Saturday, 14th December 2024

Rape: ತಂದೆಯಿಂದಲೆ ಮಗಳ ಮೇಲೆ ಅತ್ಯಾಚಾರ

ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿ ಹೈನುಗಾರಿಕೆಯ ಕಾರ್ಯದಲ್ಲಿ ತೊಡಗಿರುವ ಕೂಲಿ ಕೆಲಸ ಮಾಡು ತ್ತಿದ್ದ ಉತ್ತರ ಪ್ರದೇಶದ ಸುಭಾಷ್ ಎಂಬುವ ವ್ಯಕ್ತಿ ಸ್ವಂತ ಮಗಳ ಮೇಲೆ ಆತ್ಯಾಚಾರ ಮಾಡಿರುವುದು ಘಟನೆ ನಡೆದಿದೆ.

ಉತ್ತರ ಪ್ರದೇಶದ ಕುಟುಂಬವು ಗಂಡ- ಹೆಂಡತಿ, ಮಗಳು ಸುಮಾರು ಎಂಟು ತಿಂಗಳಿಂದ ಇಲ್ಲಿ ವಾಸವಾಗಿತ್ತು. ರಾತ್ರಿ ಹೆಂಡತಿ ಮಲಗಿದ ನಂತರ ಮಗಳ ಮೇಲೆ ಆತ್ಯಾಚಾರ ಮಾಡಿದ್ದು. ಹೆಣ್ಣು ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಾಗ ತಾಯಿ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ಮಾಡಿದಾಗ ಗರ್ಭವತಿ ಆಗಿರುವುದು ತಿಳಿದು ಬಂದಿದೆ.

ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.