Tuesday, 17th September 2024

ಸಾಹುಕಾರ್ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಗೋಕಾಕ್ ನಲ್ಲಿರುವ ಸೌಭಾಗ್ಯ ಲಕ್ಷ್ಮಿ ಶುಗರ್ ಫ್ಯಾಕ್ಟರಿ ಸಲುವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೋಟ್ಯಾಂತರ ರೂಪಾಯಿ ಸಾಲ ಪಡೆದುಕೊಂಡಿದ್ದು, ಸಾಲ ಮರುಪಾವತಿ ಮಾಡದೆ ಇದ್ದಿದ್ದರಿಂದ ಬೆಂಗಳೂರಿನ ವಿವಿ ಪುರಂ ಠಾಣೆಯಲ್ಲಿ ಸಾಹುಕಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಸೌಭಾಗ್ಯ ಲಕ್ಷ್ಮಿ ಮೈ ಶುಗರ್ ಕಂಪನಿ ಅಧ್ಯಕ್ಷರು ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಜಾರಕಿಹೊಳಿ ಕಂಪನಿಯಲ್ಲಿ ವಸಂತ ಪಾವಡೆ ಹಾಗೂ ಶಂಕರ ಪಾವಡೆ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಚಾಮರಾಜಪೇಟೆ ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಷೆ ಬ್ಯಾಂಕ್ ನಲ್ಲಿ 2013ರಿಂದ 2017 ರ ವರೆಗೂ ಕೂಡ ಹಂತ ಹಂತವಾಗಿ ಜಾರಕಿಹೊಳಿ 239. 87 ಲಕ್ಷಗಳನ್ನು ಸಾಲವಾಗಿ ಹಂತವಾಗಿ ಪಡೆದಿರುತ್ತಾರೆ.ನಂತರ 2013ರ ವರೆಗೆ 430 ಕೋಟಿ 7 ಲಕ್ಷ ರೂಪಾಯಿ ಸಾಲ ಬಾಕಿ ಇರುತ್ತದೆ.

ಈ ಒಂದು ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಸ್ ಬ್ಯಾಂಕ್ ಮ್ಯಾನೇಜರ್ FIR ದಾಖಲಿಸಿ ದ್ದಾರೆ.

Leave a Reply

Your email address will not be published. Required fields are marked *