Wednesday, 11th December 2024

ಸಚಿವ ಸುಧಾಕರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು : ಆಂಜನೇಯರೆಡ್ಡಿ

ಚಿಕ್ಕಬಳ್ಳಾಪುರ :  ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಆದೇಶಿಸಿ, ಸಚಿವರಿಗೆ ಸಮನ್ಸ್ ನೀಡಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆರ್.ಆಂಜನೇಯರೆಡ್ಡಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ೨೦೧೯ರಲ್ಲಿ ನಡೆದ ಸಮಾರಂಭವೊAದ ರಲ್ಲಿ ತಮ್ಮ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡಿರುವುದನ್ನು ಖಂಡಿಸಿ ಸಚಿವ ಡಾ.ಕೆ. ಸುಧಾಕರ್ ವಿರುದ್ಧ ೨೦೨೦ ರಲ್ಲಿ ದಾಖಲಿಸಿದ್ದ ಮಾನನಷ್ಟ  ಮೊಕದ್ದಮೆಯನ್ನು ಕ್ರಿಮಿನಲ್ ಪ್ರಕರಣ ಎಂದು ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಈ ನಿಟ್ಟಿನಲ್ಲಿ ಸುಧಾಕರ್ ವಿರುದ್ಧ ನ.೧೫ ರಂದು ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.

ಏನಿದು ಪ್ರಕರಣ
ಕಾಂಗ್ರೆಸ್-ಜೆಡಿಎಸ್‌ನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸರ್ವೋಚ್ಛ ನ್ಯಾಯಾಲಯದ ಮಾನದಂಡ ಗಾಳಿಗೆತೂರಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ಡಾ.ಕೆ.ಸುಧಾಕರ್‌ರನ್ನು ನೇಮಿಸಲಾಗಿತ್ತು. ಇದನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿತ್ತು. ನಂತರ ನ್ಯಾಯಾಲಯದ ಆದೇಶದಂತೆ ಸರ್ಕಾರ ಸುಧಾಕರ್‌ರಿಂದ ಸರ್ಕಾರ ರಾಜೀನಾಮೆ ಪಡೆದಿತ್ತು.

ಸಂವಿಧಾನ ಚೌಕಟ್ಟಿನ ವಿರುದ್ಧದ ವಿಚಾರದ ಕುರಿತು ನ್ಯಾಯಾಂಗದ ಮೊರೆ ಹೋಗಿರುವುದನ್ನು ಸಹಿಸದ ಡಾ.ಕೆ.ಸುಧಾಕರ್ ರೈತರಿಗೆ ಕಳ್ಳಬಟ್ಟಿ ಕುಡಿಸಿ ಜೈಲು ಸೇರಿದ್ದ ವ್ಯಕ್ತಿ ನನ್ನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ತಮ್ಮ ಆರೋಪಿಸಿ ವೈಯಕ್ತಿಕ ಟೀಕೆ ಮಾಡುವ ಮೂಲಕ ತೇಜೋವಧೆ ಮಾಡಿದ್ದರು. ಇದನ್ನು ಖಂಡಿಸಿ ಕ್ಷಮಾಪಣೆ ಯಾಚಿಸುವಂತೆ ಸುಧಾಕರ್‌ರಿಗೆ ಕೋರಿ ದ್ದರೂ ಕಡೆಗಣಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎಂದು ಹೇಳಿದರು.

ಎಚ್‌ಎನ್, ಕೆಸಿ ವ್ಯಾಲಿ ಸಂಸ್ಕರಿತ ನೀರನ್ನು ೩ ಹಂತದ ಬದಲಿಗೆ ೨ ಹಂತದಲ್ಲಿ ಶುದ್ಧೀಕರಿಸಿ ಹರಿಸಿದಲ್ಲಿ ಅಂತರ್ಜಲ ವಿಷಕಾರಿಯಾಗುವುದು ಎಂದು ಸಂಶೋದನಾ ಸಂಸ್ಥೆಗಳ ಎಚ್ಚರಿಕೆ ನಡುವೆ ೨ ಹಂತದಲ್ಲಿ ಮಾತ್ರ ಶುದ್ಧೀಕರಿಸಿ ಹರಿಸುತ್ತಿದೆ. ಎತ್ತಿನಹೊಳೆ ಯೋಜನೆಯಿಂದ ನೀರು ಹರಿಯುವುದಿಲ್ಲ ಎಂದು ವೈಜ್ಞಾನಿಕವಾಗಿ ಸಾಬೀತಾಗಿದ್ದರೂ ಜನರ ಹಿತಾಸಕ್ತಿ ಕಡೆಗಣಿಸಿ ರುವ ಜನಪ್ರತಿನಿಧಿಗಳು ದಂಡನಾಯಕರಾಗುವ ಬದಲಿಗೆ ದಲ್ಲಾಳಿಗಳಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನತೆಗೆ ನೀರಿನ ಭದ್ರತೆ ಒದಗಿಸಲು ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ವೈಯಕ್ತಿಕವಾಗಿ ಟೀಕೆ ಮಾಡಿ ತೇಜೋವಧೆ ಮಾಡಿದ್ದಾರೆ. ರಾಜಕಾರಣದಲ್ಲಿ ಕೇಸು ದಾಖಲಿಸುತ್ತೇವೆ ಎಂದು ಹೇಳಿ ಸಮ್ಮನಾಗುವುದು ಸಾಮಾನ್ಯ. ಆದರೆ ಪ್ರಾಮಾಣಿಕ ಹೋರಾಟಗಾರನ ವಿರುದ್ಧ ಇಲ್ಲಸಲ್ಲದ ಟೀಕೆ ಮಾಡಿದರೆ ಕಾನೂನಿನ ಮುಂದೆ ತಲೆಬಾಗಬೇಕಾಗುವುದು ಎಂಬುದನ್ನು ಅರ್ಥೈಸಿಕೊಳ್ಳಬೇಕೆಂದು ಹೇಳಿದರು.

ಸಾಮಾಜಿಕ ಕಳಕಳಿಯೊಂದಿಗೆ ಹೋರಾಟ ನಡೆಸುವವ ಹೋರಾಟಗಾರರನ್ನು ಚರ್ಚಿಸಿ ಸಮಸ್ಯೆಯ ಪರಿಹಾರಕ್ಕಾಗಿ ಮಾರ್ಗೋ ಪಾಯ ಹುಡುಕುವುದು ಹಿಂದಿನ ರಾಜಕಾರಣಗಳ ಶೈಲಿ ಆಗಿತ್ತು. ಆದರೆ ಇತ್ತೀಚಿನ ರಾಜಕಾರಣಿಗಳು ಹೋರಾಟಗಾರರ ವಿರುದ್ಧ ಇಲ್ಲಸಲ್ಲದ ಮೊಕದ್ದಮೆ ಹೂಡುವುದು, ಆರೋಪಗಳನ್ನು ಹೊರೆಸುವುದು ಸಾಮಾನ್ಯವಾಗಿದೆ. ಇದು ಸಮಾಜಕ್ಕೆ ಮಾರಕವಾಗಿ ಪರಿಗಣಿಸಲಿದೆ ಎಂದು ಕಳವಳ ವ್ಯಕ್ತಪಡಿಸಿದರು.