನ್ನು ಜಾರಿಗೆ ತರಲಾಗುವುದು. ಅದರೆ ಜನರ ತೆರಿಗೆ ಹಣವನ್ನು ಬಿಜೆಪಿ ಸರಕಾರ ಬಡಜನರ ಅಗತ್ಯಗಳಿಗೆ ಬಳಸದೆ ಶ್ರೀಮಂತ ಬಂಡವಳದಾರರಿಗೆ ೧೨ಲಕ್ಷಕೋಟಿ ಸಾಲವನ್ನು ಮನ್ನ ಮಾಡುವ ಮೂಲಕ ಅನುಕೂಲ ಮಾಡಿಕೊಡುತ್ತಿದೆ.

ನಾವು ನೀಡದ ೧೬೫ ಬರವಸೆಗಳ ಜೊತೆಗೆ ಇನ್ನೂ ೩೨ ಬರವಸೆಗಳನ್ನು ಈಡೆರಿಸಿದ್ದೇವೆ.ಆದ್ದರೆ ಮೋದಿಯವರು ಹೇಳಿದಂತೆ ಇನ್ನುಕೂಡ ಅಚ್ಛೆದಿನ ಬಂದಿಲ್ಲ ಬಡವರು ತಿನ್ನುವ ಮಂಡಕ್ಕಿ,ಮೊಸರು,ಮಜ್ಜಿಗೆ,ಮಕ್ಕಳ ಪೆನ್ನು, ಕಾಗದಕ್ಕೂ ತೆರಿಗೆ ವಿಧಿಸುವ ಮೂಲಕ ಬಡವರ ರಕ್ತವನ್ನು ಹಿರುತ್ತಿದೆ. ವಿಧಾನಸೌದದ ಪ್ರತಿಯೊಂದು ಗೊಡೆಯಲ್ಲಿ ಕೂಡ ಲಂಚ ಲಂಚ ಎಂದು ಕೇಳಿಸುತ್ತಿದೆ
ಶಾಸಕರಾಗಿ ಸೇವೆ ಸಲ್ಲಿಸಿದ ಜಿ.ಹಂಪಯ್ಯನಾಯಕರವರು ಕ್ಷೇತ್ರಕ್ಕೆ ಅನೇಕ ಜನಪರ ಯೋಜನೆಗಳನ್ನು ತಂದಿದ್ದಾರೆ. ಅತ್ಯಂತ ಸರಳವಾದ,ಪ್ರಮಾಣಿಕ ವ್ಯಕ್ತಿಯಾಗಿರುವ ಜಿ.ಹಂಪಯ್ಯನಾಯಕರವರಿಗೆ ಮತದಾರರು ಬೆಂಬಲ ನೀಡಿ ಗೇಲ್ಲಿಸಬೇಕು.

ಜಿ.ಹಂಪಯ್ಯ ನಾಯಕರವರಿಗೆ ನೀವು ನೀಡಿದ ಒಂದೊAದು ಮತ ಕೂಡ ನನ್ನಗೆ ಮುಖ್ಯಮಂತ್ರಿಯಾಗಲು ನೀಡಿದಂತೆ ಎಂದು ಮತವನ್ನು ಯಾಚಿಸಿದರು. ಮಾಜಿ ಸಚಿವೆ ಉಮಾಶ್ರೀ ಮಾತನಾಡಿ ಇನ್ನೂ ೧೫ ದಿನಗಳ ನಂತರ ಗ್ಯಾರಂಟಿಯಾಗಿ ಜನಪರವಾದ ಕಾಂಗ್ರೇಸ್ ಸರಕಾರ ಬರಲಿದೆ.

