ಬೆಂಗಳೂರು: ಇಂದಿನಿಂದ ಆರಂಭವಾದ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಮಯಂಕ್ ಅಗರವಾಲ್ ಮತ್ತು ಆರ್.ಸಮರ್ಥ್ ಜೋಡಿ ಉತ್ತಮ ಆರಂಭ ನೀಡಿದೆ.
ಭಾನುವಾರ ಸುರಿದ ಮಳೆಯಿಂದಾಗಿ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣವು ತೇವಗೊಂಡಿದ್ದರಿಂದ ಸೋಮವಾರ ಪಂದ್ಯವು 11.20ಕ್ಕೆ ಶುರುವಾಯಿತು. ಟಾಸ್ ಗೆದ್ದ ಉತ್ತರಪ್ರದೇಶ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡವು ಊಟದ ವಿರಾಮದ ವೇಳೆಗೆ 8 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 32 ರನ್ ಗಳಿಸಿತು. ಮಯಂಕ್ ಅಗರ ವಾಲ್ 8 ರನ್ ಮತ್ತು ಸಮರ್ಥ್ 24 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಸಮರ್ಥ್ ಅತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡುತ್ತಿದ್ದಾರೆ. ಐದು ಬೌಂಡರಿ ಗಳಿಸಿದ ಅವರು ಬೌಲರ್‌ಗಳಿಗೆ ದಿಟ್ಟ ಉತ್ತರ ನೀಡಿದರು.
ಉತ್ತರ ಪ್ರದೇಶ ಬೌಲಿಂಗ್ ಪಡೆ ಯಶ್ ದಯಾಳ್, ಅಂಕಿತ್ ರಜಪೂತ್, ಶಿವಂಮಾವಿ ಮತ್ತುಸೌರಭ್ ಅವರ ಪ್ರಯತ್ನಗಳಿಗೆ ಫಲ ಸಿಗಲಿಲ್ಲ.