Saturday, 14th December 2024

ಸಹಕಾರಿ ರತ್ನ ಮಲ್ಲಿಕಾರ್ಜುನಯ್ಯಗೆ ಅಭಿನಂದನೆ

ತುಮಕೂರು: ನಗರದ ಶ್ರೀಗುರುಕುಲ ವಿವಿದೋದ್ದೇಶ ಸೌಹಾರ್ಧ ಸಹಕಾರಿ ನಿಯಮಿತದವತಿಯಿಂದ 2022ನೇ ಸಾಲಿನ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಶ್ರೀಗುರುಕುಲ ವಿವಿದೋದ್ದೇಶ ಸೌಹಾರ್ಧ ಸಹಕಾರಿಯ ಅಧ್ಯಕ್ಷರಾದ ಜಿ.ಮಲ್ಲಿಕಾ ರ್ಜುನಯ್ಯ ಅವರಿಗೆ ಅಭಿನಂದನಾ ಸಮಾರಂಭವನ್ನು  ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಜಿ.ಮಲ್ಲಿಕಾರ್ಜುನಯ್ಯ ಉತ್ತಮ ನಡೆ, ನುಡಿ ಮತ್ತು ದಕ್ಷ ಆಡಳಿತಕ್ಕೆ ಹೆಸರು ವಾಸಿ ಯಾದವರು. ಹೆಚ್.ಎಂ.ಟಿ.ಯ ನೌಕರರಾಗಿದ್ದ ಕಾಲದಿಂದಲೂ ಅವರನ್ನು ನಾನು ಬಲ್ಲ. ನೇರ ಮತ್ತು ನಿಷ್ಠೂರ ನಡೆ.ಯಾವುದೇ ರಾಜಿಗೆ ಒಳಗಾಗದ ವ್ಯಕ್ತಿ.ಅವರ ಗುರುಕುಲ ಡಿಪಾರ್ಟಮೆಂಟಲ್ ಸ್ಟೋರ್ ನೋಡಿದಾಗ ನಿಜಕ್ಕೂ ಆಶ್ಚರ್ಯವೆನಿಸಿತ್ತು.ಗ್ರಾಹಕರ ಮನೆ ಬಾಗಿಲಿಗೆ ಅತ್ಯಂತ ಶುಚಿ ಮತ್ತು ಗುಣಮಟ್ಟದ ಆಹಾರ ಪದಾರ್ಥ ಮತ್ತು ಇತರೆ ಅಗತ್ಯ ವಸ್ತುಗಳನ್ನು ನೀಡುತಿದ್ದಾರೆ.ಇದರ ಬಳಕೆಯನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.
ಸ್ವರ್ಗ, ನರಕಗಳ ಪರಿಕಲ್ಪನೆ ಇದ್ದರು.ಒಳ್ಳೆಯದ ಸ್ವರ್ಗ,ಕೆಟ್ಟದ್ದೇ ನರಕ ಎಂಬುದು ನನ್ನ ಅಭಿಪ್ರಾಯ.