ಮಾನವಿ: ಶಾಸಕರಭವನದ ಆವರಣದಲ್ಲಿ ಪುರಸಭೆ ಮಳಿಗೆಗಳ ಹಾಲಿ ಬಾಡಿಗೆದಾರರ ಒಕ್ಕೂಟದ ವತಿಯಿಂದ ಪುರಸಭೆ ಮಳಿಗೆಗಳ ಬಹಿರಂಗ ಹರಾಜನ್ನು ರದ್ದುಗೊಳಿಸುವಂತೆ ನಡೆಸುತ್ತಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಸ್ಥಳಕ್ಕೆ ತಹಸೀಲ್ದಾರ್ ಚಂದ್ರಕಾಂತ ಎಲ್.ಡಿ ಆಗಮಿಸಿ ಹಾಲಿ ಬಾಡಿಗೆ ದಾರರೊಂದಿಗೆ ಮಾತನಾಡಿ ತಾವು ಸಲ್ಲಿಸಿದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಕೊಡಲಾಗುವುದು ಹಾಗೂ ಜಿಲ್ಲಾಧಿಕಾರಿಗಳು ನೀಡುವ ಅದೇಶದಂತೆ ನಡೆದುಕೊಳ್ಳಲಾಗು ವುದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡುವವರೆಗೂ ಮಳಿಗೆಗಳಲ್ಲಿನ ವ್ಯಾಪಾರಸ್ಥರ ಮೇಲೆ ಯಾವುದೇ ಕ್ರಮ ಕೈಗೋಳುವುದಿಲ್ಲ. ಖಾಲಿ ಮಾಡುವಂತೆ ಒತ್ತಾಯ ಮಾಡಬಾರ ದೆಂದು ಪುರಸಭೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಆದರಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹವನ್ನು ಕೈಬಿಡುವಂತೆ ಹಾಲಿ ಬಾಡಿಗೆದಾರರ ಮನವೊಲಿಸಿದರು.
ಒಕ್ಕೂಟದ ಮುಖಂಡರಾದ ಪಿ.ತಿಪ್ಪಣ್ಣ ವಕೀಲರು ಮಾತನಾಡಿ ಕಳೆದ ೩೦ವರ್ಷಗಳಿಂದ ಪುರಸಭೆ ವಾಣಿಜ್ಯ ಮಳಿಗೆಗಳಲ್ಲಿ ಬಾಡಿಗೆ ಇರುವವರಿಗೆ ಮಳಿಗೆಗಳಲ್ಲಿ ವ್ಯಾಪರ ಮಾಡುವು ದಕ್ಕೆ ಅವಕಾಶ ನೀಡಬೇಕು. ಪುರಸಭೆ ಅಧಿಕಾರಿಗಳು ವiಳಿಗೆದಾರರಿಗೆ ಖಾಲಿ ಮಾಡುವಂತೆ ಒತ್ತಡ ಹಾಕುತ್ತಿರುವುದು ಸರಿಯಲ್ಲ. ಹಾಲಿ ಇರುವವರಿಗೆ ಮಳಿಗೆಯ ಬಾಡಿಗೆ ಹಾಗೂ ಠೇವಣಿಗಳಲ್ಲಿ ಕಡಿತ ಮಾಡಿ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾ.ಪಂ.ಇ.ಒ.ಅಣ್ಣರಾವ್ ನಾಯಕ,ಪಿ.ಐ.ಮಹಾದೇವಪ್ಪ ಪಂಚಮುಖಿ,ಗ್ರೇಡ್-೨ ತಹಸೀಲ್ದಾರ್ ಅಬ್ದುಲ್ ವಾಹಿದ್ ,ಪುರಸಭೆ ವ್ಯವಸ್ಥಾಪಕರಾದ ನರಸಿಂಹ ಹಾಗೂ ಸರ್ವಧರ್ಮ ಸಮಾಜ ಸೇವಕ ಹನುಮಂತಕೋಟೆ, ಪುರಸಭೆ ಮಳಿಗೆ ಗಳ ಹಾಲಿ ಬಾಡಿಗೆದಾರರು ಇದ್ದರು.