ರಾಜ್ಯದ ಜನರು ಬಿಜೆಪಿ ನೇತೃತ್ವದ ಸರಕಾರದ ದುರಡಳಿತದಿಂದ ಜನ ಬೇಸತ್ತಿದ್ದು ಸಿದ್ದರಾಮಯ್ಯ ನೇತೃತ್ವದ ಸರಕಾರವು ನಾಡಿನ ಜನರಿಗೆ ಹಲವು ಭಾಗ್ಯಗಳನ್ನು ನೀಡುವ ಮೂಲಕ ಅರ್ಥಿಕವಾಗಿ ಹಿಂದುಳಿದಿರುವ ರೈತರಿಗೆ, ನೇಕರರಿಗೆ, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ ಕಳೆದ ಬಾರಿ ಆಪರೇಶನ್ ಕಮಲದ ಮೂಲಕ ವಾಮ ಮಾರ್ಗದಲ್ಲಿ ಬಂದAತಹ ಅಸಹಜ ಬಿಜೆಪಿ ಸರಕಾರ ೪ ವರ್ಷಗಳಲ್ಲಿ ಯಾವುದೇ ವರ್ಗದ ಜನರಿಗೆ ಅನುಕೂಲ ಮಾಡಿಲ್ಲ ಪಿ.ಎಸ್.ಐ. ಸೇರಿದಂತೆ ಪ್ರತಿಯೊಂದು ಸರಕಾರದ ಉದ್ಯೋಗ ನೇಮಕಾತಿಯಲ್ಲಿಯೂ ಭ್ರಷ್ಟಚಾರ ನಡೆದಿರುವ ಅರೋಪಗಳು ಕೇಳಿಬಂದಿವೇ.ಬಿಜೆಪಿ ನಾಯಕರ ಬಾಯಿಯಿಂದ ಒಂದು ಒಳ್ಳಯ ಮಾತು ಕೂಡ ಇದುವರೆಗೂ ಬಂದಿಲ್ಲ.ಆನೈತಿಕ ಬಿಜೆಪಿ ಪಕ್ಷಕ್ಕೆ ಎಂದಿಗೂ ಕೂಡ ಮತವನ್ನು ನೀಡಬೇಡಿ ಕಾಂಗ್ರೇಸ್ ಪಕ್ಷಕ್ಕೆ ಮತವನ್ನು ನೀಡುವುದರಿಂದ ದೇಶಕ್ಕೆ ಹಿತ ಎಂದು ತಿಳಿಸಿದರು.

ಕಾಂಗ್ರೇಸ್ ಅಭ್ಯರ್ಥಿ ಜಿ.ಹಂಪಯ್ಯನಾಯಕ ಮಾತನಾಡಿ ೨೦ ವರ್ಷದಲ್ಲಿ ನೀವು ಎನ್ನೂ ಅಭಿವೃದ್ದಿಯನ್ನು ಮಾಡಿದ್ದಿರಿ ಎಂದೂ ಪ್ರಶ್ನಿಸುವ ಶಾಸಕರೇ ಐದು ವರ್ಷಗಳಲ್ಲಿ ನಿಮ್ಮ ಸಾಧನೆ ಎನ್ನೂ ಎನ್ನುವುದನ್ನು ತಿಳಿಸಿ ಬಿಜೆಪಿಯಂತಹ ಕೆಟ್ಟ ಸರಕಾರ ರಾಜ್ಯದಲ್ಲಿ ಹೋಗುವವರೆಗೂ ಬಡವರ ಜೀವನ ಸುಧಾರಣೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ಎ.ಐ.ಸಿ.ಸಿ. ಕಾರ್ಯದರ್ಶಿಎನ್ .ಎಸ್.ಬೋಸರಾಜು ಮಾತನಾಡಿ ಕಳೆದ ಐದು ವರ್ಷಗಳಿಂದ ಜನರು, ಬಡವರು, ರೈತರು,ಯುವಕರು,ರಾಜ್ಯಸರಕಾರದ ದುರಡಳಿತದಿಂದ ಬೇಸತ್ತು ಚುನಾವಣೆ ಬರಲಿ ಉತ್ತಮ ಸರಕಾರ ದೊರೆಯಲಿ ಎಂದು ಆಶಿಸುತ್ತಿದ್ದಾರು ಇಂದು ಅವಕಾಶ ದೊರೆತ್ತಿದ್ದು ಕಾಂಗ್ರೇಸ್ ಪಕ್ಷದ ಪರವಾಗಿ ಮತವನ್ನು ಹಾಕುವ ಮೂಲಕ ಒಳ್ಳೆಯ ಸರಕಾರ ಬರಲಿ ಎಂದು ಕೋರುತ್ತಿದ್ದಾರೆ ಎಂದು ತಿಳಿಸಿದರು.