ರಾಜಕಾರಣದಲ್ಲಿ ಸಕ್ರಿಯ ರಾಗಿದ್ದರೂ ಯಾವುದೇ ಹುದ್ದೆಗೆ ಆಸೆ ಪಟ್ಟವ ರಲ್ಲ. ಆರ್ಹವಾಗಿಯೇ ಅವರು ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿವಿಧ ಬ್ಯಾಂಕು, ಸಹಕಾರಿ ಸಂಸ್ಥೆಗಳಲ್ಲಿ ಸದಸ್ಯರಾಗಿ, ನಿರ್ದೇಶಕರಾಗಿ ಕಾರ್ಯನಿರ್ವಹಿಸು ತ್ತಿದ್ದಾರೆ. ಅವರಿಂದ ಹೆಚ್ಚಿನ ಸೇವೆ ಈ ಕ್ಷೇತ್ರಕ್ಕೆ ಆಗಲಿ. ಆ ಮೂಲಕ ದೇಶಕ್ಕೆ ಹೆಚ್ಚಿನ ಶಕ್ತಿ ಸಿಗುವಂತಾಗಲಿ ಎಂದು ಸಂಸದ ಜಿ.ಎಸ್.ಬಸವರಾಜು ಶುಭ ಹಾರೈಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಚಿಕ್ಕತೊಟ್ಲುಕೆರೆಯ ಅಟವಿ ಜಂಗಮ ಸುಕ್ಷೇತ್ರದ ಶ್ರೀಅಟವಿ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ,ಜಿ.ಮಲ್ಲಿಕಾರ್ಜುನಯ್ಯ ತನ್ನ ಬದುಕಿನ ಜೊತೆಗೆ,ಬೇರೆಯವರ ಬದುಕಿಗೂ ನೆರವಾದವರು. ಸದಾ ಕ್ರಿಯಾಶೀಲವಾಗಿ,ಧಾರ್ಮಿಕ,ಸಾಮಾಜಿಕ,ಶೈಕ್ಷಣಿಕ ಹಾಗೂ ಅರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು, ರಾಜಕೀಯ ವಾಗಿಯೂ ಹಲವಾರು ಕೆಲಸ ಮಾಡಿದ್ದಾರೆ.ಸಹಕಾರಿ ಕ್ಷೇತ್ರಕ್ಕೆ ಜೀವನವನ್ನು ಮುಡಿಪಾಗಿ ಟ್ಟವರು. ಸರಕಾರ ಇವರ ಸೇವೆಯನ್ನು ಗುರುತಿಸಿ, ಸಹಕಾರ ರತ್ನ ಪ್ರಶಸ್ತಿ ನೀಡಿರುವುದು ನಾವೆಲ್ಲರೂ ಹೆಮ್ಮೆ ಪಡುವಂತಹ ವಿಚಾರವಾಗಿದೆ.
ಹಣ,ಅಧಿಕಾರದಿಂದ ಯಾರು ದೊಡ್ಡವರಾಗಲ್ಲ. ಅವರು ಮಾಡುವ ಸೇವೆ ಮನುಷ್ಯನನ್ನು ದೊಡ್ಡವರನ್ನಾಗಿ ಮಾಡುತ್ತದೆ. ಕ್ರಿಯಾಶೀಲತೆ ಮುಖ್ಯ. ಸಹಕಾರಿ ಸಂಸ್ಥೆ ಇಂದು ಬಹುವ್ಯಾಪಿಯಾಗಿದೆ. ವೀರಶೈವ ಸಂಸ್ಥೆಗಳು ಸರಕಾರಕ್ಕಿಂತಲೂ ಹೆಚ್ಚು ಕೆಲಸವನ್ನು ಮಾಡಿ, ಸಮಾಜದ ಏಳಿಗೆಗೆ ದುಡಿದಿವೆ.ಅವುಗಳಲ್ಲಿ ಗುರುಕುಲ ಸಂಸ್ಥೆಯೂ ಸೇರಿದೆ ಎಂದರು.
ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾದ ಜಿ.ಎನ್.ಬಸವರಾಜಪ್ಪ ಮಾತನಾಡಿ,ಸಹಕಾರ ರತ್ನ ಈ ಕ್ಷೇತ್ರದಲ್ಲಿ ಪ್ರತಿಷ್ಠಿತ ಪ್ರಶಸ್ತಿ.ಎಲೆಮೆರೆಯ ಕಾಯಿಯಂತೆ ಸಹಕಾರಿ ಕ್ಷೇತ್ರದಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ದುಡಿದಿದ್ದಾರೆ. ಹಾಗಾಗಿಯೇ ಅವರಿಗೆ ಅರ್ಹವಾಗಿಯೇ ಪ್ರಶಸ್ತಿಯನ್ನು ಪಡೆದಿದ್ದಾರೆ. ಸಹಕಾರಿ ಕ್ಷೇತ್ರದ ಜೊತೆಗೆ,ಸಮುದಾಯದ ಶೈಕ್ಷಣಿಕ ಮತ್ತು ಅರ್ಥಿಕ ಅಭಿವೃದ್ದಿಗೂ ದುಡಿಯುತಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಹಕಾರಿ ರತ್ನ ಪುರಸ್ಕೃತ ಜಿ.ಮಲ್ಲಿಕಾರ್ಜುನಯ್ಯ ಮಾತನಾಡಿ,ಸಹಕಾರಿ ಕ್ಷೇತ್ರದಲ್ಲಿ 1992ರಿಂದಲೂ ಕೆಲಸ ಮಾಡುತ್ತಾ ಬಂದಿದ್ದೇನೆ.ಪ್ರಥಮವಾಗಿ ಬಸವೇಶ್ವರ ಬ್ಯಾಂಕಿನ ಮುಖ್ಯಪ್ರವರ್ತಕರಾಗಿ ಕ್ಷೇತ್ರಕ್ಕೆ ಪ್ರವೇಶ ಪಡೆದು, ನಂತರ 2009ರಲ್ಲಿ ನಮ್ಮದೆ ಆದ ಗುರುಕುಲ ವಿವಿದೋದ್ದೇಶ ಸೌಹಾರ್ಧ ಸಹಕಾರಿಯನ್ನು ಆರಂಭಿಸಿ, ಬಡವರಿಗೆ ನಮ್ಮ ಕೈಲಾದ ಸಹಾಯ ಮಾಡುತ್ತಾ ಬಂದಿದ್ದೇನೆ.ಸುಮಾರು 45 ಜನರಿಗೆ ಉದ್ಯೋಗ ಕೊಟ್ಟಿದ್ದೇವೆ.ನನ್ನ ಸೇವೆಯನ್ನು ಗುರುತಿಸಿ ಸರಕಾರ ಸಹಕಾರಿ ರತ್ನ ಪ್ರಶಸ್ತಿ ನೀಡಿ, ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ.ನನ್ನಂತಹ ಅನೇಕರು ಈ ಕ್ಷೇತ್ರದಲ್ಲಿ ಎಲೆಮೆರೆಯ ಕಾಯಿಯಂತೆ ದುಡಿಯುತಿದ್ದು,ಅವರಿಗು ಸರಕಾರ ಇಂತಹ ಪ್ರಶಸ್ತಿ ನೀಡಿ ಗೌರವಿಸ ಬೇಕೆಂಬುದು ನಮ್ಮ ಮನವಿ ಎಂದರು.
ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದ ಎಂ.ಬಿ.ನ0ದೀಶ್ ಮಾತನಾಡಿ, ನಮಗೆ ಹೆಮ್ಮೆಯ ವಿಚಾರ. ಸಾಕಷ್ಟು ವರ್ಷ ಸಹಕಾರಿ ಕ್ಷೇತ್ರದಲ್ಲಿ ದುಡಿದು,ತಮ್ಮದೆ ಸಂಸ್ಥೆ ಕಟ್ಟಿ,ಯಶಸ್ವಿಯಾಗಿದ್ದಾರೆ.ಇವರ ಸೇವೆಯನ್ನು ಗುರುತಿಸಿ, ಅವರಿಗೆ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಸಹಕಾರಿ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಅವರನ್ನು ಗೌರವಿಸುವ ಮೂಲಕ ಅವರು ಸಹಕಾರಿ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂಬ ಆಶಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಜಿ.ಮಲ್ಲಿಕಾರ್ಜುನಯ್ಯ ಮತ್ತು ಅವರ ಪತ್ನಿ ಉಮಾದೇವಿ ಅವರನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುಕುಲ ವಿವಿದೋದ್ದೇಶ ಸೌಹಾರ್ಧ ಸಹಕಾರಿಯ ಉಪಾಧ್ಯಕ್ಷ ಜೆ.ರಾಜಶೇಖರಯ್ಯ ವಹಿಸಿದ್ದರು.ಸಂಸ್ಥೆಯ ಪ್ರಭಾರ ಸಿಇಓ ಜಿ.ಎಸ್.ಶಶಿಕುಮಾರ್ ಇನ್ನಿತರು ಉಪಸ್ಥಿತರಿದ್ದರು.