ಮೇಲ್ಮನೆ ಸಚೇತಕ ವಿಧಾನಪರೀಷತ್ ಸದಸ್ಯ ಪ್ರಕಾಶ್ ರಾಥೋಡ್ , ಶರಣಯ್ಯ ಗುಡದಿನ್ನಿ, ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರಾದ ವಸಂತನಾಯಕ, ಮಾನ್ವಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಅಬ್ದುಲ್ ಗಫೂರ್ ಸಾಬ್, ಸಿರವಾರ ಚುಕ್ಕಿಸೂಗಯ್ಯ,ಬಾಲಸ್ವಾಮಿ ಕೊಡ್ಲಿ,ಬಸವರಾಜ ನಾಡಗೌಡ, ದೊಡ್ಡಬಸಪ್ಪ,ಆಲ್ದಾಳ ವೀರಭದ್ರಪ್ಪ,ಸೇರಿದಂತೆ ಇನ್ಮನಿತರರು ಇದ್ದರು.

ಇದೆ ಸಂದರ್ಭದಲ್ಲಿ ಎಂ.ಈರಣ್ಣ ನವರನ್ನು ಪಕ್ಷಕ್ಕೆ ಮರಳಿ ಬರಮಾಡಿಕೊಳ್ಳಲಾಯಿತು. ಸಿದ್ದರಾಮಯ್ಯನವರ ಅಭಿಮಾನಿಗಳು ವೇದಿಕೆಯಲ್ಲಿ ಕುರಿಮರಿಗಳನ್ನು ನೀಡಲು ಪೈಪೋಟಿ ನಡೆಸಿದರಿಂದ ನೂಕುನುಗ್ಗಲು ಉಂಟಾಯಿತು. ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಏ ಐ ಸಿ ಸಿ ಕಾರ್ಯದರ್ಶಿ ಎನ್ಎಸ್ ಬೋಸರಾಜು ಪ್ರಕಾಶ್ ಠಾಕೂರ್, ಮಾಜಿ ಸಚಿವೆ ಉಮಾಶ್ರೀ, ಹಂಪಯ್ಯ ನಾಯಕ ಸಾಹುಕಾರ, ಸೈಯದ್ ಸಜ್ಜತ್ ಹುಸೇನಿ ಮತವಾಲೆ, ಸೂಗಪ್ಪ ಚುಕ್ಕಿ, ಅಬ್ದುಲ್ ಗಪುರ್ ಸಾಬ್, ವೈ ಶರಣಯ್ಯ ನಾಯಕ ಗುಡದಿನ್ನಿ, ರಾಜಾ ವಸಂತ ನಾಯಕ, ಎಂ ಈರಣ್ಣ, ರಫೀ ಸಾಹುಕಾರ, ದೊಡ್ಡಬಸಪ್ಪ ಗೌಡ ಭೋಗವತಿ,
ಖಾಲಿದ್ ಖಾದ್ರಿ, ಬಾಲ ಸ್ವಾಮಿ ಕೊಡ್ಲಿ, ನದಿರುದ್ದೀನ್ ಖಾದ್ರಿ, ಬಸವರಾಜ್ ನಾಡಗೌಡ ಪೋತ್ನಾಳ, ಸತೀಶ್ ಕುಮಾರ್, ನಾಗನಗೌಡ, ಸೈಯದ್ ಆಬಿದ್ ಖಾದ್ರಿ, ಬಿಕೆ ಅಂಬರೇಶಪ್ಪ, ವೀರಭದ್ರಪ್ಪ ಗೌಡ ಆಲ್ದಾಳ, ಸಬ್ಜಲ್ಲಿ ಸಾಬ್, ಹನುಮೇಶ್ ಮದ್ಲಾಪುರ್, ಮಹಾಂತೇಶ್ ಸ್ವಾಮಿ ರೌಡೂರ್, ಗುಂಡಮ್ಮ, ಮಹಿಳೆಯರು ಪುರುಷರು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.